ಒಲಿಂಪಿಕ್ಸ್ ಪದಕ ವಿಜೇತ ಬಾಕ್ಸರ್ ಹೆಣ್ಣಲ್ಲ ಗಂಡು!

New Project
Published on

ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ನ ಮಹಿಳಾ ಬಾಕ್ಸಿಂಗ್‌ನಲ್ಲಿ ಚಿನ್ನದ ಪದಕ ಜಯಿಸಿರುವ ಅಲ್ಜೀರಿಯಾದ ಇಮಾನೆ ಖೇಲ್ಿ, ಹೆಣ್ಣಲ್ಲ ಗಂಡು ಎಂಬುದು ಪ್ರಸ್ತುತ ಸೋರಿಕೆಯಾಗಿರುವ ವೈದ್ಯಕೀಯ ವರದಿಯಲ್ಲಿ ಬಹಿರಂಗಗೊಂಡಿದೆ. ಒಲಿಂಪಿಕ್ಸ್‌ನಲ್ಲಿ ಲಿಂಗತ್ವಕ್ಕೆ ಸಂಬಂಧಿಸಿ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಇಮಾನೆ, ಪದಕ ಗೆದ್ದ ಬಳಿಕ ತಾನು ಹೆಣ್ಣು ಎಂದು ಸಮರ್ಥಿಸಿಕೊಂಡಿದ್ದರು.

2023ರಲ್ಲಿ ಪ್ಯಾರಿಸ್‌ನ ಕ್ರೆಮಿನ್ ಬಿಸೆಟ್ರೆ ಆಸ್ಪತ್ರೆಯಲ್ಲಿ ಸಿದ್ಧಪಡಿಸಿದ್ದ ವರದಿಯನ್ನು ್ರಾನ್ಸ್‌ನ ಪತ್ರಕರ್ತರೊಬ್ಬರು ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಈ ವರದಿಯ ಅನ್ವಯ ಇಮಾನೆ ಖೇಲ್ಿ ಲೈಂಗಿಕ ಬೆಳವಣಿಗೆ ಮೇಲೆ ಪರಿಣಾಮ ಬೀರುವ ಸ್ಥಿತಿಯನ್ನು ಹೊಂದಿದ್ದು, ಇದು ಅಸ್ಪಷ್ಟ ಜನನಾಂಗಕ್ಕೆ ಕಾರಣವಾಗುತ್ತದೆ ಮತ್ತು ಪುರುಷ ಗುಣಲಕ್ಷಣಗಳಿಗೆ ಸೀಮಿತಗೊಳಿಸುತ್ತದೆ. ಜತೆಗೆ ಗರ್ಭಾಶಯದ ಅನುಪಸ್ಥಿತಿ ಮತ್ತು ಸೂಕ್ಷ್ಮ ಶಿಶ್ನದ ಉಪಸ್ಥಿತಿಯನ್ನು ವಿವರಿಸಿದೆ. ಇಮಾನೆ ಅವರ ಆಂತರಿಕ ವೃಷಣಗಳು ಎಕ್ಸ್‌ವೈ ಕ್ರೋಮೊಸೋಮ್ ಅನ್ನು ಹೊಂದಿದ್ದು, ಇದು 5 ಅಲ್ಫಾ ರಿಡ್‌ಕ್ಟೇಸ್ ಕೊರತೆಯಿಂದ ಎಂದು ಕರೆಯಲ್ಪಡುವ ಅನುವಂಶಿಕ ಸ್ಥಿತಿಯನ್ನು ಸೂಚಿಸುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಷಯ ವೈರಲ್ ಆದ ಬೆನ್ನಲ್ಲೇ ಇಮಾನ್ ಗೆದ್ದಿರುವ ಚಿನ್ನದ ಪದಕವನ್ನು ವಾಪಸ್ ಪಡೆಯುವಂತೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್, ಒಲಿಂಪಿಕ್ಸ್ ಖಾತೆಯನ್ನು ಟ್ಯಾಗ್ ಮಾಡಿ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net