

ಚೆನ್ನೈ: ಯುವ ಗ್ರಾಂಡ್ ಮಾಸ್ಟರ್ ಡಿ.ಗುಕೇಶ್ ಈಗ ಅಧಿಕೃತವಾಗಿ ಭಾರತದ ಅಗ್ರ ಚೆಸ್ ಆಟಗಾರ ಎನಿಸಿದ್ದಾರೆ. ಇದರೊಂದಿಗೆ ಐದು ಬಾರಿಯ ವಿಶ್ವ ಚಾಂಪಿಯನ್ ಹಾಗೂ ದಿಗ್ಗಜ ವಿಶ್ವನಾಥನ್ ಆನಂದ್ ಅವರ 37 ವರ್ಷಗಳ ಪ್ರಾಬಲ್ಯವೂ ಅಂತ್ಯ ಕಂಡಿದೆ. 1986ರಿಂದ ಆನಂದ್ ಭಾರತದ ನಂ.1 ಚೆಸ್ ಆಟಗಾರ ಎನಿಸಿದ್ದರು.
17 ವರ್ಷದ ಗುಕೇಶ್ ಇತ್ತೀಚೆಗೆ ಮುಕ್ತಾಯಗೊಂಡ ಚೆಸ್ ವಿಶ್ವಕಪ್‌ನಲ್ಲಿ ಕ್ವಾರ್ಟರ್‌ೈನಲ್‌ಗೇರುವುದರೊಂದಿಗೆ, ಫಿಡೆ ವಿಶ್ವ ರ‌್ಯಾಂಕಿಂಗ್‌ನಲ್ಲಿ 8ನೇ ಸ್ಥಾನಕ್ಕೇರುವ ಮೂಲಕ, 2,754 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿದ್ದ ಆನಂದ್ ಅವರನ್ನು ಹಿಂದಿಕ್ಕುವುದು ಖಚಿತಗೊಂಡಿತ್ತು. ಅದರಂತೆ, ಶುಕ್ರವಾರ ಬಿಡುಗಡೆಗೊಂಡ ಪರಿಷ್ಕೃತ ನೂತನ ರ‌್ಯಾಂಕಿಂಗ್‌ನಲ್ಲಿ ಗುಕೇಶ್ 2,758 ರೇಟಿಂಗ್‌ನೊಂದಿಗೆ ಮೂರು ಸ್ಥಾನ ಏರಿಕೆ ಕಂಡಿದ್ದಾರೆ. ಚೆಸ್ ವಿಶ್ವಕಪ್ ರನ್ನರ್ ಅಪ್ ಆರ್. ಪ್ರಜ್ಞಾನಂದ 2,727 ಅಂಕಗಳೊಂದಿಗೆ 19ನೇ ಸ್ಥಾನದಲ್ಲಿದ್ದು, ಭಾರತದ ನಂ. 3 ಆಟಗಾರ ಎನಿಸಿದ್ದಾರೆ.
ಅಗ್ರ 30ರಲ್ಲಿ ಒಟ್ಟು ಐವರು ಭಾರತೀಯರು ಸ್ಥಾನ ಪಡೆದುಕೊಂಡಿದ್ದಾರೆ. ವಿದಿತ್ ಸಂತೋಷ್ ಗುಜರಾತಿ (27), ಅರ್ಜುನ್ ಇರಿಗೈಸಿ (29) ಇತರ ಇಬ್ಬರೂ ಆಟಗಾರರು. ಆಗಸ್ಟ್‌ನಲ್ಲಿ ತನ್ನ ಮೆಂಟರ್ ವಿಶ್ವನಾಥನ್ ಆನಂದ್ ಅವರನ್ನು ಹಿಂದಿಕ್ಕಿದ ಗುಕೇಶ್ ಭಾರತದ ನಂ.1 ಚೆಸ್ ಆಟಗಾರ ಎನಿಸಿದ್ದರು ಈಗ ಅಧಿಕೃತಗೊಂಡಿದೆ. ಗುಕೇಶ್ ಹಾಗೂ ಪ್ರಜ್ಞಾನಂದ ಸೆ.5 ರಂದು ಕೋಲ್ಕತದಲ್ಲಿ ಆರಂಭವಾಗಲಿರುವ ಟಾಟಾ ಸ್ಟೀಲ್ ಚೆಸ್ ಇಂಡಿಯಾ ಟೂರ್ನಮೆಂಟ್‌ನಲ್ಲಿ ಭಾಗವಹಿಸಲಿದ್ದಾರೆ.