ಹಾರ್ದಿಕ್ ಪಾಂಡ್ಯ ಪುತ್ರನಿಗೆ ಬೆಂಗಳೂರಿನಿಂದ ವಿಶೇಷ ಉಡುಗೊರೆ!

hardik pandy son car
Published on

ಬೆಂಗಳೂರು: ಐಪಿಎಲ್ ಮೂಲಕ ಮರಳಿ ಕ್ರಿಕೆಟ್ ಮೈದಾನಕ್ಕೆ ಇಳಿಯಲು ಸಜ್ಜಾಗುತ್ತಿರುವ ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಪುತ್ರನಿಗೆ ಬೆಂಗಳೂರಿನಿಂದ ವಿಶೇಷವಾದ ಉಡುಗೊರೆಯೊಂದು ಹೋಗಿದೆ. ಜತೆಗೆ ಹಾರ್ದಿಕ್ ಪಾಂಡ್ಯ ಪುತ್ರನ ಹೆಸರು ಕೂಡ ಖಚಿತಗೊಂಡಿದೆ.

ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ದಂಪತಿಗೆ ಜುಲೈ 31ರಂದು ಪುತ್ರ ಜನಿಸಿದ್ದ. ‘ನನ್ನ ಜೀವನದ ಶ್ರೇಷ್ಠ ಉಡುಗೊರೆ’ ಎಂದು ಹಾರ್ದಿಕ್ ಪಾಂಡ್ಯ ಸಾಮಾಜಿಕ ಜಾಲತಾಣದಲ್ಲಿ ನತಾಶಾಗೆ ಧನ್ಯವಾದವನ್ನೂ ಹೇಳಿದ್ದರು. ಇದೀಗ ಅವರ ಪುತ್ರನಿಗೂ ಮೊದಲ ಉಡುಗೊರೆ ದೊರೆಗಿದೆ. ಅದುವೇ ಪುಟ್ಟ ಕಾರು! ಬೆಂಗಳೂರಿನ ಮರ್ಸಿಡೀಸ್-ಎಎಂಜಿ ಕಾರು ಡೀಲರ್‌ಶಿಪ್ ಸಂಸ್ಥೆಯಿಂದ ಈ ಪುಟ್ಟ ಕಾರು ಉಡೊಗೊರೆಯಾಗಿ ದೊರೆತಿದೆ.

ಇನ್‌ಸ್ಟಾಗ್ರಾಂ ಸ್ಟೇಟಸ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಹಾರ್ದಿಕ್ ಪಾಂಡ್ಯ, ‘ಅಗಸ್ತ್ಯನ ಮೊದಲ ಎಎಂಜಿಗಾಗಿ (ಕಾರು) ಎಎಂಜಿ ಬೆಂಗಳೂರಿಗೆ ಧನ್ಯವಾದಗಳು’ ಎಂದಿದ್ದಾರೆ. ಜತೆಗೆ ಪುಟ್ಟ ಕಾರಿನ ಮೇಲೆ ಕುಳಿತಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಇದರ ಜತೆಜತೆಯಲ್ಲೇ, ಈ ಹಿಂದೆಯೇ ಊಹಿಸಿದಂತೆ ಪುತ್ರನ ಹೆಸರು ಅಗಸ್ತ್ಯ ಎಂಬುದನ್ನೂ ಹಾರ್ದಿಕ್ ಪಾಂಡ್ಯ ದೃಢಪಡಿಸಿದಂತಾಗಿದೆ. ಮುಂಬರುವ ಐಪಿಎಲ್‌ನಲ್ಲಿ ಅವರು ಮುಂಬೈ ಇಂಡಿಯನ್ಸ್ ತಂಡದ ಪರ ಕಣಕ್ಕಿಳಿಯಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net