TENNIS: ಸೆರೇನಾ ವಿಲಿಯಮ್ಸ್​ 4 ವರ್ಷಗಳ ಬಳಿಕ ಗೆಲುವಿನ ಪುನರಾಗಮನ

TENNIS: ಸೆರೇನಾ ವಿಲಿಯಮ್ಸ್​ 4 ವರ್ಷಗಳ ಬಳಿಕ ಗೆಲುವಿನ ಪುನರಾಗಮನ
TENNIS: ಸೆರೇನಾ ವಿಲಿಯಮ್ಸ್​ 4 ವರ್ಷಗಳ ಬಳಿಕ ಗೆಲುವಿನ ಪುನರಾಗಮನ
Published on
ಲಂಡನ್​: ಅಮೆರಿಕದ 23 ಗ್ರಾಂಡ್​ ಸ್ಲಾಂ ಸಿಂಗಲ್ಸ್​ ಪ್ರಶಸ್ತಿಗಳ ಒಡತಿ ಸೆರೇನಾ ವಿಲಿಯಮ್ಸ್​ (Serena Williams) 4 ವರ್ಷಗಳ (1,375 ದಿನ) ಬಳಿಕ ವೃತ್ತಿಪರ ಟೆನಿಸ್​ಗೆ ಗೆಲುವಿನ ಪುನರಾಗಮನ ಕಂಡಿದ್ದಾರೆ. 44 ವರ್ಷದ ಸೆರೇನಾ ಕ್ವೀನ್ಸ್​ ಕ್ಲಬ್​ ಟೆನಿಸ್​ (Tennis) ಟೂರ್ನಿಯ ಡಬಲ್ಸ್​ ವಿಭಾಗದಲ್ಲಿ ಕೆನಡಾದ 19 ವರ್ಷದ ವಿಕ್ಟೋರಿಯಾ ಎಂಬೋಕೊ ಜತೆ ಶುಭಾರಂಭ ಮಾಡಿದರು.

25 ವರ್ಷಗಳ ಅಂತರವಿರುವ ಸೆರೇನಾ-ಎಂಬೋಕೊ ಜೋಡಿ ಮೊದಲ ಸುತ್ತಿನಲ್ಲಿ 3ನೇ ಶ್ರೇಯಾಂಕಿತ ಅಮೆರಿಕದ ನಿಕೋಲ್​ ಮೆಲಿಚರ್​ ಮಾರ್ಟಿನೆಜ್​ ಮತ್ತು ನ್ಯೂಜಿಲೆಂಡ್​ನ ಎರಿನ್​ ರೌಟ್​ಲಿಫ್​ ಜೋಡಿಯನ್ನು 7-6, 6-2 ನೇರಸೆಟ್​ಗಳಿಂದ ಮಣಿಸಿತು. ಪಂದ್ಯದಲ್ಲಿ ಸೆರೇನಾ ಗಂಟೆಗೆ 120 ಮೈಲಿ ವೇಗದ ಸರ್ವ್​ ಮಾಡಿ ಗಮನಸೆಳೆದರು.

2022ರ ಯುಎಸ್​ ಓಪನ್​ ಬಳಿಕ ಅವರು ಆಡಿದ ಮೊದಲ ವೃತ್ತಿಪರ ಪಂದ್ಯ ಇದಾಗಿದೆ. ಸೆರೇನಾ ಮುಂದಿನ ವಾರ ಜರ್ಮನಿಯಲ್ಲಿ ಬರ್ಲಿನ್​ ಓಪನ್​ನಲ್ಲೂ ಆಡಲಿದ್ದಾರೆ. ಜೂನ್​ 29ರಿಂದ ನಡೆಯಲಿರುವ ವಿಂಬಲ್ಡನ್​ಗೆ ಅವರು ವೈಲ್ಡ್​ ಕಾರ್ಡ್​ ಪಡೆಯುವ ನಿರೀಕ್ಷೆಯೂ ಇದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net