ಎಸ್.ಎಂ. ಕೃಷ್ಣ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಶ್ರೀವಲ್ಲಿ ರಶ್ಮಿಕಾ ಮಾಲ್ಟಾದ ಫ್ರಾನ್ಸೆಸ್ಕಾ ಕುರ್ಮಿ ವಿರುದ್ಧ 7-6, 6-4 ನೇರಸೆಟ್ಗಳಿಂದ ಗೆಲುವು ಸಾಧಿಸಿದರು. ಈ ಮೂಲಕ ಪ್ರಿ ಕ್ವಾರ್ಟರ್ಫೈನಲ್ಗೇರಿದ ಭಾರತದ 3ನೇ ಆಟಗಾರ್ತಿ ಎನಿಸಿದರು. ಸಹಜಾ ಯಮಲಪಲ್ಲಿ ಮತ್ತು ವೈಷ್ಣವಿ ಅಡ್ಕರ್ ಪ್ರಧಾನ ಸುತ್ತಿನ ಮೊದಲ ದಿನ ಈ ಸಾಧನೆ ಮಾಡಿದ್ದರು.
ಮಾಯಾ ರಾಜೇಶ್ವರ್ 5ನೇ ಶ್ರೇಯಾಂಕಿತೆ ರಷ್ಯಾದ ಪೊಲಿನಾ ಲಾಟ್ಚೆಂಕೊ ವಿರುದ್ಧ 1-6, 6-1, 0-6ರಿಂದ ಸೋತರೆ, ವೈದೇಹಿ ಆಸ್ಟ್ರೆಲಿಯಾದ ತಾಲಿಯಾ ಗಿಬ್ಸನ್ ಎದುರು 4-6, 0-6ರಿಂದ ಶರಣಾದರು.