ಕರ್ನಾಟಕ ಪಿಕಲ್‌ಬಾಲ್ ಪ್ರೀಮಿಯರ್ ಲೀಗ್ಗೆ ಚಾಲನೆ; ಶ್ರೀಮುರಳಿ ರಾಯಭಾರಿ
ಚೊಚ್ಚಲ ಪಿಕಲ್‌ಬಾಲ್ ಪ್ರೀಮಿಯರ್ ಲೀಗ್‌ನ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡ ನಟ ಶ್ರೀಮುರಳಿ, (ಎಡಭಾಗದಿಂದ) ಕೆಎಸ್‌ಪಿಎ ಉಪಾಧ್ಯಕ್ಷ ಶ್ರೀನಿವಾಸ್, ಅಧ್ಯಕ್ಷ ಶಿವಕುಮಾರ್, ಎಂಟ್ರೋಪಿ ಸ್ಪೋರ್ಟ್ಸ್ ಅಧ್ಯಕ್ಷ ಅನಿಲ್ ಕುಮಾರ್, ಕೆಎಸ್‌ಪಿಎ ಪ್ರಧಾನ ಕಾರ್ಯದರ್ಶಿ ರಜತ್ ಕಾಂಕರ್ ಹಾಗೂ ಆಯೋಜಕರಾದ ಆಶೀಶ್ ಸ್ವರ್ಣಾಂಕರ್.
Published on:
Copied
Follow Us
ಬೆಂಗಳೂರು: ಕರ್ನಾಟಕ ರಾಜ್ಯ ಪಿಕಲ್‌ಬಾಲ್ ಸಂಸ್ಥೆ (ಕೆಎಸ್‍ಪಿಎ) ಹಾಗೂ ಎಂಟ್ರೋಪಿ ಸ್ಪೋರ್ಟ್ಸ್ ಆಂಡ್ ಈವೆಂಟ್ಸ್ ಸಹಯೋಗದಲ್ಲಿ ರಾಜ್ಯದ ಚೊಚ್ಚಲ (karnataka pickleball premier league) 'ಕರ್ನಾಟಕ ಪಿಕಲ್‌ಬಾಲ್ ಪ್ರೀಮಿಯರ್ ಲೀಗ್' (ಕೆಪಿಪಿಎಲ್) ತಂಡಗಳನ್ನು ಸೋಮವಾರ ಬೆಂಗಳೂರಿನಲ್ಲಿ ಅನಾವರಣಗೊಳಿಸಲಾಯಿತು. ಈ ಕೂಟಕ್ಕೆ ನಟ ಶ್ರೀಮುರಳಿ ಅವರನ್ನು ಪ್ರಚಾರ ರಾಯಭಾರಿಯಾಗಿ ಘೋಷಿಸಲಾಗಿದ್ದು, ಲೀಗ್‌ನ ಮೊದಲ ಆವೃತ್ತಿಯು ಅಕ್ಟೋಬರ್ 9 ರಿಂದ 11 ರವರೆಗೆ ನಡೆಯಲಿದೆ.
ಲೀಗ್‌ನಲ್ಲಿ ಸೆಣಸಲಿರುವ 7 ತಂಡಗಳು:
* ಬೆಂಗಳೂರು ಸ್ಮ್ಯಾಷರ್ಸ್
* ಕೂರ್ಗ್ ಒರಿಜಿನಲ್ಸ್
* ಮಂಗಳೂರು ರೋರರ್ಸ್
* ಮೈಸೂರು ರಾಯಲ್ಸ್
* ಶಿವಮೊಗ್ಗ ಮಾಸ್ಟರ್ ಬ್ಲಿಸ್
* ತುಮಕೂರು ಟೈಟಾನ್ಸ್
* ಬಳ್ಳಾರಿ ಟಸ್ಕರ್ಸ್
ರಾಜ್ಯದಲ್ಲಿ ಪಿಕಲ್‌ಬಾಲ್ ಕ್ರೀಡೆಯನ್ನು ತಳಮಟ್ಟದಿಂದ ಬೆಳೆಸಲು ಮತ್ತು ಕ್ರೀಡಾಪಟುಗಳಿಗೆ ವೃತ್ತಿಪರ ವೇದಿಕೆ ಕಲ್ಪಿಸಲು ಈ ಲೀಗ್ ನೆರವಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.