ಟೆನಿಸ್​ ಹಾಲ್​ ಆಫ್​ ಫೇಮ್​ಗೆ ರೋಜರ್​ ಫೆಡರರ್​ ಸೇರ್ಪಡೆ

ಟೆನಿಸ್​ ಹಾಲ್​ ಆಫ್​ ಫೇಮ್​ಗೆ ರೋಜರ್​ ಫೆಡರರ್​ ಸೇರ್ಪಡೆ
ಟೆನಿಸ್​ ಹಾಲ್​ ಆಫ್​ ಫೇಮ್​ಗೆ ರೋಜರ್​ ಫೆಡರರ್​ ಸೇರ್ಪಡೆ
Published on

ನ್ಯೂಪೋರ್ಟ್​: ಸ್ವಿಸ್​ ದಿಗ್ಗಜ ರೋಜರ್ ಫೆಡರರ್ (

Roger Federer

)​ ಅಂತಾರಾಷ್ಟ್ರೀಯ ಟೆನಿಸ್​ ಹಾಲ್​ ಆಫ್​ ಫೇಮ್​ಗೆ (

International Tennis Hall of Fame

) ಶನಿವಾರ ಸೇರ್ಪಡೆಯಾಗಿದ್ದಾರೆ. ನ್ಯೂಪೋರ್ಟ್​ನಲ್ಲಿ ನಡೆದ ಈ ಐತಿಹಾಸಿಕ ಸಮಾರಂಭದ ವೇಳೆ 45 ವರ್ಷದ ಫೆಡರರ್​ ಭಾವುಕರಾದರು.


ದಾಖಲೆಯ 310 ವಾರಗಳ ಕಾಲ ವಿಶ್ವ ನಂ. 1 ಆಟಗಾರರಾಗಿದ್ದ ಫೆಡರರ್​, 20 ಗ್ರಾಂಡ್​ ಸ್ಲಾಂಗಳ ಸಹಿತ ಒಟ್ಟು 103 ಪ್ರಶಸ್ತಿಗಳ ಒಡೆಯರಾಗಿದ್ದಾರೆ. ಈ ಪೈಕಿ ವಿಂಬಲ್ಡನ್​ನಲ್ಲಿ ಸರ್ವಾಧಿಕ 8 ಬಾರಿ ಚಾಂಪಿಯನ್​ ಪಟ್ಟವೇರಿದ್ದರು.

ಹಾಲ್​ ಆಫ್​ ಫೇಮ್​ ಸೇರ್ಪಡೆಯ ಬಗ್ಗೆ ಅಪಾರ ಸಂತಸ ವ್ಯಕ್ತಪಡಿಸಿದ ಫೆಡರರ್​, "ಇದು ನನ್ನ ಜೀವನದ ಅತ್ಯುನ್ನತ ಗೌರವವಾಗಿದೆ' ಎಂದರು. ಫೆಡರರ್​ ಪತ್ನಿ ಮಿರ್ಕಾ ಫೆಡರರ್​ ಕೂಡ ಈ ಕ್ಷಣಕ್ಕೆ ಸಾಕ್ಷಿಯಾಗಿದ್ದರು. 1998ರಲ್ಲಿ 16ನೇ ವಯಸ್ಸಿನಲ್ಲೇ ವೃತ್ತಿಪರ ಟೆನಿಸ್​ಗೆ ಪದಾರ್ಪಣೆ ಮಾಡಿದ್ದ ಫೆಡರರ್​ 2022ರಲ್ಲಿ ನಿವೃತ್ತರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net