ಭಾನುವಾರ ಪುರುಷರ ಸಿಂಗಲ್ಸ್ ಫೈನಲ್ಗೆ ಮುನ್ನ ನಡೆದ ಮಹಿಳಾ ಡಬಲ್ಸ್ ಪ್ರಶಸ್ತಿ ಕಾದಾಟದಲ್ಲಿ 10ನೇ ಶ್ರೇಯಾಂಕಿತ ಕ್ರಿಸ್ಟಿನಾ-ಗುವೋ ಜೋಡಿ 6-3, 7-5ರಿಂದ 2ನೇ ಶ್ರೇಯಾಂಕಿತ ಕೆನಡಾದ ಗ್ಯಾಬ್ರಿಯೆಲಾ ಡಬ್ರೋವ್ಸ್ಕಿ ಮತ್ತು ಬ್ರೆಜಿಲ್ನ ಲೂಯಿಸಾ ಸ್ಟೆಾನಿ ಜೋಡಿಗೆ ಆಘಾತಕಾರಿ ಸೋಲುಣಿಸಿತು. ಪಂದ್ಯದ ಆರಂಭದಿಂದಲೇ ಸಂಪೂರ್ಣ ನಿಯಂತ್ರಣ ಸಾಧಿಸಿದ ಕ್ರಿಸ್ಟಿನಾ-ಗುವೋ ಜೋಡಿ, ಒಂದು ಗಂಟೆ, 32 ನಿಮಿಷಗಳಲ್ಲಿ ಗೆಲುವು ಒಲಿಸಿಕೊಂಡಿತು.