ವರ್ಲ್ಡ್ ಟೆನಿಸ್ ಲೀಗ್ ಕಿರೀಟ ಮುಡಿಗೇರಿಸಿಕೊಂಡ ಮೇವರಿಕ್ಸ್​ ಕೈಟ್ಸ್​

ವರ್ಲ್ಡ್ ಟೆನಿಸ್ ಲೀಗ್ ಕಿರೀಟ ಮುಡಿಗೇರಿಸಿಕೊಂಡ ಮೇವರಿಕ್ಸ್​ ಕೈಟ್ಸ್​
ವರ್ಲ್ಡ್ ಟೆನಿಸ್ ಲೀಗ್ ಕಿರೀಟ ಮುಡಿಗೇರಿಸಿಕೊಂಡ ಮೇವರಿಕ್ಸ್​ ಕೈಟ್ಸ್​
Published on
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ವರ್ಲ್ಡ್​ ಟೆನಿಸ್​ ಲೀಗ್​ (World Tennis League) ನಾಲ್ಕನೇ ಆವೃತ್ತಿಯಲ್ಲಿ ಆಸ್ಸಿ ಮೇವರಿಕ್ಸ್​ ಕೈಟ್ಸ್​ ತಂಡ ಚಾಂಪಿಯನ್​ ಆಗಿ ಹೊರಹೊಮ್ಮಿದೆ. ಕರ್ನಾಟಕ ರಾಜ್ಯ ಲಾನ್​ ಟೆನಿಸ್​ ಸಂಸ್ಥೆಯ (ಕೆಎಸ್​ಎಲ್​ಟಿ) ಎಸ್​.ಎಂ. ಕೃಷ್ಣ ಟೆನಿಸ್​ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಫೈನಲ್​ ಪಂದ್ಯದಲ್ಲಿ ಆಸ್ಸಿ ಮೇವರಿಕ್ಸ್​ ಕೈಟ್ಸ್​ ತಂಡ 22-19 ಅಂಕಗಳ ಅಂತರದಿಂದ ಎಒಎಸ್​ ಈಗಲ್ಸ್​ ತಂಡವನ್ನು ಮಣಿಸಿತು. ಮೊದಲ ಬಾರಿಗೆ ಟೂರ್ನಿಯನ್ನು ಭಾರತದಲ್ಲಿ ಆಯೋಜಿಸಲಾಗಿತ್ತು.

ಪ್ರಶಸ್ತಿ ಕಾದಾಟದ ಮೊದಲ ಪಂದ್ಯದಲ್ಲಿ ಮೇವರಿಕ್ಸ್​ ಕೈಟ್​ ತಂಡ ಮಾರ್ಟಾ ಕೊಸ್ಟಕ್​ 6-4ರಿಂದ ಈಗಲ್ಸ್​ನ ಶ್ರೀವಲ್ಲಿ ಭಮಿಡಿಪಟಿ ಎದುರು ಗೆದ್ದು, ಮೇಲುಗೈ ಒದಗಿಸಿದರು. ಮಿಶ್ರ ಡಬಲ್ಸ್​ನಲ್ಲಿ ಈಗಲ್ಸ್​ನ ಶ್ರೀವಲ್ಲಿ&ಗೇಲ್​ ಮಾನ್​ಫೀಲ್ಸ್​ 6-3ರಿಂದ ಕೈಟ್ಸ್​ನ ಮಾರ್ಟಾ ಕೊಸ್ಟಕ್​-ದಕ್ಷಿಣೇಶ್ವರ ಸುರೇಶ್ (Dhakshineswar Suresh)​ ಜೋಡಿಯನ್ನು ಮಣಿಸಿದರು. ಪುರುಷರ ಡಬಲ್ಸ್​ನಲ್ಲಿ ಭಾರತ ದ ನಂ.1 ಸುಮಿತ್​ ನಗಾಲ್​-ಗೇಲ್​ ಮಾನ್​ಫೀಲ್ಸ್​ ಜೋಡಿ 3-6ರಿಂದ ಕೈಟ್ಸ್​ನ ನಿಕ್​ ರ್ಕಿಗಿಯೋಸ್-ದಕ್ಷಿಣೇಶ್ವರ ಸುರೇಶ್​ ಎದುರು ಪರಾಭವಗೊಂಡಿತು. ಅಂತಿಮ ಹಾಗೂ ನಿರ್ಣಾಯಕ ಸಿಂಗಲ್ಸ್​ ಪಂದ್ಯದಲ್ಲಿ ದಣೇಶ್ವರ ಸುರೇಶ್​, ಸುಮಿತ್​ ನಗಾಲ್​ರನ್ನು (Sumit Nagal) ರೋಚಕ ಕಾದಾಟದಲ್ಲಿ 7-6 ರಿಂದ ಮಣಿಸಿ, ಮೇವರಿಕ್ಸ್​ ಕೈಟ್ಸ್​ಗೆ ಪ್ರಶಸ್ತಿ ಖಾತ್ರಿಪಡಿಸಿದರು.

ಟೀಮ್​ ಇಂಡಿಯಾ ಆಟಗಾರ ಹಾಗೂ ಕನ್ನಡಿಗ ಕೆಎಲ್​ ರಾಹುಲ್ ಫೈನಲ್​ ಪಂದ್ಯದ ವೇಳೆ ಟೆನಿಸ್​ ಆಡಿ ಪ್ರೇಕ್ಷಕರನ್ನು ರಂಜಿಸಿದರು. ಮಾಜಿ ಟೆನಿಸ್​ ಆಟಗಾರ ಮಹೇಶ್​ ಭೂಪತಿ, ರೋಹನ್​ ಬೋಪಣ್ಣ ಸಹ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net