ಎಸ್.ಎಂ. ಕೃಷ್ಣ ಟೆನಿಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಗುರುವಾರ ನಡೆದ ಕಾದಾಟದಲ್ಲಿ ವಿಶ್ವ ನಂ. 1,322 ಕ್ರಿಷ್ ತ್ಯಾಗಿ 7-6, 5-7, 6-4 ಸೆಟ್ಗಳಿಂದ ವಿಶ್ವ ನಂ. 328 ಹಮಿಷ್ ಸ್ಟೀವರ್ಟ್ಗೆ ಆಘಾತಕಾರಿ ಸೋಲುಣಿಸಿ ಗಮನಸೆಳೆದರು. ಕ್ರಿಷ್ ತ್ಯಾಗಿ ವೃತ್ತೀಜಿವನದಲ್ಲಿ ಇದುವರೆಗೆ ಸೋಲುಣಿಸಿದ ಅತ್ಯಂತ ಉನ್ನತ ರ್ಯಾಂಕ್ ಆಟಗಾರ ಸ್ಟೀವರ್ಟ್ ಆಗಿದ್ದಾರೆ. ಈ ಮೂಲಕ ಎಟಿಪಿ ಚಾಲೆಂಜರ್ನಲ್ಲಿ ಮೊದಲ ಬಾರಿ ಉಪಾಂತ್ಯಕ್ಕೇರಿದ್ದಾರೆ. ಅವರು ಪ್ರಶಸ್ತಿ ಸುತ್ತಿಗೇರಲು 4ನೇ ಶ್ರೇಯಾಂಕಿತ ಹಾಗೂ ವಿಶ್ವ ನಂ. 357 ಆಸ್ಟ್ರೆಲಿಯಾದ ಫಿಲಿಪ್ ಸೆಕುಲಿಕ್ ವಿರುದ್ಧ ಸೆಣಸಲಿದ್ದಾರೆ.