ಎಸ್​ಎಂ ಕೃಷ್ಣ ಸ್ಮಾರಕ ಓಪನ್​ ಟೆನಿಸ್​: ಪ್ರಧಾನ ಸುತ್ತಿಗೇರಿದ ಕನ್ನಡಿಗ ಆರಾಧ್ಯ ಕ್ಷಿತಿಜ್​

ಎಸ್​ಎಂ ಕೃಷ್ಣ ಸ್ಮಾರಕ ಓಪನ್​ ಟೆನಿಸ್​: ಪ್ರಧಾನ ಸುತ್ತಿಗೇರಿದ ಕನ್ನಡಿಗ ಆರಾಧ್ಯ ಕ್ಷಿತಿಜ್​
ಎಸ್​ಎಂ ಕೃಷ್ಣ ಸ್ಮಾರಕ ಓಪನ್​ ಟೆನಿಸ್​: ಪ್ರಧಾನ ಸುತ್ತಿಗೇರಿದ ಕನ್ನಡಿಗ ಆರಾಧ್ಯ ಕ್ಷಿತಿಜ್​
Published on
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಬೆಂಗಳೂರಿನ 17 ವರ್ಷದ ಆಟಗಾರ ಆರಾಧ್ಯ ಕ್ಷಿತಿಜ್ (Aradhya Kshitij)​ ಎರಡನೇ ಆವೃತ್ತಿಯ ಎಸ್​ಎಂ ಕೃಷ್ಣ ಸ್ಮಾರಕ ಓಪನ್ (SM Krishna Memorial Open)​ ಎಟಿಪಿ ಚಾಲೆಂಜರ್​ ಟೆನಿಸ್​ ಟೂರ್ನಿಯಲ್ಲಿ ಪ್ರಧಾನ ಸುತ್ತಿಗೇರುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಧಾನ ಸುತ್ತಿನ ಮೊದಲ ದಿನದ 5 ಸಿಂಗಲ್ಸ್​ ಮತ್ತು ಒಂದು ಡಬಲ್ಸ್​ ಪಂದ್ಯ ಉದ್ಯಾನನಗರಿಯಲ್ಲಿ ಸೋಮವಾರ ಸುರಿದ ಮಳೆಯಿಂದಾಗಿ ಮಂಗಳವಾರಕ್ಕೆ ಮುಂದೂಡಲ್ಪಟ್ಟವು.

ಎಸ್​ಎಂ ಕೃಷ್ಣ ಟೆನಿಸ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೂರ್ನಿಯ ಅರ್ಹತಾ ಸುತ್ತಿನ ಎರಡನೇ ದಿನದ ಪಂದ್ಯದಲ್ಲಿ ವೈಲ್ಡ್​ಕಾರ್ಡ್​ ಆಟಗಾರ ಆರಾಧ್ಯ ಕ್ಷಿತಿಜ್​ 7-6, 6-4 ನೇರಸೆಟ್​ಗಳಿಂದ 8ನೇ ಶ್ರೇಯಾಂಕಿತ ದೇಶಬಾಂಧವ ನಿತಿನ್​ ಕುಮಾರ್​ ಸಿನ್ಹಾ ವಿರುದ್ಧ ಗೆದ್ದು ಪ್ರಧಾನ ಸುತ್ತಿಗೇರಿದರು. ಅರ್ಹತಾ ಸುತ್ತಿನ ಕೊನೇ ಪಂದ್ಯದಲ್ಲಿ ಆಡಿದ ಮತ್ತೋರ್ವ ಭಾರತೀಯ ದೇವ್​ ಜಾವಿಯಾ 4-6, 6-7ರಿಂದ ಥಾಯ್ಲೆಂಡ್​ನ ಥನಪೆಟ್​ ಚಾಂಟಾ ವಿರುದ್ಧ ಸೋತು ಹೊರಬಿದ್ದರು.
ಮಧ್ಯಾಹ್ನದ ನಂತರ ಸುರಿದ ಮಳೆಯಿಂದಾಗಿ ಪ್ರಧಾನ ಸುತ್ತಿನಲ್ಲಿ ಯಾವ ಪಂದ್ಯವೂ ಪೂರ್ಣಗೊಳ್ಳಲಿಲ್ಲ. 7ನೇ ಶ್ರೇಯಾಂಕಿತ ಭಾರತದ ಕರಣ್​ ಸಿಂಗ್​ ಮಲೇಷ್ಯಾದ ಮಿತ್ಸುಕಿ ವೀ ಕಾಂಗ್​ ವಿರುದ್ಧ ಮೊದಲ ಸೆಟ್​ನಲ್ಲಿ 5-5 ಸಮಬಲದಲ್ಲಿದ್ದಾಗ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿತು. ಮುಕುಂದ್​ ಶಶಿಕುಮಾರ್​ ಮತ್ತು ದಿಗ್ವಿಜಯ್​ ಪ್ರತಾಪ್​ ಸಿಂಗ್​ ಅವರ ಪಂದ್ಯಗಳು ಶುರುವಾಗಲೇ ಇಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net