ಚಾಂಪಿಯನ್‌ಷಿಪ್ ಮುಂದುವರೆದಂತೆ, ಮಹಾರಾಷ್ಟ್ರ, ಗುಜರಾತ್, ತೆಲಂಗಾಣ ಮತ್ತು ರಾಜಸ್ಥಾನ ವಯೋಮಾನದ ಗುಂಪುಗಳಲ್ಲಿನಿರ್ಣಾಯಕ ಗೆಲುವು ಸಾಧಿಸಿದರೆ, ಕರ್ನಾಟಕವು ತವರಿನ ಮೈದಾನದಲ್ಲಿಸ್ಪರ್ಧಾತ್ಮಕ ಪಂದ್ಯಗಳಿಗೆ ಸಾಕ್ಷಿಯಾಯಿತು. ಸಿಂಗಲ್ಸ್ ಮತ್ತು ಡಬಲ್ಸ್ ಎರಡರಲ್ಲೂಪ್ರಬಲ ಪ್ರದರ್ಶನ ನೀಡಿದ ಕರ್ನಾಟಕ ತಂಡವು ಜಿದ್ದಾಜಿದ್ದಿನ ಪಂದ್ಯಗಳ ಕೇಂದ್ರಬಿಂದುವಾಗಿತ್ತು. ಮಹಾರಾಷ್ಟ್ರವು ಜೂನಿಯರ್ ಸ್ಪರ್ಧೆಗಳಲ್ಲಿಭರ್ಜರಿ ಗೆಲುವುಗಳೊಂದಿಗೆ ತನ್ನ ಪ್ರಾಬಲ್ಯವನ್ನು ವಿಸ್ತರಿಸಿದರೆ, ಗುಜರಾತ್ 18 ವರ್ಷದೊಳಗಿ ನವರ ಮತ್ತು 21 ವರ್ಷ ದೊಳಗಿನವರ ವಿಭಾಗಗಳಲ್ಲಿ ಪ್ರಮುಖ ಗೆಲುವುಗಳನ್ನು ಸಾಧಿಸುವ ಮೂಲಕ ಮೊದಲ ದಿನದಿಂದ ತನ್ನ ಮೇಲ್ಮುಖ ಪಥವನ್ನು ಮುಂದುವರಿಸಿತು.