ಪತ್ನಿಗೆ ಹೊಡೆದು ಸಂಕಷ್ಟಕ್ಕೆ ಸಿಲುಕಿದ ಟೆನಿಸ್ ಆಟಗಾರ

tennis player_web-2
Published on

ಟಬ್ಲಿಸಿ: ಪತಿ-ಪತ್ನಿ ಕಲಹಕ್ಕೆ ಯಾವುದೇ ಅಂತಸ್ತು ಬೇಕಿಲ್ಲ. ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯನೂ ಇದಕ್ಕೆ ಹೊರತಾಗಿಲ್ಲ. ಇದೀಗ ಇಂಥ ಆರೋಪಕ್ಕೆ ಗುರಿಯಾಗಿದ್ದಾರೆ ಜಾರ್ಜಿಯಾದ ಸ್ಟಾರ್ ಟೆನಿಸ್ ಆಟಗಾರ. ಮಾಜಿ ಪತ್ನಿಗೆ ಹಲ್ಲೆ ಮಾಡಿದ ಆರೋಪದಡಿ ವಿಶ್ವ ನಂ.27 ನಿಕೊಲೊಜ್ ಬಾಸಿಲಾಶ್ವಿಲಿರನ್ನು ಬಂಧಿಸಿದ ಪೊಲೀಸರು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

ಜೈಲು ಶಿಕ್ಷೆ ಭೀತಿಯಲ್ಲಿ ಆಟಗಾರ
ಮಗುವಿನ ಎದುರೇ ಪತ್ನಿ ಮೇಲೆ ಹಲ್ಲೆ ಮಾಡಿದ ನಿಕೊಲೊಜ್ ವಿರುದ್ಧ ಕೋರ್ಟ್ ಗರಂ ಆಗಿದೆ. ಜತೆಗೆ 22.73 ಲಕ್ಷ ರೂಪಾಯಿ (27,500 ಯುರೋಸ್) ದಂಡ ವಿಧಿಸಿ ಜಾಮೀನು ನೀಡಿದೆ. ಒಂದು ಪ್ರಕರಣ ಸಾಬೀತಾದಲ್ಲಿ ನಿಕೊಲೊಜ್‌ಗೆ ಮೂರು ವರ್ಷ ಜೈಲು ಶಿಕ್ಷೆಯಾಗಲಿದೆ. ಮಾಜಿ ಪತ್ನಿಗೆ 5 ವರ್ಷದ ಮಗನ ಎದುರೇ ಭಾನುವಾರ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಆದರೆ, ಹಲ್ಲೆ ಆರೋಪ ಕುರಿತು ಪ್ರತಿಕ್ರಿಯಿಸಿರುವ ನಿಕೊಲೊಜ್ ವಕೀಲರು, ಇದು ಸಂಪೂರ್ಣ ಷಡ್ಯಂತ್ರ. ಹಲ್ಲೆ ಆರೋಪವನ್ನು ನಿರಾಕರಿಸಿದ್ದಾರೆ.

ಇದನ್ನೂ ಓದಿ: ಹಾಕಿ ದಂತಕಥೆ ಬಲಬೀರ್ ಸಿಂಗ್​ ಸೀನಿಯರ್ ಇನ್ನಿಲ್ಲ
ವೃತ್ತಿ ಜೀವನದಲ್ಲಿ 2 ಎಟಿಪಿ ಪ್ರಶಸ್ತಿ ಗೆದ್ದಿರುವ 28 ವರ್ಷದ ನಿಕೊಲೊಸ್, 2018ರ ಚೀನಾ ಓಪನ್ ಜಯಿಸಿದ್ದರು. ಫೈನಲ್ ಪಂದ್ಯದಲ್ಲಿ ವಿಶ್ವ ನಂ.4 ಜೌನ್ ಮಾರ್ಟಿನ್ ಡೆಲ್ ಪೊಟ್ರೊ ಅವರನ್ನು ಮಣಿಸಿದ್ದರು. ಇದಕ್ಕೂ ಮೊದಲು ಮೂರು ತಿಂಗಳ ಹಿಂದೆ ಹ್ಯಾಂಬರ್ಗ್‌ನಲ್ಲಿ ಜರ್ಮನ್ ಓಪನ್ ಜಯಿಸಿದ್ದರು. 2019ರ ಮೇ ತಿಂಗಳಲ್ಲಿ ವೃತ್ತಿ ಶ್ರೇಷ್ಠ ವಿಶ್ವ ನಂ. 16ನೇ ಸ್ಥಾನಕ್ಕೇರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net