ಆಸ್ಪತ್ರೆಗೆ ವೈದ್ಯಕೀಯ ಸಲಕರಣೆಗಳನ್ನು ದಾನ ನೀಡಿದ ಸಚಿನ್ ತೆಂಡುಲ್ಕರ್

sachin web
Published on

ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಅಸ್ಸಾಂನ ಚಾರಿಟೆಬಲ್ ಆಸ್ಪತ್ರೆಯೊಂದಕ್ಕೆ ವೈದ್ಯಕೀಯ ಸಲಕರಣೆಗಳನ್ನು ದಾನ ನೀಡಿದ್ದಾರೆ. ಅವರ ಈ ಕೊಡುಗೆಯಿಂದ ಎರಡು ಸಾವಿರಕ್ಕೂ ಅಧಿಕ ಬಡಕುಟುಂಬದ ಮಕ್ಕಳಿಗೆ ನೆರವಾಗಲಿದೆ.

ಯುನಿಸೆಫ್​ನ ಸದ್ಭಾವನಾ ರಾಯಭಾರಿಯೂ ಆಗಿರುವ ಸಚಿನ್ ತೆಂಡುಲ್ಕರ್, ಅಸ್ಸಾಂನ ಕರಿಮ್‌ಗಂಜ್ ಜಿಲ್ಲೆಯ ಮಕುಂಡ ಆಸ್ಪತ್ರೆಯ ಶಿಶು ತೀವ್ರ ನಿಗಾ ಘಟಕ (ಪಿಐಸಿಯು) ಮತ್ತು ನವಜಾತ ಶಿಶು ತೀವ್ರ ನಿಗಾ ಘಟಕಕ್ಕೆ (ಎನ್‌ಐಸಿಯು) ಅಗತ್ಯ ಸಲಕರಣೆಗಳನ್ನು ದಾನವಾಗಿ ನೀಡಿದ್ದಾರೆ.

ಸಚಿನ್ ತೆಂಡುಲ್ಕರ್ ಅವರ ಫೌಂಡೇಷನ್ ವತಿಯಿಂದ ಇತ್ತೀಚೆಗಷ್ಟೇ ಮಧ್ಯ ಪ್ರದೇಶದ ಬುಡುಕಟ್ಟು ಜನಾಂಗದ ಮಕ್ಕಳ ಪೌಷ್ಠಿಕ ಆಹಾರ ಮತ್ತು ಶಿಕ್ಷಣಕ್ಕೆ ನೆರವು ನೀಡಲಾಗಿತ್ತು. ಇದೀಗ ಈಶಾನ್ಯ ರಾಜ್ಯದ ಮಕ್ಕಳಿಗೂ ನೆರವು ಒದಗಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net