ಭರ್ಜರಿ ದ್ವಿಶತಕ ಸಿಡಿಸಿದ ಇಶಾನ್ ಕಿಶನ್

Ishan Kishan
Published on

ಚಟ್ಟೋಗ್ರಾಮ್​: ಬಾಂಗ್ಲಾದೇಶ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಇಶಾನ್ ಕಿಶನ್ ಭರ್ಜರಿ ದ್ವಿಶತಕ ಸಿಡಿಸಿ ಹೊಸ ದಾಖಲೆ ಬರೆದಿದ್ದಾರೆ.

ಇಶಾನ್ ಕಿಶನ್ 24ನೇ ಓವರ್​ನ ಮೊದಲ ಎಸೆತದಲ್ಲಿ ಬೌಂಡರಿ ಸಿಡಿಸುವುದರೊಂದಿಗೆ ತಮ್ಮ ಮೊದಲ ಶತಕವನ್ನು ಪೂರೈಸಿದ್ದರು. 85 ಎಸೆತಗಳಲ್ಲಿ 100 ರನ್ ಪೂರೈಸಿದರು. ಇದೀಗ 128 ಎಸೆತಗಳಲ್ಲಿ 200 ರನ್ ಗಳಿಸುವೊದರೊಂದಿಗೆ ದ್ವಿಶತಕ ದಾಖಲಿಸಿದರು.

ಇಶಾನ್ ಕಿಶನ್ ತಮ್ಮ ದ್ವಿಶತಕದ ಇನ್ನಿಂಗ್ಸ್​​ನಲ್ಲಿ 131 ಬಾಲ್​​ಗಳನ್ನು ಆಡಿ, 210 ರನ್ ಗಳಿಸಿ ಟಸ್ಕಿನ್ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. 10ವ ಭರ್ಜರಿ ಸಿಕ್ಸ್​ ಮತ್ತು 24 ಫೋರ್​ ಬಾರಿಸಿ ಮಿಂಚಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net