ಟೀಮ್ ಇಂಡಿಯಾಗೆ ಜಸ್‌ಪ್ರೀತ್ ಬುಮ್ರಾ, ಪ್ರಸಿದ್ಧ ಕೃಷ್ಣ ಗೆಲುವಿನ ಪುನರಾಗಮನ

buuuu
Published on

ಡಬ್ಲಿನ್: ಬರೋಬ್ಬರಿ 327 ದಿನಗಳ ಬಳಿಕ ಕಂಬ್ಯಾಕ್ ಮಾಡಿದ ವೇಗಿ ಜಸ್‌ಪ್ರೀತ್ ಬುಮ್ರಾ (24ಕ್ಕೆ 2), ಕನ್ನಡಿಗ ಪ್ರಸಿದಟಛಿ ಕೃಷ್ಣ (32ಕ್ಕೆ2) ಹಾಗೂ ಸ್ಪಿನ್ನರ್ ರವಿ ಬಿಷ್ಣೋಯಿ (23ಕ್ಕೆ 2) ಸಂಘಟಿತ ಬೌಲಿಂಗ್ ದಾಳಿಯ ನೆರವಿನಿಂದ ಪ್ರವಾಸಿ ಭಾರತ ತಂಡ ಮಳೆಬಾಧಿತ ಮೊದಲ ಟಿ20 ಪಂದ್ಯದಲ್ಲಿ ಆತಿಥೇಯ ಐರ್ಲೆಂಡ್ ವಿರುದ್ಧ ಡಕ್ವರ್ತ್-ಲೂಯಿಸ್ ನಿಯಮದನ್ವಯ 2 ರನ್‌ಗಳಿಂದ ಗೆಲುವು ದಾಖಲಿಸಿದೆ. ಈ ಮೂಲಕ ಭಾರತ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಮಲಾಹೈಡ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ಬುಮ್ರಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಭಾರತೀಯ ಬೌಲರ್‌ಗಳ ಸಂಘಟಿತ ದಾಳಿಯ ನಡುವೆಯೂ ಬ್ಯಾರಿ ಮೆಕಾರ್ಥಿ (51* ರನ್, 33 ಎಸೆತ, 4 ಬೌಂಡರಿ, 4 ಸಿಕ್ಸರ್) ಅರ್ಧಶತಕ ನೆರವಿನಿಂದ ಐರ್ಲೆಂಡ್ 7 ವಿಕೆಟ್‌ಗೆ 139 ರನ್ ಕಲೆಹಾಕಿತು.

ಪ್ರತಿಯಾಗಿ ಭಾರತ ತಂಡ ಯಶಸ್ವಿ ಜೈಸ್ವಾಲ್ (24) ಹಾಗೂ ಋತುರಾಜ್ ಗಾಯಕ್ವಾಡ್ (19*) ಒದಗಿಸಿದ ಉತ್ತಮ ಆರಂಭ ನೆರವಿನಿಂದ 6.5 ಓವರ್‌ಗಳಲ್ಲಿ 2 ವಿಕೆಟ್‌ಗೆ 47 ರನ್ ಕಲೆಹಾಕಿದಾಗ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿತು. ನಂತರ ಪಂದ್ಯ ಮುಂದುವರಿಯಲು ಮಳೆ ಅವಕಾಶ ಕಲ್ಪಿಸದ ಕಾರಣ ಡಿಎಲ್‌ಎಸ್ ನಿಯಮದ ಪ್ರಕಾರ ಭಾರತ ತಂಡವನ್ನು ವಿಜಯಿ ಎಂದು ೋಷಿಸಲಾಯಿತು. ಡಿಎಲ್‌ಎಸ್ ಪ್ರಕಾರ

ಭಾರತ 2 ರನ್‌ಗಳಿಂದ ಮುನ್ನಡೆ ಸಾಧಿಸಿತ್ತು.

ಬುಮ್ರಾ ಹಾಗೂ ಪ್ರಸಿದ್ಧ ಕೃಷ್ಣ ಭರ್ಜರಿ ಬೌಲಿಂಗ್: ಗಾಯದ ಸಮಸ್ಯೆಯಿಂದಾಗಿ ಟೀಮ್ ಇಂಡಿಯಾದಿಂದ 11 ತಿಂಗಳು ಹೊರಗುಳಿದಿದ್ದ ಜಸ್‌ಪ್ರೀತ್ ಬುಮ್ರಾ ಹಾಗೂ ಪ್ರಸಿದ್ಧ ಕೃಷ್ಣ ಭರ್ಜರಿ ಬೌಲಿಂಗ್ ಮೂಲಕ ಯಶಸ್ವಿ ಪುನರಾಗಮನ ಕಂಡರು. ಇನಿಂಗ್ಸ್‌ನ ಮೊದಲ ಓವರ್ ಎಸೆದ ಬುಮ್ರಾ ಮೊದಲ ಎಸೆತದಲ್ಲಿ ಬೌಂಡರಿ ಬಿಟ್ಟುಕೊಟ್ಟರೂ, ಮರು ಎಸೆತದಲ್ಲಿ ಅರಂಭಿಕ ಆಂಡಿ ಬಲ್ಬಿರ್ನಿ (4) ವಿಕೆಟ್ ಕಬಳಿಸಿದರು. ನಂತರ ವನ್‌ಡೌನ್ ಬ್ಯಾಟರ್ ಲೋರ್ಕನ್ ಟಕರ್ ಖಾತೆ ತೆರೆಯುವ ಮುನ್ನ ಸ್ಕೂಪ್ ಶಾಟ್ ಯತ್ನದಲ್ಲಿ ಸ್ಯಾಮ್ಸನ್‌ಗೆ ಕ್ಯಾಚ್ ನೀಡಿದರು. ಮೊದಲ ಓವರ್‌ನಲ್ಲಿ 2 ವಿಕೆಟ್ ಪಡೆದ ಬುಮ್ರಾಗೆ ಪ್ರಸಿದಟಛಿ ಕೃಷ್ಣ ಸಾಥ್ ನೀಡಿದರು. ಪ್ರಸಿದಟಛಿ ಕೃಷ್ಣ ಐದನೇ ಓವರ್‌ನಲ್ಲಿ ಹ್ಯಾರಿ ಟೆಕ್ಟರ್ (9) ವಿಕೆಟ್ ಕಬಳಿಸಿದರೆ, ಸ್ಪಿನ್ನರ್ ರವಿ ಬಿಷ್ಣೋಯಿ ಎಸೆದ ಮರು ಓವರ್‌ನಲ್ಲಿ ನಾಯಕ ಪೌಲ್ ಸ್ಟಿರ್ಲಿಂಗ್ (11) ಬೌಲ್ಡ್ ಆದರು. ಇದರೊಂದಿಗೆ ಐರ್ಲೆಂಡ್ ತಂಡ ಮೊದಲ ಆರು ಓವರ್‌ಗಳಲ್ಲಿ 30 ರನ್‌ಗಳಿಗೆ ತೃಪ್ತಿಪಟ್ಟಿತು.

ಟೀಮ್ ಇಂಡಿಯಾ ಶಿಸ್ತಿನ ದಾಳಿಗೆ ನಲುಗಿದ ಐರ್ಲೆಂಡ್‌ಗೆ ಕರ್ಟಿಸ್ ಕ್ಯಾಂಪರ್ (39) ಹಾಗೂ ಬ್ಯಾರಿ ಮೆಕಾರ್ಥಿ ಆಸರೆಯಾದರು. ಜಾರ್ಜ್ ಡಾಕ್ರೆಲ್ (1), ಮಾರ್ಕ್ ಅಡೇರ್ (16) ವಿಕೆಟ್ ಕಳೆದುಕೊಂಡು ಐರ್ಲೆಂಡ್ ತಂಡ 100ರ ಗಡಿ ದಾಟುವುದು ದುಸ್ತರವೆನಿದಾಗ ಇವರಿಬ್ಬರು ಏಳನೇ ವಿಕೆಟ್‌ಗೆ 44 ಎಸೆತಗಳಲ್ಲಿ 57 ರನ್ ಸೇರಿಸಿ ಕುಸಿತದಿಂದ ಪಾರು ಮಾಡಿದರು. ಮೆಕಾರ್ಥಿ 33 ಎಸೆತದಲ್ಲಿ ಚೊಚ್ಚಲ ಅರ್ಧಶತಕ ಪೂರೈಸಿ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು.

ಐರ್ಲೆಂಡ್: 7 ವಿಕೆಟ್‌ಗೆ 139 ರನ್ (ಬಲ್ಬಿರ್ನಿ 4, ಸ್ಟಿರ್ಲಿಂಗ್ 11, ಹ್ಯಾರಿ ಟೆಕ್ಟರ್ 9,ಕ್ಯಾಂಪರ್ 39, ಅಡೇರ್ 16, ಮೆಕಾರ್ಥಿ 51*, ಬುಮ್ರಾ 24ಕ್ಕೆ2, ಪ್ರಸಿದ್ಧ 32ಕ್ಕೆ2, ಬಿಷ್ಣೋಯಿ 23ಕ್ಕೆ2)

ಭಾರತ: 6.5 ಓವರ್‌ಗಳಲ್ಲಿ 2 ವಿಕೆಟ್‌ಗೆ 47 (ಜೈಸ್ವಾಲ್ 24, ಋತುರಾಜ್ ಗಾಯಕ್ವಾಡ್ 19, ಸ್ಯಾಮ್ಸನ್ 1*, ಕ್ರೇಗ್ ಯಂಗ್ 2ಕ್ಕೆ2). ಪಂದ್ಯಶ್ರೇಷ್ಠ: ಜಸ್‌ಪ್ರೀತ್ ಬುಮ್ರಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net