ಮತ್ತೆ ಮುಗ್ಗರಿಸಿದ ಶ್ರೀಲಂಕಾ! 2-0 ಅಂತರದಿಂದ ಟಿ20 ಸರಣಿ ವಶಪಡಿಸಿಕೊಂಡ ಟೀಮ್ ಇಂಡಿಯಾ

ವಿಜಯವಾಣಿ-4-4
Published on

ಶ್ರೀಲಂಕಾ: ಪ್ರಸ್ತುತ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿ ಆಡುತ್ತಿರುವ ಟೀಮ್ ಇಂಡಿಯಾ ಒಂದು ಪಂದ್ಯವನ್ನು ಈಗಾಗಲೇ ಗೆದ್ದು ಬೀಗಿದ್ದು, ಇಂದು ಎರಡನೇ ಪಂದ್ಯವನ್ನು ವಶಪಡಿಸಿಕೊಳ್ಳುವ ಮೂಲಕ ಸರಣಿ ಗೆದ್ದಿದೆ. ಮಿಸ್ಟರ್ 360 ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಸರಣಿ ಗೆಲುವಿನತ್ತ ಮುಖ ಮಾಡಿರುವ ಭಾರತ ತಂಡಕ್ಕೆ ಇದೀಗ ಅಭಿಮಾನಿಗಳಿಂದ ಮೆಚ್ಚುಗೆಗಳು ಹರಿದುಬರುತ್ತಿವೆ.

ಇಂದು ನಡೆದ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಭಾರತ, ಬ್ಯಾಟ್ ಮಾಡುವಂತೆ ಶ್ರೀಲಂಕಾಗೆ ಆಹ್ವಾನಿಸಿತು. 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 165 ರನ್ ಕಲೆಹಾಕುವಲ್ಲಿ ಶ್ರೀಲಂಕಾ ಶಕ್ತವಾಯಿತು. ಇನ್ನು ಈ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾಗೆ ಆರಂಭದಲ್ಲಿ ಮಳೆ ಕಾಡಲಾರಂಭಿಸಿತು. ತದನಂತರ ಡಿಎಲ್​ಎಸ್​ ವಿಧಾನದಡಿ ಪಂದ್ಯ 8 ಓವರ್​ಗಳಿಗೆ ಇಳಿಕೆಯಾಗಿ, 78 ರನ್​ಗಳ ಗುರಿಯನ್ನು ಚೇಸ್ ಮಾಡಬೇಕಾಯಿತು. ಇದನ್ನು ಸುಲಭವಾಗಿ ತಲುಪಿದ ಭಾರತ 6.3 ಓವರ್​ಗೆ 81  ಗಳಿಸುವ ಮೂಲಕ 2-0 ಅಂತರದಲ್ಲಿ ಟಿ20 ಸರಣಿ ವಶಪಡಿಸಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net