ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡದ ಆಯ್ಕೆ ಯಾವಾಗ ಗೊತ್ತೇ?

t20 web
Published on

ನವದೆಹಲಿ: ಇಂಗ್ಲೆಂಡ್ ವಿರುದ್ಧದ ಓವಲ್ ಟೆಸ್ಟ್ ಪಂದ್ಯ ಮುಕ್ತಾಯಗೊಂಡ ಬಳಿಕ ಮುಂದಿನ ವಾರ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡದ ಆಯ್ಕೆ ನಡೆಯಲಿದೆ.

ಆಯ್ಕೆ ಸಮಿತಿ ಸಭೆಯ ದಿನಾಂಕ ಇನ್ನೂ ನಿರ್ಧಾರವಾಗಿಲ್ಲ. ಆದರೆ ತಂಡ ಪ್ರಕಟಿಸಲು ಐಸಿಸಿ ನೀಡಿರುವ ಅಂತಿಮ ಗಡುವು ಆಗಿರುವ ಸೆಪ್ಟೆಂಬರ್ 10ರೊಳಗೆ ತಂಡ ಆಯ್ಕೆಯ ನಿರೀಕ್ಷೆ ಇದೆ.
ಓವಲ್ ಟೆಸ್ಟ್ ಸೋಮವಾರದವರೆಗೆ ನಿಗದಿಯಾಗಿದ್ದು, ಸೋಮವಾರ ಅಥವಾ ಮಂಗಳವಾರ ತಂಡ ಪ್ರಕಟಗೊಳ್ಳುವ ಸಾಧ್ಯತೆ ಇದೆ. ಟಿ20 ವಿಶ್ವಕಪ್ ಅಕ್ಟೋಬರ್ 17ರಿಂದ ಯುಎಇ-ಓಮನ್‌ನಲ್ಲಿ ನಡೆಯಲಿದೆ.

ಸದ್ಯ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಮಾತ್ರ ಟಿ20 ವಿಶ್ವಕಪ್‌ಗೆ ತಂಡಗಳನ್ನು ಪ್ರಕಟಿಸಿದೆ. ವಿಶ್ವಕಪ್‌ನಲ್ಲಿ ಭಾರತ ತಂಡ ಅಕ್ಟೋಬರ್ 24ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದೆ. ಕರ್ನಾಟಕದ ಕ್ರಿಕೆಟಿಗರ ಪೈಕಿ ಕೆಎಲ್ ರಾಹುಲ್‌ಗೆ ಸ್ಥಾನ ಬಹುತೇಕ ಖಚಿತವೆನಿಸಿದೆ. ಪ್ರಸಿದ್ಧಕೃಷ್ಣ, ಮಯಾಂಕ್ ಅಗರ್ವಾಲ್ ಕೂಡ ಸ್ಪರ್ಧೆಯಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net