ಹುರುಪಿನಲ್ಲಿದ್ದ ಬಾಂಗ್ಲಾಗೆ ಮಣ್ಣು ಮುಕ್ಕಿಸಿದ ಭಾರತ; ಪ್ರವಾಸಿಗರ ಎದುರು ಭರ್ಜರಿ ಜಯ ದಾಖಲಿಸಿದ ಆತಿಥೇಯರು

Team India
Published on

ಚೆನ್ನೈ: ಇಲ್ಲಿನ ಎಂಎ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಟೆಸ್ಟ್​ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್​ ಇಂಡಿಯಾ 280 ರನ್​ಗಳ ಭರ್ಜರಿ ಜಯ ಸಾಧಿಸಿದ್ದು, ಪಾಕಿಸ್ತಾನದ ವಿರುದ್ಧ ಗೆದ್ದು ಸಂಪೂರ್ಣ ವಿಶ್ವಾಸದಲ್ಲಿದ್ದ ಪ್ರವಾಸಿ ತಂಡಕ್ಕೆ ದೊಡ್ಡ ಆಘಾತವನ್ನು ನೀಡಿದ್ದಾರೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್​​ಗೆ ಮಾಡಿದ ಭಾರತ ತಂಡವು ಮೊದಲ ಹಾಗೂ ಎರಡನೇ ಇನ್ನಿಂಗ್ಸ್​ನಲ್ಲಿ ಕ್ರಮವಾಗಿ 376 ಮತ್ತು 287-4 ರನ್​ ಗಳಿಸಿ ಎದುರಾಳಿಗಳಿಗೆ 515 ರನ್​ಗಳ ಬೃಹತ್​ ಗುರಿ ನೀಡಿದರು. ಬೃಹತ್ ಗುರಿ ಬೆನ್ನತ್ತಿದ್ದ ಬಾಂಗ್ಲಾ ತಂಡವನ್ನು ಇನ್ನಿಲ್ಲದಂತೆ ಕಾಡಿದ ಭಾರತದ ಬೌಲರ್​ಗಳು ಎದುರಾಳಿ ತಂಡವು ಅಲ್ಪಮೊತ್ತಕ್ಕೆ ಕಟ್ಟಿ ಹಾಕುವ ಮೂಲಕ ತಂಡಕ್ಕೆ 280 ರನ್​​ಗಳ ಭರ್ಜರಿ ಜಯವನ್ನು ದಕ್ಕಿಸಿಕೊಟ್ಟರು.

ಪಾಕಿಸ್ತಾನ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಐತಿಹಾಸಿಕ ಜಯ ಕಂಡ ಬಳಿಕ ಟೀಮ್​ ಇಂಡಿಯಾವನ್ನು ಸೋಲಿಸುವ ಹುರುಪಿನೊಂದಿಗೆ ಕಣಕ್ಕಿಳಿದಿದ್ದ ಬಾಂಗ್ಲಾ ತಂಡಕ್ಕೆ ಭಾರತ ಮೊದಲ ಪಂದ್ಯದಲ್ಲಿ ಶಾಕ್​ ನೀಡಿದ್ದು, ಸರಣಿಯ ಎರಡನೇ ಪಂದ್ಯ ಅಕ್ಟೋಬರ್​ 01ರಂದು ಉತ್ತರಪ್ರದೇಶದ ಕಾನ್ಪುರದಲ್ಲಿ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net