ಪ್ರ್ಯಾಕ್ಟೀಸ್​​ನಿಂದ ಕೊಂಚ ಬಿಡುವು; ಐಸ್​ಲ್ಯಾಂಡ್​ಗೆ ತೆರಳಿ ಸಖತ್ ಎಂಜಾಯ್ ಮಾಡಿದ ಟೀಂ ಇಂಡಿಯಾ ಆಟಗಾರರು

Team India
Published on

ನವ ದೆಹಲಿ: ಟಿ-20 ವಿಶ್ವಕಪ್​ಗಾಗಿ ಆಸ್ಟ್ರೇಲಿಯಾಗೆ ತೆರಳಿರುವ ಟೀಂ ಇಂಡಿಯಾ ಆಟಗಾರರು ಈಗಾಗಲೇ ಕಠಿಣ ಅಭ್ಯಾಸದಲ್ಲಿ ತೊಡಗಿಕೊಂಡಿರುವ ವಿಡಿಯೋವನ್ನು ಬಿಸಿಸಿಐ ತನ್ನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿತ್ತು. ಇದೀಗ ಕೊಂಚ ಬಿಡುವು ಪಡೆದುಕೊಂಡಿರುವ ಆಟಗಾರರು ಅಭ್ಯಾಸದಿಂದ ರಿಲ್ಯಾಕ್ಸ್​ ಮೂಡ್​ಗೆ ಜಾರಿದ್ದಾರೆ.

ಇತ್ತೀಚೆಗೆ ತಂಡದ ಆಟಗಾರರಾದ ಅಶ್ವಿನ್, ಚಹಲ್, ದಿನೇಶ್ ಕಾರ್ತಿಕ್ ಹಾಗೂ ಹರ್ಷಲ್ ಪಟೇಲ್ ಪರ್ತ್​​ನಲ್ಲಿ ನಡೆಯುತ್ತಿದ್ದ ಇಂಗ್ಲೆಂಡ್ - ಆಸ್ಟ್ರೇಲಿಯಾ ನಡುವಣ ಕ್ರಿಕೆಟ್ ಪಂದ್ಯಾಟ ವೀಕ್ಷಿಸಿ ಸುದ್ದಿಯಾಗಿದ್ದರು. ಇದೀಗ ಟೀ ಇಂಡಿಯಾದ ಎಲ್ಲಾ ಆಟಗಾರರು ಹಾಗೂ ಸದಸ್ಯರು ಆಸ್ಟ್ರೇಲಿಯಾದಲ್ಲಿರುವ ರಾಟ್ನೆಸ್ಟ್ ಐಸ್​ಲ್ಯಾಂಡ್ ದ್ವೀಪಕ್ಕೆ ತೆರಳಿ ಎಂಜಾಯ್ ಮಾಡಿದ್ದಾರೆ.

ಬೋಟ್​ನಲ್ಲಿ ಎಂಜಾಯ್ ಮಾಡಿಕೊಂಡು ಟೀಂ ಇಂಡಿಯಾ ಸದಸ್ಯರು ಐಸ್​ಲ್ಯಾಂಡ್ ತಲುಪಿದ್ದಾರೆ. ನಾವೆಲ್ಲಾ ಒಟ್ಟಾಗಿ ಬಂದಿದ್ದೇವೆ. ರಾಟ್ನೆಸ್ಟ್ ಐಸ್​ಲ್ಯಾಂಡ್​ನ ಅನುಭವ ಹೊಸತು. ಈ ದಿನ ಸಂಭ್ರಮದಿಂದ ಕಳೆದಿದ್ದೇವೆ ಎಂದು ನಾಯಕ ರೋಹಿತ್ ಶರ್ಮ ಹೇಳಿಕೊಂಡಿದ್ದಾರೆ.

ಬಿಡುವು ಮಾಡಿಕೊಂಡು ಪ್ರವಾಸ ಹೋಗಿರುವ ಆಟಗಾರರು ಎಂಜಾಯ್ ಮಾಡಿಕೊಂಡು ಬಂದಿದ್ದಾರೆ. ಇದೀಗ ಈ ವಿಡಿಯೋವನ್ನು ಬಿಸಿಸಿಐ ಟ್ವೀಟ್ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net