ಟಿ20 ವಿಶ್ವಕಪ್​ಗೆ ಟೀಮ್ ಇಂಡಿಯಾ ತಯಾರಿ: ವಿದೇಶಿ ಆಟಗಾರರು ಐಪಿಎಲ್‌ನಲ್ಲಿ ಭಾಗಿ

New-Project-3-6
Published on

ಚೆನ್ನೈ: ಚೊಚ್ಚಲ ಬಾರಿ ಪ್ರಶಸ್ತಿ ಎತ್ತಿಹಿಡಿದ ಅಂಗಣ, ಅಂದಿನ ನಾಯಕನ ಮಾರ್ಗದರ್ಶನದಲ್ಲಿ 10 ವರ್ಷಗಳ ಬಳಿಕ ಮತ್ತೆ ಅದೇ ಅಂಗಣದಲ್ಲಿ ಚಾಂಪಿಯನ್ ಆಗುವ ಹಂಬಲದಲ್ಲಿರುವ ಕೋಲ್ಕತ ನೈಟ್‌ರೈಡರ್ಸ್‌ ತಂಡ ಐಪಿಎಲ್ 17ನೇ ಆವೃತ್ತಿಯಲ್ಲಿ ಭಾನುವಾರ ಚೆಪಾಕ್ ಅಂಗಣದಲ್ಲಿ ನಡೆಯಲಿರುವ ೈನಲ್ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಸವಾಲು ಎದುರಿಸಲಿದೆ. ಕೆಕೆಆರ್ ಗೆದ್ದರೆ 3ನೇ ಬಾರಿ ಪ್ರಶಸ್ತಿ ಗೆದ್ದ ದಾಖಲೆ ಬರೆಯಲಿದ್ದು, ಸನ್‌ರೈಸರ್ಸ್‌ ಗೆದ್ದರೆ ಎಂಟು ವರ್ಷಗಳ ಬಳಿಕ 2ನೇ ಬಾರಿ ಪ್ರಶಸ್ತಿ ಜಯಿಸಿದ ಸಾಧನೆ ಮಾಡಲಿದೆ. ಹಾಲಿ ಟೂರ್ನಿಯಲ್ಲಿ ಉಭಯ ತಂಡಗಳು 2 ಬಾರಿ ಮುಖಾಮುಖಿಯಾಗಿದ್ದಾಗ ಶ್ರೇಯಸ್ ಅಯ್ಯರ್ ಬಳಗವೇ ಮೇಲುಗೈ ಸಾಧಿಸಿದೆ. ಆತಿಥೇಯ ತಂಡವಿಲ್ಲದ ಸೂಪರ್ ಸಂಡೇ ಸೆಣಸಾಟದಲ್ಲಿ ಪ್ರಶಸ್ತಿ ಯಾರು ಎತ್ತಿ ಹಿಡಿಯಲಿದ್ದಾರೆ ಎಂಬುದು ಕ್ರಿಕೆಟ್‌ಪ್ರಿಯರಲ್ಲಿ ಕುತೂಹಲ ಮೂಡಿಸಿದೆ.

ವಿಶ್ವಕಪ್ ತಂಡದ ಆಟಗಾರರಿಲ್ಲ : ಇದೇ ಮೊದಲ ಬಾರಿಗೆ ಟೀಮ್ ಇಂಡಿಯಾದ ಹಾಲಿ ನಾಯಕ ಯಾವುದೇ ತಂಡದ ನಾಯಕತ್ವವಿಲ್ಲದೆ ಸಾಮಾನ್ಯ ಆಟಗಾರನಾಗಿ ಕಣಕ್ಕಿಳಿದರು. ಈಗ ಮುಂಬರುವ ಟಿ20 ವಿಶ್ವಕಪ್‌ಗೆ ಆಯ್ಕೆಯಾಗಿರುವ ಟೀಮ್ ಇಂಡಿಯಾದ ಯಾವೊಬ್ಬ ಆಟಗಾರ ಸಹ ೈನಲ್ ಆಡುತ್ತಿರುವ ತಂಡಗಳ ಭಾಗವಾಗಿಲ್ಲ. ಕೆಕೆಆರ್‌ನಲ್ಲಿ ರಿಂಕು ಸಿಂಗ್ ಇದ್ದು, ಅವರು ಮೀಸಲು ಆಟಗಾರ ಎನಿಸಿದ್ದಾರೆ. ಆಸ್ಟ್ರೇಲಿಯಾ ಟಿ20 ವಿಶ್ವಕಪ್ ತಂಡದಲ್ಲಿರುವ ಪ್ಯಾಟ್ ಕಮ್ಮಿನ್ಸ್, ಟ್ರಾವಿಸ್ ಹೆಡ್ (ಸನ್‌ರೈಸರ್ಸ್‌), ಮಿಚೆಲ್ ಸ್ಟಾರ್ಕ್ (ಕೆಕೆಆರ್) ಮೂವರು ಆಟಗಾರರು ೈನಲ್ ಆಡಲಿದ್ದಾರೆ. ಪ್ಯಾಟ್ ಕಮ್ಮಿನ್ಸ್ ಆಸೀಸ್‌ನ ಏಕದಿನ ಹಾಗೂ ಟೆಸ್ಟ್ ತಂಡದ ನಾಯಕರಾಗಿದ್ದು, ಟಿ20ಯಲ್ಲಿ ಮಿಚೆಲ್ ಮಾರ್ಷ್ ಸಾರಥ್ಯ ವಹಿಸಲಿದ್ದಾರೆ. ಸನ್‌ರೈಸರ್ಸ್‌ನಲ್ಲಿ ಏಡೆನ್ ಮಾರ್ಕ್ರಮ್, ಹೆನ್ರಿಕ್ ಕ್ಲಾಸೆನ್ (ದ.ಆಫ್ರಿಕಾ), ರಹಮಾನುಲ್ಲಾ ಗುರ್ಬಜ್ (ಆ್ಘನ್), ದುಶ್ಮಂತ್ ಚಮೀರಾ (ಶ್ರೀಲಂಕಾ) ಹಾಗೂ ಗ್ಲೆನ್ ಫಿಲಿಪ್ಸ್ (ನ್ಯೂಜಿಲೆಂಡ್) ವಿಶ್ವಕಪ್‌ನಲ್ಲಿ ರಾಷ್ಟ್ರೀಯ ತಂಡ ಪ್ರತಿನಿಧಿಸುವ ಆಟಗಾರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net