ಆಫ್ಘನ್​ ವಿರುದ್ಧ ಕೊನೇ ಟಿ20 ಪಂದ್ಯಕ್ಕಾಗಿ ಬೆಂಗಳೂರಿಗೆ ಆಗಮಿಸಿದ ಟೀಮ್​ ಇಂಡಿಯಾ

ind bang web
Published on

ಬೆಂಗಳೂರು: ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯನ್ನು ಭಾನುವಾರವಷ್ಟೇ ಇಂದೋರ್​ನಲ್ಲಿ ವಶಪಡಿಸಿಕೊಂಡಿರುವ ರೋಹಿತ್​ ಶರ್ಮ ಸಾರಥ್ಯದ ಭಾರತ ತಂಡದ ಆಟಗಾರರು, ಕ್ಲೀನ್​ಸ್ವೀಪ್​ ಹಂಬಲದೊಂದಿಗೆ ಸೋಮವಾರ ಸಂಜೆ ಬೆಂಗಳೂರಿಗೆ ಆಗಮಿಸಿದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ 3ನೇ ಹಾಗೂ ಕೊನೇ ಟಿ20 ಪಂದ್ಯ ನಡೆಯಲಿದೆ. ಪಂದ್ಯದ ಕೌಂಟರ್​ ಟಿಕೆಟ್​ ಮಾರಾಟ ಪ್ರಕ್ರಿಯೆ ಮಂಗಳವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ಕ್ರೀಡಾಂಗಣದ ಗೇಟ್​ ನಂ. 19ರಲ್ಲಿ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net