ಟೀಮ್​ ಇಂಡಿಯಾ ಕ್ರಿಕೆಟರ್​ ಅಭಿಷೇಕ್ ಶರ್ಮಾ​ ಮನೆಯಲ್ಲಿ ದೀಪಾವಳಿ ಸಂಭ್ರಮ Abhishek Sharma

untitled-design-2-68f70a9e03bc6
Published on

ಮುಂಬೈ: ಟೀಮ್​ ಇಂಡಿಯಾ ಕ್ರಿಕೆಟಿಗ ಅಭಿಷೇಕ್​ ಶರ್ಮಾ ( Abhishek Sharma ) ತಮ್ಮ ಕುಟುಂಬದೊಂದಿಗೆ ದೀಪಾವಳಿ ಆಚರಣೆಯನ್ನು ವಿಜೃಂಭಣೆಯಿಂದ ಆಚರಿಸುತ್ತಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಇದೀಗ ಎಲ್ಲೆಡೆ ವೈರಲ್​ ಆಗಿದೆ.

ಅಭಿಷೇಕ್​ ಸಾಂಪ್ರದಾಯಕ ಉಡುಗೆಗಳನ್ನು ಧರಿಸಿದ್ದು, ಸುಂದರವಾಗಿ ಅಲಂಕರಿಸಲ್ಪಟ್ಟ ಮನೆ ಮಂದಿರದ ಮುಂದೆ ನಿಂತು ಮಗ್ನರಾಗಿ ಲಕ್ಷ್ಮೀ ಪೂಜೆ ಮಾಡುತ್ತಿರುವ ಚಿತ್ರಗಳನ್ನು ನಾವು ಅವರ ಪೋಸ್ಟ್​ನಲ್ಲಿ ಕಾಣಬಹುದು. ಈ ವೇಳೆ ಕುಟುಂಬಸ್ಥರು ಕೂಡಾ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ.

ಅಭಿಷೇಕ್ ಶರ್ಮಾ ಆಸ್ಟ್ರೇಲಿಯಾ ಸರಣಿಗೆ ಸಿದ್ಧತೆ

ದೀಪಾವಳಿಗೂ ಮುಂಚೆ, ಅಭಿಷೇಕ್​ ಐದು ಪಂದ್ಯಗಳ T20I ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸಕ್ಕೆ ತಯಾರಾಗುತ್ತಿದ್ದಾರೆ. ಭಾರತ ಯುವ ಆರಂಭಿಕ ಆಟಗಾರ ತಮ್ಮ ಮಾರ್ಗದರ್ಶಕರಾದ ದಂತಕಥೆ ಆಲ್​ರೌಂಡರ್​ ಯುವರಾಜ್​ ಸಿಂಗ್​ ಅವರೊಂದಿಗೆ ತರಬೇತಿ ಪಡೆಯುತ್ತಿದ್ದರು.

ಅಭಿಷೇಕ್​ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಅವರ ಬ್ಯಾಂಟಿಗ್​, ಮ್ಯಾಚ್​ ಸಿಮ್ಯೂಲೇಶನ್​ಗಳು ಮತ್ತು ಕೆಲವು ಎಸೆತಗಳ ಬೌಲಿಂಗ್​ನನ್ನು ಕಾಣಬಹುದು. ಈ ವೇಳೆ ಅಬ್ದುಲ್ ಸಮದ್, ಅಭಿಷೇಕ್ ಪೊರೆಲ್ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡುವ ಇತರ ಹಲವಾರು ಆಟಗಾರರೊಂದಿಗೆ ಆಡುತ್ತಿರುವುದನ್ನು ನಾವು ನೋಡಬಹುದು.

ಇದನ್ನೂ ಓದಿ: ಪ್ರಶಾಂತ್​ ಶೆಟ್ಟಿ ಅಂತಿದ್ದ ಹೆಸರು ಬದಲಾಗಿದ್ದೇಕೆ? ರಿಷಬ್​ ಶೆಟ್ಟಿ ಕೊಟ್ಟ ಉತ್ತರ ಇಲ್ಲಿದೆ ನೋಡಿ… Rishab Shetty ಅಭಿಷೇಕ್ ಶರ್ಮಾ ಟೀಮ್ ಇಂಡಿಯಾದ T20I ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಇವರು ಆಕರ್ಷಕ ಓಪನರ್ ಆಗಿ, ಅವರ ಶಕ್ತಿಶಾಲಿ ಬ್ಯಾಟಿಂಗ್ ಮತ್ತು ಲೆಫ್ಟ್-ಆರ್ಮ್ ಸ್ಪಿನ್ ಬೌಲಿಂಗ್ ತಂಡಕ್ಕೆ ಹೊಸ ಆಯಾಮ ನೀಡುತ್ತದೆ. ಏಷ್ಯಾ ಕಪ್ 2025ರಲ್ಲಿ ಅದ್ಭುತ ಪ್ರದರ್ಶನದೊಂದಿಗೆ ವಿಶ್ವದ ನಂ.1 T20 ಬ್ಯಾಟರ್ ಆಗಿ ಗುರುತಿಸಿಕೊಂಡ ಅವರು, ಆಸ್ಟ್ರೇಲಿಯಾ ಸರಣಿಯ ಸಿದ್ಧತೆಯಲ್ಲಿದ್ದಾರೆ. ಯುವರಾಜ್ ಸಿಂಗ್ ಮಾರ್ಗದರ್ಶನದಲ್ಲಿ, ಅವರ ಭವಿಷ್ಯ ತುಂಬಿದೆ.

ಶರ್ಮಾ ಅವರನ್ನು ಇತ್ತೀಚೆಗೆ ಸೆಪ್ಟೆಂಬರ್ 2025 ರ ಪುರುಷರ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಇವರು ಕಳೆದು ತಿಂಗಳು ನಡೆದ ಏಷ್ಯಾ ಕಪ್​ನಲ್ಲಿ ನೀಡಿದ ಪ್ರದರ್ಶನದಿಂದಾಗಿ ಐಸಿಸಿ ಪುರುಷರು ಆಟಗಾರರ ಶ್ರೇಯಾಂಕದಲ್ಲಿ ಟಿ.20 ರೇಟಿಂಗ್​ ಪಾಯಿಂಟ್​ ದಾಖಲೆಯನ್ನು ಮುರಿದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net