ಪಾಕ್​ ವೇಗಿಗಳ ಎದುರು ಅಬ್ಬರಿಸದ ಭಾರತ; 119ಕ್ಕೆ ಟೀಂ ಇಂಡಿಯಾ ಆಲೌಟ್!

Untitled design (3)
Published on

ಅಮೆರಿಕಾ: ಇಂದು ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್​ನ ಹೈವೋಲ್ಟೇಜ್​ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಗೆಲುವಿಗಾಗಿ ಸಮರ ಸಾರುತ್ತಿದ್ದು, ಟಾಸ್​ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಪಾಕ್​, ಭಾರತಕ್ಕೆ ಬ್ಯಾಟ್​ ಮಾಡುವಂತೆ ಆಹ್ವಾನಿಸಿತು.

ಮೊದಲು ಬ್ಯಾಟ್​ಗೆ ಬಂದ ಟೀಂ ಇಂಡಿಯಾಗೆ ಆರಂಭಿಕ ಹಂತದಲ್ಲೇ ವಿರಾಟ್ ಕೊಹ್ಲಿ ಮತ್ತು ನಾಯಕ ರೋಹಿತ್ ಶರ್ಮಾ ವಿಕೆಟ್ ಪತನವಾಗಿದ್ದು, ಭಾರೀ ಆಘಾತ ತಂದೊಡ್ಡಿತು. ಇದರ ಬೆನ್ನಲ್ಲೇ ಕ್ರೀಸ್​ನಲ್ಲಿ ಹೆಚ್ಚು ನಿಲ್ಲದ ಇತರೆ ಬ್ಯಾಟ್ಸ್​ಮನ್​ಗಳು, ಪಾಕಿಸ್ತಾನ ಬೌಲರ್​ಗಳಿಗೆ ಬ್ಯಾಕ್ ಟು ಬ್ಯಾಕ್ ವಿಕೆಟ್ ಒಪ್ಪಿಸಿ, ಪೆವಿಲಿಯನ್​ನತ್ತ ಮುಖಮಾಡಿದರು. 

19 ಓವರ್ ಅಂತ್ಯಕ್ಕೆ ಟೀಂ ಇಂಡಿಯಾ 119ಕ್ಕೆ ಆಲ್​ಔಟ್​ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net