ವಿಶ್ವ 10ಕೆ ಬೆಂಗಳೂರು: 35 ಸಾವಿರ ಓಟಗಾರರು ಭಾಗಿ; ಹಾಲಿ ಚಾಂಪಿಯನ್​ಗಳಾದ ಅಭಿಷೇಕ್​​, ಸಂಜೀವಿನಿ ಕಣಕ್ಕೆ

ಹಾಲಿ ಚಾಂಪಿಯನ್​ಗಳಾದ ಅಭಿಷೇಕ್​​, ಸಂಜೀವಿನಿ ಕಣಕ್ಕೆ
ಹಾಲಿ ಚಾಂಪಿಯನ್​ಗಳಾದ ಅಭಿಷೇಕ್​​, ಸಂಜೀವಿನಿ ಕಣಕ್ಕೆ
Published on
ಬೆಂಗಳೂರು: ಏಪ್ರಿಲ್​ 26ರ ಭಾನುವಾರದಂದು ನಡೆಯಲಿರುವ 18ನೇ ಆವೃತ್ತಿಯ ಟಿಸಿಎಸ್​ ವಿಶ್ವ 10ಕೆ ಬೆಂಗಳೂರು (TCS World 10k Bengaluru 2026) ಓಟದಲ್ಲಿ ಮೈದಾನ ಮತ್ತು ವರ್ಚುವಲ್​ ಮೂಲಕ ದಾಖಲೆಯ 35 ಸಾವಿರಕ್ಕೂ ಅಧಿಕ ಓಟಗಾರರು ಪಾಲ್ಗೊಳ್ಳಲಿದ್ದಾರೆ. ಭಾರತೀಯ ವಿಭಾಗದ ಹಾಲಿ ಚಾಂಪಿಯನ್​ಗಳಾದ ಅಭಿಷೇಕ್​ ಪಾಲ್​ ಮತ್ತು ಸಂಜೀವಿನಿ ಜಾಧವ್​ ಈ ಬಾರಿಯೂ ಕಣದಲ್ಲಿದ್ದಾರೆ. ಕೂಟದ ಫಿನಿಶರ್​ ಟಿ-ಶರ್ಟ್​ಅನ್ನು ಭಾರತೀಯ ಹಾಕಿ ತಾರೆ ಜರ್ಮನ್​ಪ್ರೀತ್​ ಸಿಂಗ್​ ಶನಿವಾರ ಅನಾವರಣಗೊಳಿಸಿದರು.

ಒಟ್ಟು 1.94 ಕೋಟಿ ರೂ. ಬಹುಮಾನ ಮೊತ್ತದ ವಿಶ್ವ ಅಥ್ಲೆಟಿಕ್ಸ್​ ಗೋಲ್ಡ್​ ಲೇಬಲ್​ ರೇಸ್​ನಲ್ಲಿ ಉಗಾಂಡದ ಹಾರ್ರ್ಬಟ್​ ಕಿಬೆಟ್​ ಮತ್ತು ಎಲೈಟ್​ ಮಹಿಳಾ ವಿಭಾಗದ ಹಾಲಿ ಚಾಂಪಿಯನ್​ ಸಾರಾ ಚಿಲಂಗಟ್​ ಪ್ರಮುಖ ಆಕರ್ಷಣೆ ಎನಿಸಿದ್ದಾರೆ. ಓಟದ ಫ್ಲ್ಯಾಗ್ ಆನ್​​ ಕಬ್ಬನ್​ ರಸ್ತೆಯಲ್ಲಿ ನಡೆಯಲಿದೆ. ಮಾಜಿ ವಿಶ್ವ ಚಾಂಪಿಯನ್​ ಮತ್ತು ಒಲಿಂಪಿಕ್ಸ್​ ಪದಕ ವಿಜೇತೆ ಬ್ಲಾಂಕಾ ವ್ಲಾಸಿಕ್​ ಕೂಟದ ಪ್ರಚಾರ ರಾಯಭಾರಿಯಾಗಿದ್ದಾರೆ.

"ಟಿಸಿಎಸ್​ ವಿಶ್ವ 10ಕೆ ಒಂದು ರೇಸ್​ಗಿಂತ ಹೆಚ್ಚಿನದಾಗಿದೆ. ಇದು ಜನರು ಒಗ್ಗೂಡಿದಾಗ ಏನನ್ನು ಸಾಧಿಸಲು ಸಾಧ್ಯ ಎಂದು ತೋರಿಸುವ ಓಟವಾಗಿದೆ. ಪ್ರತಿ ಆವೃತ್ತಿಯೂ ಆರೋಗ್ಯಕರವಾಗಿ ಬದಕಲು ಮತ್ತು ಉನ್ನತ ಗುರಿಯ ಸ್ಫೂರ್ತಿಯನ್ನು ನೀಡುತ್ತದೆ' ಎಂದು ಟಿಸಿಎಸ್​ ಬೆಂಗಳೂರಿನ ಪ್ರಾದೇಶಿಕ ಮುಖ್ಯಸ್ಥ ಸುನೀಲ್​ ದೇಶಪಾಂಡೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net