WPL-2027: ಜನವರಿ 14ಕ್ಕೆ ಆರ್​ಸಿಬಿ-ಮುಂಬೈ ಇಂಡಿಯನ್ಸ್​ ಉದ್ಘಾಟನಾ ಪಂದ್ಯ

2027ರ ಜ.14ರಿಂದ ಫೆ.7ರವರೆಗೆ ವಡೋದರ-ಮುಂಬೈನಲ್ಲಿ ಡಬ್ಲ್ಯುಪಿಎಲ್​
wpl
2026ರ ಡಬ್ಲ್ಯುಪಿಎಲ್​ ವಿಜೇತ ಆರ್​ಸಿಬಿ ತಂಡದ ಸಂಭ್ರಮಸಂಗ್ರಹ ಚಿತ್ರ
Published on: 

ಬೆಂಗಳೂರು: ಮುಂದಿನ ವರ್ಷಾರಂಭದ ವುಮೆನ್ಸ್​ ಪ್ರೀಮಿಯರ್​ ಲೀಗ್​ (ಡಬ್ಲ್ಯುಪಿಎಲ್​) ಟಿ20 ಟೂರ್ನಿಯ ವೇಳಾಪಟ್ಟಿಯನ್ನು ಬಿಸಿಸಿಐ ಬುಧವಾರ ಬಿಡುಗಡೆಗೊಳಿಸಿದೆ. 2027ರ ಜನವರಿ 14ರಿಂದ ಫೆಬ್ರವರಿ 7ರವರೆಗೆ ವಡೋದರ&ಮುಂಬೈನಲ್ಲಿ ಟೂರ್ನಿ ನಡೆಯಲಿದೆ.

"ಮಹಿಳೆಯರ ಐಪಿಎಲ್​' ಖ್ಯಾತಿಯ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಆರ್​ಸಿಬಿ ಮತ್ತು ಮಾಜಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ತಂಡಗಳು ಮುಖಾಮುಖಿ ಆಗಲಿವೆ. ಇದು ಭಾರತ ಮಹಿಳಾ ತಂಡದ ಹೊಸ ನಾಯಕಿ ಸ್ಮೃತಿ ಮಂದನಾ ಮತ್ತು ಮಾಜಿ ನಾಯಕಿ ಹರ್ಮಾನ್​ಪ್ರೀತ್​ ಕೌರ್​ ನಡುವಿನ ಮುಖಾಮುಖಿಯೂ ಆಗಿರಲಿದೆ.

ಜ.14ರಿಂದ 24ರವರೆಗೆ ವಡೋದರದ ಕೋಟಂಬಿ ಕ್ರೀಡಾಂಗಣದಲ್ಲಿ ಟೂರ್ನಿಯ ಮೊದಲ 11 ಲೀಗ್​ ಪಂದ್ಯಗಳು ನಡೆಯಲಿದೆ. ಜ.26ರಿಂದ ಮುಂಬೈನ ಬ್ರಬೋರ್ನ್​ ಸ್ಟೇಡಿಯಂನಲ್ಲಿ ಫೈನಲ್​ ಸಹಿತ ಟೂರ್ನಿಯ ಉಳಿದ 11 ಪಂದ್ಯಗಳು ನಡೆಯಲಿವೆ. ಫೆ.5ರಂದು ಎಲಿಮಿನೇಟರ್​ ಮತ್ತು ಫೆ.7ರ ಭಾನುವಾರ ಪ್ರಶಸ್ತಿ ಕದನ ನಡೆಯಲಿದೆ. ಎಲ್ಲ ಪಂದ್ಯಗಳು ರಾತ್ರಿ 7.30ರಿಂದ ನಡೆಯಲಿವೆ.

ಟೂರ್ನಿಯಲ್ಲಿ ಭಾಗವಹಿಸುವ 5 ತಂಡಗಳು ಸೇರಿ ಒಟ್ಟು 22 ಪಂದ್ಯಗಳನ್ನು ಆಡಲಿವೆ.

ಆರ್​ಸಿಬಿ ಪಂದ್ಯಗಳು

ದಿನಾಂಕ ಎದುರಾಳಿ

ಜ.14 ಮುಂಬೈ

ಜ.16 ಡೆಲ್ಲಿ

ಜ.19 ಯುಪಿ

ಜ.22 ಗುಜರಾತ್​

ಜ.26 ಮುಂಬೈ

ಜ.29 ಡೆಲ್ಲಿ

ಜ.31 ಯುಪಿ

ಫೆ.2 ಗುಜರಾತ್​