ಜೂನಿಯರ್ ವಿಶ್ವ ಗಾಲ್ಫ್ ಚಾಂಪಿಯನ್‌ಷಿಪ್‌ನಲ್ಲಿ ರಾಜ್ಯದ ತನಿಷ್ಕಾ ಪೃಥ್ವಿ

New Project
Published on

ಬೆಂಗಳೂರು: ಅಕ್ಟೋಬರ್ 26 ರಿಂದ 29ರವರೆಗೆ ಥಾಯ್ಲೆಂಡ್‌ನಲ್ಲಿ ನಡೆಯಲಿರುವ ಪ್ರತಿಷ್ಠಿತ ಸಿಂಘಾ ಥಾಯ್ಲೆಂಡ್ ಜೂನಿಯರ್ ವಿಶ್ವ ಗಾಲ್ಫ್ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲು ಬೆಂಗಳೂರಿನ 16 ವರ್ಷದ ತನಿಷ್ಕಾ ಪೃಥ್ವಿ ಅವರಿಗೆ ಆಹ್ವಾನ ನೀಡಲಾಗಿದೆ.

ದಕ್ಷಿಣ ವಲಯ ಜೂನಿಯರ್ ವಿಭಾಗದಲ್ಲಿ ಅಗ್ರ ಶ್ರೇಯಾಂಕಿತ ಆಟಗಾರ್ತಿ ಎನಿಸಿರುವ ತನಿಷ್ಕಾ, 2014 ರಿಂದ ಇಲ್ಲಿಯವರೆಗೂ100 ಕ್ಕೂ ಹೆಚ್ಚು ದಕ್ಷಿಣ ವಲಯ ಟೂರ್ನಿಗಳಲ್ಲಿ ಆಡಿದ್ದಾರೆ. 2019 ರಿಂದ ಇಂಡಿಯನ್ ಗಾಲ್ಫ್ ಯೂನಿಯನ್‌ನಲ್ಲಿ ಆಡುತ್ತಿರುವ ತನಿಷ್ಕಾ, ತರಬೇತುದಾರ ಲಾರೆನ್ಸ್ ಬ್ರದರಿಡ್ಜ್ ಬಳಿ ತರಬೇತಿ ಪಡೆದಿದ್ದಾರೆ.ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ ದೇಶಕ್ಕಾಗಿ ಪದಕವನ್ನು ಗೆಲ್ಲುವುದು ನನ್ನ ಜೀವನದ ಗುರಿಯಾಗಿದೆ. ಬದ್ಧತೆ, ಕಠಿಣ ಪರಿಶ್ರಮ, ಅಚಲ ನಿರ್ಧಾರ ಮತ್ತು ಕ್ರೀಡಾ ಸಮರ್ಪಣೆಯ ಮೂಲಕ ಯಶಸ್ವಿಯಾಗುತ್ತೇನೆ ಎಂಬ ವಿಶ್ವಾಸ ನನಗಿದೆ ಎಂದು ತನಿಷ್ಕಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net