ತಲೈವಾಸ್‌ಗೆ ಮಣಿದ ಬೆಂಗಳೂರು ಬುಲ್ಸ್: ಯುವ ರೈಡರ್ ಅಕ್ಷಿತ್ ಹೋರಾಟ ವ್ಯರ್ಥ

New-Project-14-1
Published on

ಹೈದರಾಬಾದ್: ಯುವ ರೈಡರ್ ಅಕ್ಷಿತ್ (12) ಸೂಪರ್ ಟೆನ್ ಸಾಹಸದ ಹೊರತಾಗಿಯೂ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಯಲ್ಲಿತಮಿಳ್ ತಲೈವಾಸ್ ವಿರುದ್ಧ ಪರಾಭವಗೊಂಡಿತು. ಗಚ್ಚಿಬೌಲಿ ಒಳಾಂಗಣ ಕ್ರಿಡಾಂಗಣದಲ್ಲಿ ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಬುಲ್ಸ್ 28-45 ಅಂಕಗಳಿಂದ ತಲೈವಾಸ್‌ಗೆ ಮಂಡಿಯೂರಿತು. ಬುಲ್ಸ್ ಪರ ಏಕಾಂಗಿ ಹೋರಾಟ ನಡೆಸಿದ ಅಕ್ಷಿತ್ 12 ಅಂಕ ಗಳಿಸಿ ತಂಡದ ಹೋರಾಟಕ್ಕೆ ಸಾಕ್ಷಿಯಾದರೆ, ಭರತ್ ಹಾಗೂ ಇತರರ ವೈಫಲ್ಯ ತಂಡವನ್ನು ಕಾಡಿತು.

ಅತ್ತ ನರೇಂದರ್ ಮತ್ತು ಅಜಿಂಕ್ಯ ಪವಾರ್ ಕ್ರಮವಾಗಿ 14 ಮತ್ತು 11 ಅಂಕ ಗಳಿಸಿ ತಲೈವಾಸ್ ಜಯದಲ್ಲಿ ನಿರ್ಣಾಯಕ ಪಾತ್ರವಹಿಸಿದರು. ಇದರೊಂದಿಗೆ ತಲೈವಾಸ್ ಸತತ 2ನೇ ಜಯ ಗಳಿಸಿದರೆ, ಬುಲ್ಸ್ 9ನೇ ಸೋಲಿಗೆ ತುತ್ತಾಯಿತು.

ಹಿನ್ನಡೆ ತಗ್ಗಿಸುವ ವಿಶ್ವಾಸದೊಂದಿಗೆ ದ್ವಿತೀಯಾರ್ಧ ಆರಂಭಿಸಿದ ಬುಲ್ಸ್ ಆಟಗಾರರು, ನಿಧಾನವಾಗಿ ಆಲ್‌ರೌಂಡ್ ಪ್ರದರ್ಶನಕ್ಕೆ ಒತ್ತು ನೀಡಿದರು. ಹೊಂದಾಣಿಕೆ ಆಟದೊಂದಿಗೆ ಎದುರಾಳಿ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆಸಿದರು. ಹೀಗಾಗಿ 25ನೇ ನಿಮಿಷಕ್ಕೆ 16-26ರಲ್ಲಿ ಹಿನ್ನಡೆಯಲ್ಲಿದ್ದ ಬುಲ್ಸ್, ಕೊನೆಯ ಹತ್ತು ನಿಮಿಷಗಳಿರುವಾಗ ಹಿನ್ನಡೆಯನ್ನು 24-32 ಅಂಕಗಳಿಗೆ ಕಡಿಮೆ ಮಾಡಿತು. 29ನೇ ನಿಮಿಷದಲ್ಲಿ ತಲೈವಾಸ್ ಆಟಗಾರರನ್ನು ಆಲೌಟ್ ಮಾಡಿದ್ದು, ಬುಲ್ಸ್ ಪಾಳಯದಲಿ ್ಲಹೊಸ ಹುರುಪು ನೀಡಿತು.

ಮೊದಲ ಅವಧಿಯಲಿ ್ಲಅಬ್ಬರಿಸದ ನರೇಂದರ್, ದ್ವಿತೀಯಾರ್ಧದಲಿ ್ಲಬುಲ್ಸ್ ಆಟಗಾರರಿಗೆ ಸಿಂಹಸ್ವಪ್ನವಾದರು. ಸೂಪರ್ ಟೆನ್ ಮೂಲಕ ಅಬ್ಬರಿಸಿದ ನರೇಂದರ್, ತಲೈವಾಸ್ ತಂಡ ಸುಮಾರು 10 ಅಂಕಗಳ ಮುನ್ನಡೆಯನ್ನು ಕಾಯ್ದುಕೊಳ್ಳುವಂತೆ ನೋಡಿಕೊಂಡರು. 35ನೇ ನಿಮಿಷದಲ್ಲಿಬುಲ್ಸ್ ತಂಡವನ್ನು ಎರಡನೇ ಬಾರಿ ಕಟ್ಟಿಹಾಕಿದ ತಲೈವಾಸ್ ಪಂದ್ಯ ಮುಗಿಸುವ ಮುನ್ನವೇ ಗೆಲುವಿನ ಸುಳಿವು ನೀಡಿತು. ಅಂತಿಮ ಕ್ಷ ಣದಲ್ಲಿ ರೈಡಿಂಗ್ ಮತ್ತು ಟ್ಯಾಕಲ್ ಎರಡರಲ್ಲೂಬುಲ್ಸ್ ಆಟಗಾರರು ಸೊರಗಿದರು. ಹೀಗಾಗಿ ತಲೈವಾಸ್ ತಂಡ ಸಹಜವಾಗಿ ಮೇಲುಗೈ ಸಾಧಿಸಿತು. ಎಡ ಬದಿಯ ರೈಡರ್ ಅಕ್ಷಿತ್ ಅವರ ಮಿಂಚಿನ ಆಟದ ಬಲದಿಂದ ರೇಡಿಂಗ್ ವಿಭಾಗದಲಿ ್ಲಸಮಬಲದ ಹೋರಾಟ ನೀಡಿದ ಹೊರತಾಗಿಯೂ ಟ್ಯಾಕಲ್‌ನಲಿ ವೈಫಲ್ಯ ಅನುಭವಿಸಿದ ಬೆಂಗಳೂರು ಬುಲ್ಸ್ ತಂಡ ಪಂದ್ಯದ ಮೊದಲ ಅವಧಿಯ ಅಂತ್ಯಕ್ಕೆ 14-25 ಅಂಕಗಳ ಹಿನ್ನಡೆ ಅನುಭವಿಸಿತು.
ಬೆಂಗಳೂರು ಬುಲ್ಸ್ ತನ್ನ ಮುಂದಿನ ಪಂದ್ಯದಲಿ ್ಲಜನವರಿ 28ರಂದು ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು ಎದುರಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net