ಹುಬ್ಬಳ್ಳಿಗೆ ಎಂಟನೇ ಜಯ: ಅಗ್ರಸ್ಥಾನದೊಂದಿಗೆ ಸೆಮಿಫೈನಲ್‌ಗೆ ಲಗ್ಗೆ

htt
Published on

ಬೆಂಗಳೂರು: ಸರ್ವಾಂಗೀಣ ನಿರ್ವಹಣೆ ತೋರಿದ ಹುಬ್ಬಳ್ಳಿ ಟೈಗರ್ಸ್‌ ತಂಡ ಎರಡನೇ ಆವೃತ್ತಿಯ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಟೂರ್ನಿಯ ತನ್ನ 10ನೇ ಹಾಗೂ ಅಂತಿಮ ಲೀಗ್ ಪಂದ್ಯದಲ್ಲಿ ಮಂಗಳೂರು ಡ್ರ್ಯಾಗನ್ಸ್ ಎದುರು 5 ವಿಕೆಟ್‌ಗಳಿಂದ ಸುಲಭ ಗೆಲುವು ದಾಖಲಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಮಂಗಳೂರು ತಂಡ ಯುವ ವೇಗಿ ಮನ್ವಂತ್ ಕುಮಾರ್ (33ಕ್ಕೆ 5) ಮಾರಕ ಬೌಲಿಂಗ್ ದಾಳಿ ನಡುವೆಯೂ, ಕೆ. ಸಿದ್ದಾರ್ಥ್ (53) ಅರ್ಧಶತಕದ ಬಲದಿಂದ 9 ವಿಕೆಟ್‌ಗೆ 167 ರನ್ ಪೇರಿಸಿತು. ಪ್ರತಿಯಾಗಿ ಆರಂಭಿಕ ಮೊಹಮದ್ ತಾಹ (51) ಹಾಗೂ ಮನೀಷ್ ಪಾಂಡೆ (56*) ಬಿರುಸಿನ ಅರ್ಧಶತಕದ ನೆರವಿನಿಂದ ಹುಬ್ಬಳ್ಳಿ 18.2 ಓವರ್‌ಗಳಲ್ಲಿ 5 ವಿಕೆಟ್‌ಗೆ 170 ರನ್ ಪೇರಿಸಿ ಜಯಿಸಿತು.

ಮಂಗಳೂರು ಡ್ರ್ಯಾಗನ್ಸ್: 9 ವಿಕೆಟ್‌ಗೆ 167 (ಬಿಆರ್ ಶರತ್ 40, ರೋಹನ್ 40, ಕೆ.ಸಿದ್ದಾರ್ಥ್ 53, ಅನಿರುದ್ಧ ಜೋಷಿ 6, ಕೆ. ಗೌತಮ್ 5, ಮನ್ವಂತ್ 33ಕ್ಕೆ 5, ಲವೀಶ್ 26ಕ್ಕೆ 2).

ಹುಬ್ಬಳ್ಳಿ ಟೈಗರ್ಸ್‌: 18.2 ಓವರ್‌ಗಳಲ್ಲಿ 5 ವಿಕೆಟ್‌ಗೆ 170 (ನಾಗಾ ಭರತ್ 14, ತಾಹ 51, ಮನೀಷ್ ಪಾಂಡೆ 53*, ಪ್ರವೀಣ್ ದುಬೆ 17, ಬಿ. ಮೊಹೀತ್ 20*, ಆನಂದ್ ದೊಡ್ಡಮಣಿ 34ಕ್ಕೆ 3). ಪಂದ್ಯಶ್ರೇಷ್ಠ: ಮನ್ವಂತ್ ಕುಮಾರ್.

4ನೇ ಸ್ಥಾನಕ್ಕೆ ಲಯನ್ಸ್- ಡ್ರ್ಯಾಗನ್ಸ್ ಪೈಪೋಟಿ

ಲೀಗ್ ಹಂತದ ಅಂಕಪಟ್ಟಿಯಲ್ಲಿ ಅಗ್ರ 4 ಸ್ಥಾನ ಪಡೆಯುವ ತಂಡಗಳು ಸೆಮಿೈನಲ್‌ಗೆ ಅರ್ಹತೆ ಪಡೆಯಲಿದ್ದು, ಹುಬ್ಬಳ್ಳಿ ಟೈಗರ್ಸ್‌ (16), ಮೈಸೂರು ವಾರಿಯರ್ಸ್‌ (12) ಉಪಾಂತ್ಯ ಪ್ರವೇಶ ಖಚಿತಪಡಿಸಿಕೊಂಡಿವೆ. 3ನೇ ಸ್ಥಾನದಲ್ಲಿರುವ ಗುಲ್ಬರ್ಗಾ ಮಿಸ್ಟಿಕ್ಸ್‌ಗೂ (10) ಉತ್ತಮ ರನ್‌ರೇಟ್‌ನಿಂದಾಗಿ ಸೆಮೀಸ್ ಸ್ಥಾನ ಬಹುತೇಕ ಖಚಿತವೆನಿಸಿದ್ದರೆ, 4 ಹಾಗೂ ಅಂತಿಮ ಸ್ಥಾನಕ್ಕೆ ಶಿವಮೊಗ್ಗ ಲಯನ್ಸ್ (8) ಹಾಗೂ ಮಂಗಳೂರು ಡ್ರ್ಯಾಗನ್ಸ್ (8) ನಡುವೆ ನೇರ ಪೈಪೋಟಿ ಏರ್ಪಟ್ಟಿದೆ. ಭಾನುವಾರ ಎರಡೂ ತಂಡಗಳು ಅಂತಿಮ ಲೀಗ್ ಪಂದ್ಯ ಆಡಲಿದ್ದು, ಗೆಲುವು ದಾಖಲಿಸಿದ ತಂಡ ಉಪಾಂತ್ಯಕ್ಕೇರಲಿದೆ. ಎರಡೂ ತಂಡ ಗೆದ್ದರೆ ಅಥವಾ ಎರಡೂ ಸೋತರೆ ರನ್‌ರೇಟ್ ಲೆಕ್ಕಾಚಾರದಲ್ಲಿ ಪ್ರವೇಶ ಸಿಗಲಿದೆ.

ಸೆಮಿಫೈನಲ್ನಾಳೆಯ ಪಂದ್ಯಗಳು

ಮಂಗಳೂರು ಡ್ರ್ಯಾಗನ್ಸ್- ಗುಲ್ಬರ್ಗಾ ಮಿಸ್ಟಿಕ್ಸ್

ಆರಂಭ: ಮಧ್ಯಾಹ್ನ 1

ಶಿವಮೊಗ್ಗ ಲಯನ್ಸ್-ಬೆಂಗಳೂರು ಬ್ಯಾಸ್ಟರ್ಸ್‌

ಆರಂಭ: ಸಂಜೆ 5.30

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net