

ಬೆಂಗಳೂರು: 9ನೇ ಆವೃತ್ತಿಯ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿ ಆರಂಭಕ್ಕೆ ಇನ್ನು ಕೆಲವೇ ದಿನಗಳು ಮಾತ್ರವೇ ಬಾಕಿಯಿದೆ. ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ಜಂಟಿ ಆತಿಥ್ಯದಲ್ಲಿ 2024ರ ಸಾಲಿನ ಟಿ20 ವಿಶ್ವಕಪ್ ಟೂರ್ನಿಯು ಜೂನ್ 1ರಿಂದ 29ರವರೆಗೆ ನಡೆಯಲಿದೆ. ಈಗಾಗಲೇ ಕೆಲವು ತಂಡಗಳು ಅಭ್ಯಾಸ ಪಂದ್ಯಗಳನ್ನೂ ಆಡುತ್ತಿವೆ. ಈ ನಡುವೆ ನೇಪಾಳ ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ. ಹೌದು ತಂಡದ ಸ್ಟಾರ್ ಬೌಲರ್ ಸಂದೀಪ್ ಲಮಿಚಾನೆಗೆ ವೀಸಾ ನೀಡಲು ಅಮೆರಿಕ ನಿರಾಕರಿಸಿದೆ.
ಇದನ್ನೂ ಓದಿ: ಶೈಕ್ಷಣಿಕ ವರ್ಷದಿಂದ ಕೇರಳ ಶಾಲೆಗಳಲ್ಲಿ ಎಐ ಪಾಠ!
ಕಠ್ಮಂಡುನಲ್ಲಿನ ಅಮೆರಿಕ ರಾಯಭಾರ ಕಚೇರಿಯು ಸಂದೀಪ್ ಲಾಮಿಚಾನೆಗೆ ಇಂದು (ಮೇ.30) ಗುರುವಾರ ವೀಸಾ ನೀಡಲು ನಿರಾಕರಿಸಿದೆ. ಸತ್ಯಾಂಶವೆಂದರೆ ಸಂದೀಪ್ಗೆ ವೀಸಾ ನಿರಾಕರಣೆ ಮಾಡುತ್ತಿರುವುದು ಇದು ಎರಡನೇ ಬಾರಿ. ಇದಕ್ಕೂ ಮುನ್ನ ಸಂದೀಪ್ಗೆ ವೀಸಾ ನಿರಾಕರಿಸಲಾಗಿತ್ತು.
ಅತ್ಯಾಚಾರ ಪ್ರಕರಣದಲ್ಲಿ ಖುಲಾಸೆಗೊಂಡಿದ್ದರೂ ನೇಪಾಳದ ಯುಎಸ್ ರಾಯಭಾರ ಕಚೇರಿಯಿಂದ ಆರಂಭದಲ್ಲಿ ವೀಸಾವನ್ನು ತಿರಸ್ಕರಿಸಿದ ನಂತರ ಲಾಮಿಚಾನೆ ಅವರ ವೀಸಾ ಸಂದರ್ಶನವನ್ನು ಗುರುವಾರ ಸಂಜೆ 4 ಗಂಟೆಗೆ ನಿಗದಿಪಡಿಸಲಾಗಿತ್ತು.
18ರ ಹರೆಯದ ಯುವತಿಯನ್ನು ಅತ್ಯಾಚಾರ ಮಾಡಿದ ಆರೋಪದ ಮೇಲೆ ನೇಪಾಳದ ಮಾಜಿ ನಾಯಕನಿಗೆ ಕಠ್ಮಂಡು ನ್ಯಾಯಾಲಯ 8 ವರ್ಷಗಳ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದಾಗ್ಯೂ, ಎಲ್ಲಾ ಅತ್ಯಾಚಾರ ಆರೋಪಗಳಿಂದ ಮುಕ್ತವಾದ ನಂತರ ನೇಪಾಳ ಕ್ರಿಕೆಟಿಗನನ್ನು ಖುಲಾಸೆಗೊಳಿಸಲಾಯಿತು. ಅತ್ಯಾಚಾರ ಪ್ರಕರಣದಲ್ಲಿ ಖುಲಾಸೆಗೊಂಡ ನಂತರ, ಸಂದೀಪ್ ಲಮಿಚಾನೆ ಅವರನ್ನು T20 ವಿಶ್ವಕಪ್ 2024 ಗಾಗಿ 15 ಸದಸ್ಯರ ತಂಡಕ್ಕೆ ಸೇರಿಸಲಾಯಿತು.
ಎಲ್ಲಾ ಅತ್ಯಾಚಾರದ ಆರೋಪಗಳಿಂದ ಲಾಮಿಚಾನೆಯನ್ನು ಮುಕ್ತಗೊಳಿಸಿದ್ದರು, ಕ್ರಿಕೆಟ್ ಪಂದ್ಯವನ್ನಾಡಲು ಯುಸ್ಗೆ ತಂಡದೊಂದಿಗೆ ಪ್ರಯಾಣಿಸಲು US ರಾಯಭಾರ ಕಚೇರಿಯು ವೀಸಾವನ್ನು ನೀಡಲು ಹಿಂದೇಟು ಹಾಕಿದೆ. ನೇಪಾಳ ಕ್ರಿಕೆಟಿಗನ ವೀಸಾ ತಿರಸ್ಕೃತಗೊಂಡ ಕೆಲವು ದಿನಗಳ ನಂತರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರಧಾನಿ ಪುಷ್ಪ ಕಮಲ್ ದಹಾಲ್ ಅವರ ಅಧಿಕಾರಿಯ ಮುಂದೆ ಪ್ರತಿಭಟನೆ ನಡೆಸಿದರು.
ಜೂನ್ 1ರಂದು ಆತಿಥೇಯ ಅಮೆರಿಕ ಮತ್ತು ಕೆನಡಾ ತಂಡಗಳ ನಡುವಣ ಪಂದ್ಯದೊಂದಿಗೆ ಟೂರ್ನಿ ಶುರುವಾಗಲಿದೆ. ಇಡೀ ಕ್ರಿಕೆಟ್ ಜಗತ್ತು ಎದುರು ನೋಡುತ್ತಿರುವ ಇಂಡಿಯಾ vs ಪಾಕಿಸ್ತಾನ ನಡುವಣ ಪಂದ್ಯ ನ್ಯೂಯಾರ್ಕ್ನ ಲಾಂಗ್ ಐಲ್ಯಾಂಡ್ನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ನಾಸೌ ಕೌಂಟಿ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಜೂನ್ 9ರಂದು ಆಯೋಜನೆ ಆಗಲಿದೆ. ಜೂನ್ 29ರಂದು ಫೈನಲ್ ನಡೆಯಲಿದೆ.