

ನಾರ್ತ್ಸೌಂಡ್: ಆಲ್ರೌಂಡ್ ನಿರ್ವಹಣೆ ತೋರುವ ಮೂಲಕ ಅಫ್ಘಾನಿಸ್ತಾನ ಎದುರು ಸುಲಭ ಗೆಲುವು ದಾಖಲಿಸಿರುವ ಭಾರತ ತಂಡ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್-8 ಹಂತದ ತನ್ನ 2ನೇ ಪಂದ್ಯದಲ್ಲಿ ಶನಿವಾರ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಗೆಲುವಿನ ಓಟವನ್ನು ಮುಂದುವರಿಸುವ ಮೂಲಕ ಸೆಮಿಫೈನಲ್ ಸನಿಹ ತಲುಪುವುದು ರೋಹಿತ್ ಶರ್ಮ ಬಳಗದ ಗುರಿಯಾಗಿದೆ.
ವಿಶ್ವ ನಂ. 1 ಟಿ20 ಬ್ಯಾಟರ್ ಸೂರ್ಯಕುಮಾರ್ ಆ್ಘನ್ ವಿರುದ್ಧ ಪಂದ್ಯದಲ್ಲಿ ಭಾರತಕ್ಕೆ ಆಸರೆಯಾಗಿದ್ದರು. ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ನಲ್ಲೂ ಉಪಯುಕ್ತ ಕೊಡುಗೆ ನೀಡಿದ್ದರು. ಆದರೆ ಅಗ್ರ ಕ್ರಮಾಂಕದ ವೈಲ್ಯ ಭಾರತಕ್ಕೆ ಹಿನ್ನಡೆ ತಂದಿತ್ತು. ಭಾರತದ ಬೌಲರ್ಗಳು ಪ್ರತಿ ಪಂದ್ಯದಲ್ಲೂ ಬೆನ್ನೆಲುಬಾಗಿ ನಿಂತಿದ್ದು, ಅಗ್ರ ಕ್ರಮಾಂಕದಿಂದಲೂ ಉತ್ತಮ ಕೊಡುಗೆಯ ಅಗತ್ಯವಿದೆ. ಸೂಪರ್-8ನ ಮೊದಲ ಪಂದ್ಯದಲ್ಲಿ ಆಸೀಸ್ ವಿರುದ್ಧ ಸೋತಿರುವ ಬಾಂಗ್ಲಾಕ್ಕೂ ಬ್ಯಾಟಿಂಗ್ ವಿಭಾಗವೇ ದೊಡ್ಡ ಸಮಸ್ಯೆಯಾಗಿದೆ. ಬಾಂಗ್ಲಾ ಪಾಲಿಗೂ ಜಸ್ಪ್ರೀತ್ ಬುಮ್ರಾ ಪ್ರಮುಖ ಸವಾಲಾಗಲಿದ್ದಾರೆ.
11 ವರ್ಷಗಳ ಐಸಿಸಿ ಟ್ರೋಫಿ ಬರ ನೀಗಿಸುವ ಮತ್ತು 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಜಯಿಸುವ ಹಂಬಲದಲ್ಲಿರುವ ಭಾರತ ತಂಡ ಈ ಪಂದ್ಯ ಗೆದ್ದರೆ ಸೆಮಿಫೈನಲ್ ಪ್ರವೇಶ ಬಹುತೇಕ ಖಚಿತವೆನಿಸಲಿದೆ. ಭಾರತ ತಂಡ ಸೂಪರ್-8ನ ಸತತ 2ನೇ ಪಂದ್ಯದಲ್ಲೂ ಗೆದ್ದರೆ, ಆಗ ಆ್ಘನ್ ತಂಡ ಆಸೀಸ್, ಬಾಂಗ್ಲಾಗೆ ಆಘಾತ ನೀಡದಿದ್ದರೆ ರೋಹಿತ್ ಶರ್ಮ ಪಡೆ ಕೊನೇ ಪಂದ್ಯದಲ್ಲಿ (ಜೂ.24) ಕಾಂಗರೂಗಳ ಎದುರು ಸೋತರೂ ಗ್ರೂಪ್-1ರಿಂದ 2ನೇ ಸ್ಥಾನಿಯಾಗಿ ಸೆಮಿೈನಲ್ಗೇರಲಿದೆ.
ಟೀಮ್ ನ್ಯೂಸ್
ಭಾರತ: ರೋಹಿತ್ ಶರ್ಮ&ವಿರಾಟ್ ಕೊಹ್ಲಿ ಆರಂಭಿಕರಾಗಿ ಭಾರತಕ್ಕೆ ಉತ್ತಮ ಕೊಡುಗೆ ನೀಡುತ್ತಿಲ್ಲ. ಇದರ ಹೊರತಾಗಿಯೂ ಟೂರ್ನಿಯ ನಡುವೆ ಭಾರತ ಆರಂಭಿಕ ಜೋಡಿಯನ್ನು ಬದಲಾಯಿಸುವುದು ಅನುಮಾನವೆನಿಸಿದೆ. ಶಿವಂ ದುಬೆ ಕೂಡ ಐಪಿಎಲ್ನ ಸ್ಫೋಟಕ ಆಟವನ್ನು ವಿಶ್ವಕಪ್ನಲ್ಲಿ ಪುನರಾವರ್ತಿಸಲು ವಿಫಲರಾಗಿದ್ದಾರೆ. ಅವರ ವೈಲ್ಯ ಮುಂದುವರಿದರೆ ಸಂಜು ಸ್ಯಾಮ್ಸನ್ ಅವಕಾಶ ಪಡೆಯುವ ಸಾಧ್ಯತೆ ಇದೆ. ಆದರೆ, ಈ ಪಂದ್ಯದಲ್ಲಿ ಭಾರತದ ಗೆಲುವಿನ ಕಾಂಬಿನೇಷನ್ ಬದಲಾಗುವ ನಿರೀಕ್ಷೆ ಇಲ್ಲ.
ಬಾಂಗ್ಲಾದೇಶ: ಶಕೀಬ್ ಅಲ್ ಹಸನ್, ನಾಯಕ ನಜ್ಮುಲ್ ಶಾಂಟೊ ಮತ್ತು ಹೌಹಿದ್ ಹೃದಯ್ ಹೊರತಾಗಿ ಬಾಂಗ್ಲಾದ ಇತರ ಬ್ಯಾಟರ್ಗಳ ನಿರ್ವಹಣೆ ನಿರಾಶಾದಾಯಕವಾಗಿದೆ. ಬೌಲಿಂಗ್ನಲ್ಲಿ ವೇಗಿ ಮುಸ್ತಾಫಿಜುರ್ ಪ್ರಮುಖ ಅಸ್ತ್ರವೆನಿಸಿದ್ದು, ಯುವ ಲೆಗ್ ಸ್ಪಿನ್ನರ್ ರಿಷದ್ ಹುಸೇನ್ಗೆ ಇನ್ನಷ್ಟು ಬೆಂಬಲದ ಅಗತ್ಯವಿದೆ. ವೇಗಿ ಟಸ್ಕಿನ್ ಅಹ್ಮದ್ ವೈಲ್ಯ ತಂಡಕ್ಕೆ ಹಿನ್ನಡೆ ತಂದಿದೆ.
ಭಾರತಕ್ಕೆ ಎಚ್ಚರಿಕೆ ಅಗತ್ಯ
ಟಿ20 ಕ್ರಿಕೆಟ್ನಲ್ಲಿ ಭಾರತ ತಂಡ ಬಾಂಗ್ಲಾ ಎದುರು ಬಲಿಷ್ಠ ದಾಖಲೆ ಹೊಂದಿದೆ. ಆದರೂ ಐಸಿಸಿ ಟೂರ್ನಿಯಲ್ಲಿ ಭಾರತ, ಎದುರಾಳಿಯನ್ನು ಲುವಾಗಿ ಪರಿಗಣಿಸಲು ಅವಕಾಶವಿಲ್ಲ. 2007ರಲ್ಲಿ ಕೆರಿಬಿಯನ್ ನೆಲದಲ್ಲೇ ನಡೆದ ಏಕದಿನ ವಿಶ್ವಕಪ್ನಲ್ಲಿ ಬಾಂಗ್ಲಾ ಎದುರು ಆಘಾತ ಎದುರಿಸಿ ಭಾರತ ಮೊದಲ ಸುತ್ತಿನಲ್ಲೇ ಹೊರಬಿದ್ದಿತ್ತು. ಆಗ ತಂಡದ ನಾಯಕರಾಗಿದ್ದ ರಾಹುಲ್ ದ್ರಾವಿಡ್ ಈಗ ಕೋಚ್ ಆಗಿದ್ದಾರೆ. ಬಾಂಗ್ಲಾ ಎದುರು 2016ರ ಟಿ20 ವಿಶ್ವಕಪ್ನಲ್ಲಿ ಕೇವಲ 1 ರನ್ನಿಂದ ಮತ್ತು 2022ರ ಟಿ20 ವಿಶ್ವಕಪ್ನಲ್ಲಿ 5 ರನ್ಗಳಿಂದ ಗೆದ್ದಿತ್ತು. ಹೀಗಾಗಿ ಸೆಮೀಸ್ ಹಾದಿ ಸುಗಮಗೊಳಿಸುವ ನಿಟ್ಟಿನಲ್ಲಿ ಈ ಪಂದ್ಯದಲ್ಲಿ ಬಾಂಗ್ಲಾ ಸವಾಲು ಹಿಮ್ಮೆಟ್ಟಿಸುವುದು ಅಗತ್ಯವಾಗಿದೆ.
*ಮುಖಾಮುಖಿ: 13
ಭಾರತ: 12
ಬಾಂಗ್ಲಾದೇಶ: 1
*ವಿಶ್ವಕಪ್ನಲ್ಲಿ: 4
ಭಾರತ: 4
ಬಾಂಗ್ಲಾದೇಶ: 0
*ಆರಂಭ: ರಾತ್ರಿ 8.00
*ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಹಾಟ್ಸ್ಟಾರ್.
ಪಿಚ್ ರಿಪೋರ್ಟ್
ವಿವ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಇದುವರೆಗೆ ಟೂರ್ನಿಯ 6 ಪಂದ್ಯಗಳು ನಡೆದಿದ್ದು, ಈ ಪೈಕಿ 4ರಲ್ಲಿ ಚೇಸಿಂಗ್ ಮಾಡಿದ ತಂಡವೇ ಜಯಿಸಿದೆ. 5 ಪಂದ್ಯಗಳಲ್ಲಿ ಟಾಸ್ ಗೆದ್ದ ನಾಯಕ ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ. ಸ್ಪಿನ್&ವೇಗ ಎರಡಕ್ಕೂ ನೆರವಾಗುವ ಪಿಚ್ ಇದಾಗಿದ್ದು, ದಣ ಆಫ್ರಿಕಾ ತಂಡ ಅಮೆರಿಕ ವಿರುದ್ಧ 194 ರನ್ ಗಳಿಸಿದ್ದು ಟೂರ್ನಿಯಲ್ಲಿ ತಂಡವೊಂದು ಇಲ್ಲಿ ಗಳಿಸಿದ ಗರಿಷ್ಠ ಮೊತ್ತವಾಗಿದೆ.
ಮಳೆ ಅಡಚಣೆ ಭೀತಿ
ನಾರ್ತ್ಸೌಂಡ್ನಲ್ಲೇ ಶುಕ್ರವಾರ (ಸ್ಥಳಿಯ ಕಾಲಮಾನ ಗುರುವಾರ ರಾತ್ರಿ) ಆಸೀಸ್&ಬಾಂಗ್ಲಾ ನಡುವೆ ನಡೆದ ಪಂದ್ಯ ಮಳೆ ಅಡಚಣೆ ಎದುರಿಸಿತ್ತು. ಅಂತಿಮವಾಗಿ ಡಕ್ವರ್ತ್&ಲೂಯಿಸ್ ನಿಯಮದನ್ವಯ ಲಿತಾಂಶ ನಿರ್ಧಾರವಾಗಿತ್ತು. ಭಾರತ&ಬಾಂಗ್ಲಾ ಪಂದ್ಯ ಸ್ಥಳಿಯ ಕಾಲಮಾನ ಪ್ರಕಾರ ಬೆಳಗ್ಗೆ ನಡೆಯುತ್ತಿದ್ದರೂ, ಮಳೆ ಅಡಚಣೆ ಭೀತಿ ಶೇ.20ರಷ್ಟಿದೆ.