ಮಡಿಕೇರಿಯಲ್ಲಿ ಫೆಬ್ರವರಿ 14 ರಿಂದ ಟಿ20 ಲೆದರ್ ಬಾಲ್ ಕ್ರಿಕೆಟ್ ಪಂದ್ಯಾಟ

IMG_20200125_111019.jpg
Published on

ಮಡಿಕೇರಿ: ಮರ್ಕರ ಯುತ್ ಕ್ರಿಕೆಟ್ ಕ್ಲಬ್ ವತಿಯಿಂದ ಜಿಲ್ಲಾ ಮಟ್ಟದ ’ಟಿ20’ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾಟವನ್ನು ಫೆ.14 ರಿಂದ 23ರವರೆಗೆ ನಗರದ ಜನರಲ್ ತಿಮ್ಮಯ್ಯ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಕ್ಲಬ್​ನ ಉಪಾಧ್ಯಕ್ಷ ಪೊನ್ನಚ್ಚನ ಮದು ತಿಳಿಸಿದ್ದಾರೆ.

ಜಿಲ್ಲಾ ಮಟ್ಟದ ಕ್ರಿಕೆಟ್ ಕ್ಲಬ್​ಗಳು ಫೆ.5ರೊಳಗೆ ತಂಡಗಳ ಹೆಸರು ನೋಂದಾಯಿಸಿಕೊಳ್ಳಬೇಕು. 20 ಓವರ್‌ಗಳ ಪಂದ್ಯಾಟದಲ್ಲಿ 16 ತಂಡಗಳಿಗೆ ಅವಕಾಶವಿದೆ.

ಆಸಕ್ತ ತಂಡಗಳು ರೂ.5000 ಮೈದಾನ ಶುಲ್ಕ ವಿಧಿಸಿ ನೋಂದಾಯಿಸಿಕೊಳ್ಳಬೇಕು. ಪಂದ್ಯಾಟದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿಜೇತ ತಂಡಗಳಿಗೆ ಆಕರ್ಷಕ ಟ್ರೋಫಿ ಹಾಗೂ ನಗದು ನೀಡಲಾಗುವುದು.

ಆಟಗಾರರು ಆಧಾರ್ ಕಾರ್ಡ್ ಪ್ರತಿಯನ್ನು ಕಡ್ಡಾಯವಾಗಿ ಪಂದ್ಯಾಟಕ್ಕೆ ತರತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ 9480318213, 9660723120, 8861684348 ಸಂಪರ್ಕಿಸಬಹುದು ಎಂದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಅಧ್ಯಕ್ಷ ಕೆ.ಎಂ.ಉತ್ತಪ್ಪ, ಕಾರ್ಯದರ್ಶಿ ಎಂ.ಎಂ. ಸುನೀಲ್, ಸದಸ್ಯರಾದ ಪ್ರಿನ್ಸ್, ರಾಜು, ತ್ರಿಶೂಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net