

ಮುಂಬೈ: ಎರಡು ಬಾರಿಯ ಚಾಂಪಿಯನ್ ಕರ್ನಾಟಕ ತಂಡ ದೇಶೀಯ ಟಿ20 ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಸರ್ವಾಂಗೀಣ ನಿರ್ವಹಣೆ ತೋರಿದ ಆರ್.ಸ್ಮರಣ್ ಬಳಗ ಎ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಬಂಗಾಳ ಎದುರು 19 ರನ್ಗಳ ಗೆಲುವು ಒಲಿಸಿಕೊಂಡಿತು.
ವಾಂಖೆಡೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಕರ್ನಾಟಕಕ್ಕೆ, ಲವನೀತ್ ಸಿಸೋಡಿಯಾ (27) ಹಾಗೂ ಎರಡು ವರ್ಷಗಳ ನಂತರ ಮರಳಿರುವ ಮನೀಷ್ ಪಾಂಡೆ (29) ಉತ್ತಮ ಆರಂಭ ನೀಡಿದರು. ನಂತರ ಅನುಭವಿ ಕರುಣ್ ನಾಯರ್ (53 ರನ್, 35 ಎಸೆತ, 7 ಬೌಂಡರಿ) ಅರ್ಧಶತಕದ ಜತೆಗೆ ಪ್ರವೀಣ್ ದುಬೆ (30* ರನ್, 15 ಎಸೆತ, 3 ಬೌಂಡರಿ, 1 ಸಿಕ್ಸರ್) ಉಪಯುಕ್ತ ಆಟದ ನಡುವೆಯೂ ಸಯಾನ್ ೋಷ್ (28ಕ್ಕೆ 4) ದಾಳಿಗೆ ಕುಸಿದ ಕರ್ನಾಟಕ ಭರ್ತಿ 20 ಓವರ್ಗಳಲ್ಲಿ 184 ರನ್ಗೆ ಆಲೌಟ್ ಆಯಿತು. ಪ್ರತಿಯಾಗಿ ಎಡಗೈ ವೇಗಿ ಅಭಿಲಾಷ್ ಶೆಟ್ಟಿ (26ಕ್ಕೆ 4) ಮತ್ತು ವೈಶಾಖ್ ವಿಜಯಕುಮಾರ್ (28ಕ್ಕೆ 3) ದಾಳಿಗೆ ತತ್ತರಿಸಿದ ಬಂಗಾಳ 9 ವಿಕೆಟ್ಗೆ 165 ರನ್ಗಳಿಸಲಷ್ಟೇ ಶಕ್ತಗೊಂಡಿತು.
ಕರ್ನಾಟಕ: 20 ಓವರ್ಗಳಲ್ಲಿ 184 (ಲವನೀತ್ 27, ಮನೀಷ್ 29, ಕರುಣ್ 53, ಆರ್.ಸ್ಮರಣ್ 12, ಅಭಿನವ್ 19, ಪ್ರವೀಣ್ 30, ಮನ್ವಂತ್ 2*, ರಿತೇರ್ಶ 1, ಶಿಶರ್ ಶೆಟ್ಟಿ 1, ಸಯಾನ್ 28ಕ್ಕೆ 4, ಪ್ರದೀಪ್ತ 19ಕ್ಕೆ 2).
ಬಂಗಾಳ: 9 ವಿಕೆಟ್ಗೆ 165 (ಅಭಿಷೇಕ್ 0, ಕರಣ್ 9, ಅಭಿಮನ್ಯು 0, ಸುದೀಪ್ 65, ರಿಷಭ್ 0, ಶಾಬಾಜ್ 56, ಶಕೀರ್ 11, ಪ್ರದೀಪ್ತ 12, ಅಭಿಲಾಷ್ ಶೆಟ್ಟಿ 26ಕ್ಕೆ4, ವೈಶಾಖ್ 28ಕ್ಕೆ 3, ಮನ್ವಂತ್ 35ಕ್ಕೆ 2). ಪಂದ್ಯಶ್ರೇಷ್ಠ: ಅಭಿಲಾಷ್ ಶೆಟ್ಟಿ.
ಕರ್ನಾಟಕಕ್ಕೆ ಮುಂದಿನ ಪಂದ್ಯ
ಯಾವಾಗ: ಸೋಮವಾರ
ಎದುರಾಳಿ: ಉತ್ತರ ಪ್ರದೇಶ
ಆರಂಭ: ಬೆ.11.00