ಇಂದಿನಿಂದ ದೇಶೀಯ ಟಿ20 ಹಬ್ಬ : ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ರಾಜ್ಯಕ್ಕೆ ತಮಿಳುನಾಡು ಮೊದಲ ಸವಾಲು

New-Project-24
Published on

ಡೆಹ್ರಾಡೂನ್: ಭಾರತದಲ್ಲಿ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಅಬ್ಬರದ ನಡುವೆಯೇ ದೇಶೀಯ ಟಿ20 ಕ್ರಿಕೆಟ್‌ಗೆ ವೇದಿಕೆ ಸಜ್ಜಾಗಿದೆ. 2023-24ರ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಗೆ ಸೋಮವಾರ ಚಾಲನೆ ದೊರೆಯಲಿದ್ದು, ದೇಶದ 5 ನಗರಗಳು ಆತಿಥ್ಯ ವಹಿಸಿವೆ. ಕರ್ನಾಟಕ ತಂಡ ತಮಿಳುನಾಡು ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.

ಇ ಗುಂಪಿನಲ್ಲಿರುವ ರಾಜ್ಯ ತಂಡವನ್ನು ಆರಂಭಿಕ ಬ್ಯಾಟರ್ ಮಯಾಂಕ್ ಅಗರ್ವಾಲ್ ಮುನ್ನಡೆಸಲಿದ್ದಾರೆ. ಹಿಂದಿನ ಐದು ಆವೃತ್ತಿಗಳಲ್ಲಿ ಎರಡು ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿರುವ ಕರ್ನಾಟಕ ತಂಡ ಕಳೆದ ಆವೃತ್ತಿಯಲ್ಲಿ ಕ್ವಾರ್ಟರ್‌ೈನಲ್‌ನಲ್ಲೇ ಮುಗ್ಗರಿಸಿತು.2019-20ರಲ್ಲಿ ರಾಜ್ಯ ತಂಡ ಕೊನೆಯದಾಗಿ ಪ್ರಶಸ್ತಿ ಜಯಿಸಿತ್ತು. ಈ ಬಾರಿಯ ಪ್ರಶಸ್ತಿ ಹಾಟ್ ೇವರಿಟ್ ಆಗಿ ಕಣಕ್ಕಿಳಿಯಲಿರುವ ಮಯಾಂಕ್ ಪಡೆ ಸಮತೋಲನದಿಂದ ಕೂಡಿದೆ. ಅನುಭವಿ ಬ್ಯಾಟರ್ ಮನೀಷ್ ಪಾಂಡೆ ಭರ್ಜರಿ ಾರ್ಮ್‌ನಲ್ಲಿದ್ದು, ವೇಗಿ ಪ್ರಸಿದ್ಧ ಕೃಷ್ಣ ವಾಪಸಾತಿ ಜತೆಗೆ ದೇಶೀಯ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ತ್ರಿವಳಿ ವೇಗಿಗಳಾದ ವಿದ್ವತ್ ಕಾವೇರಪ್ಪ, ವಿ. ಕೌಶಿಕ್ ಹಾಗೂ ವೈಶಾಕ್ ವಿಜಯ್‌ಕುಮಾರ್ ಬಲವಿದೆ. ಮನೀಷ್ ಪಾಂಡೆ ಹಾಗೂ ಮಯಾಂಕ್ ಅಗರ್ವಾಲ್ ಜತೆಗೆ ಎಲ್‌ಆರ್ ಚೇತನ್, ಕೆಎಲ್ ಶ್ರೀಜೀತ್ ಬ್ಯಾಟಿಂಗ್ ವಿಭಾಗಕ್ಕೆ ಶಕ್ತಿ ತುಂಬಿದ್ದಾರೆ. ಈ ಬಾರಿಯೂ ‘ಇಂಪ್ಯಾಕ್ಟ್ ಪ್ಲೇಯರ್’ ಕಣಕ್ಕಿಳಿಯಬಹುದಾಗಿದೆ.

ತಮಿಳುನಾಡು ಮೂರು ಬಾರಿ ಪ್ರಶಸ್ತಿ ಎತ್ತಿಹಿಡಿಯುವ ಮೂಲಕ ಟೂರ್ನಿಯ ಯಶಸ್ವಿ ತಂಡ ಎನಿಸಿದೆ. ಮುಂಬೈ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯಲಿದೆ.

ಟೂರ್ನಿ ಸ್ವರೂಪ

38 ತಂಡಗಳನ್ನು 5 ಗುಂಪುಗಳಲ್ಲಿ ವಿಂಗಡಿಸಲಾಗಿದ್ದು, ಎ, ಬಿ, ಸಿ ಗುಂಪಿ ನಲ್ಲಿ ತಲಾ 8 ತಂಡಗಳಿದ್ದರೆ, ಇ, ಎ್ ಗುಂಪಿನಲ್ಲಿ ತಲಾ 7 ತಂಡಗಳಿವೆ. ಗುಂಪಿನ ಅಗ್ರ ತಂಡಗಳು ಕ್ವಾರ್ಟರ್‌ೈನಲ್‌ಗೇರಿದರೆ, ಅಂಕಪಟ್ಟಿಯಲ್ಲಿ 6ರಿಂದ 11ರವರೆಗಿನ ಸ್ಥಾನ ಪಡೆದ ತಂಡಗಳು 16ರ ಘಟ್ಟದಲ್ಲಿ ಆಡಲಿವೆ. ನಾಕೌಟ್‌ನ ಎಲ್ಲ ಪಂದ್ಯಗಳು ಮೊಹಾಲಿಯಲ್ಲಿ ನಡೆಯಲಿವೆ.

ಕರ್ನಾಟಕ ಪಂದ್ಯಗಳು

ದಿನಾಂಕ ಎದುರಾಳಿ ಆರಂಭ

ಅ.11 ತಮಿಳುನಾಡು ಬೆ.11

ಅ. 19 ಮಧ್ಯಪ್ರದೇಶ ಸ. 4.30

ಅ. 21 ದೆಹಲಿ ಬೆ.11

ಅ.23 ನಾಗಲ್ಯಾಂಡ್ ಬೆ.11

ಅ.25 ಉತ್ತರಪ್ರದೇಶ ಬೆ.11

ಅ.27 ತ್ರಿಪುರ ಸ.4.30

ನೇರ ಪ್ರಸಾರ: ಜಿಯೋ ಸಿನಿಮಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net