

ನವದೆಹಲಿ: ನಿನ್ನೆ ನಡೆದ ವಿಶ್ವಕಪ್ ಏಕದಿನ ಪಂದ್ಯದಲ್ಲಿ ಅಫಘಾನಿಸ್ತಾನ ವಿರುದ್ಧ ಪಾಕ್ 8 ವಿಕೆಟ್ಗಳ ಹೀನಾಯ ಸೋಲು ಕಂಡಿದೆ. ಸತತ ಸೋಲಿನಿಂದ ಬೇಸರಗೊಂಡ ಪಾಕಿಸ್ತಾನದ ಮಾಜಿ ಆಟಗಾರನೊಬ್ಬ ತಮ್ಮದೇ ದೇಶದ ಆಟಗಾರರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಸತತ ಹ್ಯಾಟ್ರಿಕ್ ಸೋಲು ಕಂಡು ವಿಶ್ವಕಪ್ ಟೂರ್ನಿಯಿಂದ ಹೊರಬೀಳುವ ಸ್ಥಿಯಲ್ಲಿರುವ ಪಾಕಿಸ್ತಾನ ತಂಡದ ಪ್ರದರ್ಶನ ಕಂಡು ಮಾಜಿ ಆಟಗಾರ ವಾಸಿಂ ಅಕ್ರಮ್ ಕಿಡಿಕಾರಿದ್ದಾರೆ.
ಪಾಕಿಸ್ತಾನದ ಕ್ರಿಕೆಟ್ ಶೋ ಕಾರ್ಯಕ್ರಮದಲ್ಲಿ ಮಾತನಾಡಿದ ವಾಸಿಂ ಅಕ್ರಮ್, ಇದು ಕೆಟ್ಟ ಸೋಲು, ನಿಜಕ್ಕೂ ಇದು ಮುಜುಗರ ತರುವಂತದ್ದು, ವೃತ್ತಿಪರರಾಗಿ ನೀವು ಪಡೆಯುವ ಹಣಕ್ಕೆ ತಕ್ಕ ಪ್ರದರ್ಶನ ನೀಡುವುದು ಕೂಡ ಪ್ರಮುಖವಾಗಿದೆ. ಆಟಗಾರರು ಪ್ರತಿದಿನ 8 ಕೆಜಿ ಮಟನ್ ತಿಂದರೆ. ಫಿಟ್ನೆಸ್ ಹೇಗೆ ಸಾಧ್ಯ? ಹಿಂದಿನ ಕೋಚಿಂಗ್ ಸ್ಟಾಫ್ ಅಡಿಯಲ್ಲಿ ಪಾಕಿಸ್ತಾನ ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಫೈನಲ್ ತಲುಪಿತ್ತು. ಕೆಜಿಗಟ್ಟಲೆ ಮಟನ್ ತಿನ್ನುವುದನ್ನು ಬಿಟ್ಟು ದಯವಿಟ್ಟು ಮೊದಲು ದೇಶದ ಬಗ್ಗೆ ಯೋಜಿಸಿ ಎಂದು ಹೇಳಿದ್ದಾರೆ
ದೇಶಕ್ಕಾಗಿ ಆಡುವಾಗ ನಿಮ್ಮಲ್ಲಿ ಒಂದು ನಿರ್ದಿಷ್ಟ ಮಾನದಂಡ ಇರಬೇಕು. ಮಿಸ್ಬಾ ಉಲ್ ಹಕ್ ಅವರು ಕೋಚ್ ಆಗಿದ್ದ ವೇಳೆ ಫಿಟ್ನೆಸ್ ಮಾನದಂಡವನ್ನು ಜಾರಿಗೆ ತಂದಿದ್ದರು. ಅವರ ವಿರುದ್ಧವೇ ನೀವು ಆರೋಪ ಹೊರಿಸಿ ಹುದ್ದೆಯಿಂದ ಕೆಳಗಿಳಿಸಿದ್ದೀರಿ. ಫೀಲ್ಡಿಂಗ್ ಎನ್ನುವುದು ಫಿಟ್ನೆಸ್‌ಗೆ ಸಂಬಂಧಿಸಿದ್ದು. ನಮ್ಮಲ್ಲಿ ಆ ಕೊರತೆಯಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ದುರದೃಷ್ಟವಶಾತ್, ಪಾಕ್ ತಂಡದ ನಾಯಕ ಬಾಬರ್ ಅಜಮ್ ನೇತೃತ್ವದಲ್ಲಿ ಭಾರತದಲ್ಲಿ ವಿಶ್ವಕಪ್ ಆಡುತ್ತಿರುವ ತಂಡವು 2 ಮ್ಯಾಚ್ಗಳನ್ನು ಗೆದ್ದು ನಂತರ ಮೂರು ಆಟಗಳನ್ನು ಸೋತು ಭಾರಿ ಮುಖ ಭಮಘವನ್ನು ಅನುಭವಿಸಿದೆ. ಆಟಗಾರರು ತುಂಬಾ ಸರಳವಾಗಿ ಒಂದು ಆಯಾಮದವರಾಗಿದ್ದಾರೆ. ತಂಡವು ಹ್ಯಾಟ್ರಿಕ್ ಸೋಲುಗಳನ್ನು ಅನುಭವಿಸಿದೆ.