ಸೂರ್ಯವಂಶಿ ಶತಕ ವೈಭವ: ಮನೀಷ್ ಪಾಂಡೆ ದಾಖಲೆ ಮುರಿದ 14 ವರ್ಷದ ಬ್ಯಾಟರ್

New Project
Published on

ಜೈಪುರ: ಹದಿಹರೆಯದ ಎಡಗೈ ಬ್ಯಾಟರ್ ವೈಭವ ಸೂರ್ಯವಂಶಿ (101 ರನ್, 38 ಎಸೆತ, 7 ಬೌಂಡರಿ, 11 ಸಿಕ್ಸರ್) ಸಿಡಿಸಿದ ಅಬ್ಬರದ ಚೊಚ್ಚಲ ಶತಕದ ಬಲದಿಂದ ರಾಜಸ್ಥಾನ ರಾಯಲ್ಸ್ ಐಪಿಎಲ್ 18ನೇ ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್ ಎದುರು 8 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಸತತ ಐದು ಪಂದ್ಯಗಳ ಸೋಲಿನ ಸರಪಳಿ ಕಳಚಿದ ರಿಯಾನ್ ಪರಾಗ್ ಪಡೆ 8ನೇ ಸ್ಥಾನಕ್ಕೇರಿ ಪ್ಲೇಆ್ ಆಸೆ ಜೀವಂತವಿರಿಸಿದೆ. ಟೂರ್ನಿಯಲ್ಲಿ 3ನೇ ಸೋಲು ಕಂಡ ಶುಭಮಾನ್ ಗಿಲ್ ಪಡೆ 2ರಿಂದ 3ನೇ ಸ್ಥಾನಕ್ಕೆ ಕುಸಿಯಿತು.

ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ

ಗುಜರಾತ್ ನಾಯಕ ಶುಭಮಾನ್ ಗಿಲ್ (84 ರನ್, 50 ಎಸೆತ, 5 ಬೌಂಡರಿ, 4 ಸಿಕ್ಸರ್) ಆಕರ್ಷಕ ಬ್ಯಾಟಿಂಗ್ ಹಾಗೂ ಸ್ಲಾಗ್ ಓವರ್‌ಗಳಲ್ಲಿ ಜೋಸ್ ಬಟ್ಲರ್ (50* ರನ್, 26 ಎಸೆತ, 3 ಬೌಂಡರಿ, 4 ಸಿಕ್ಸರ್) ಬಿರುಸಿನಾಟದ ಬಲದಿಂದ 4 ವಿಕೆಟ್‌ಗೆ 209 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಪ್ರತಿಯಾಗಿ ಬಿಹಾರದ 14 ವರ್ಷದ ವೈಭವ್ ಹಾಗೂ ಯಶಸ್ವಿ ಜೈಸ್ವಾಲ್ (70* ರನ್, 40 ಎಸೆತ, 9 ಬೌಂಡರಿ, 2 ಸಿಕ್ಸರ್) ಭರ್ಜರಿ ಜತೆಯಾಟದ ನೆರವಿನಿಂದ ರಾಜಸ್ಥಾನ ತಂಡ 15.5 ಓವರ್‌ಗಳಲ್ಲಿ 2 ವಿಕೆಟ್‌ಗೆ 212 ರನ್‌ಗಳಿಸಿ ಗೆದ್ದು ಬೀಗಿತು. 3 ರನ್ ಬೇಕಿದ್ದಾಗ ಸಿಕ್ಸರ್ ಸಿಡಿಸಿ ಪರಾಗ್ 25 ಎಸೆತ ಇರುವಂತೆಯೇ ಗೆಲುವು ಸಾರಿದರು.

1. ವೈಭವ್ ಸೂರ್ಯವಂಶಿ (14 ವರ್ಷ, 32 ದಿನ) ಟಿ20 ಇತಿಹಾಸದಲ್ಲಿ ಶತಕ ಸಿಡಿಸಿದ ಅತಿ ಕಿರಿಯ ಬ್ಯಾಟರ್ ಎನಿಸಿದರು. ಮಹಾರಾಷ್ಟ್ರದ ವಿಜಯ್ ಜೋಲ್ (18 ವರ್ಷ, 118 ದಿನಗಳು) ಹಿಂದಿನ ಸಾಧಕ.

2. ವೈಭವ್ ಸೂರ್ಯವಂಶಿ (35 ಎಸೆತ) ಐಪಿಎಲ್‌ನಲ್ಲಿ ಅತಿ ವೇಗದ ಶತಕ ಸಿಡಿಸಿದ 2ನೇ ಹಾಗೂ ಭಾರತೀಯ ಬ್ಯಾಟರ್ ಎನಿಸಿದರು. ಕ್ರಿಸ್‌ಗೇಲ್ (30) ಮೊದಲಿಗ. ಮನೀಷ್ ಪಾಂಡೆ (19 ವರ್ಷ, 253 ದಿನ) ಹಿಂದಿನ ವೇಗದ ಭಾರತೀಯ ಸಾಧಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net