ಜಿಂಬಾಬ್ವೆ ವಿರುದ್ಧ ಅರ್ಧಶತಕ; ಆಸ್ಟ್ರೇಲಿಯಾ ನೆಲದಲ್ಲಿ ಮತ್ತೊಂದು ದಾಖಲೆ ಬರೆದ ಸೂರ್ಯಕುಮಾರ್ ಯಾದವ್

Yadav
Published on

ಮೆಲ್ಬೋರ್ನ್​​: ಟಿ-20 ವಿಶ್ವಕಪ್​ನಲ್ಲಿ ಭಾರತ ತಂಡ ಜಿಂಬಾಬ್ಬೆ ವಿರುದ್ಧ 71 ರನ್​ಗಳ ಜಯ ದಾಖಲಿಸಿದೆ. ಭಾರತದ ಪರ ಅರ್ಧಶತಕ ದಾಖಲಿಸಿ ತಂಡದ ಮೊತ್ತ 186 ಆಗುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಸೂರ್ಯಕುಮಾರ್ ಯಾದವ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ 61 ಸಿಡಿಸಿ ಮಿಂಚಿದರು. ಈ ಮೂಲಕ ತಮ್ಮ ಹೆಸರಿಗೆ ಹೊಸದೊಂದ ದಾಖಲೆ ಮಾಡಿದ್ದಾರೆ. ಕಳೆದ ಸೌತ್​ಆಫ್ರಿಕಾ ಪಂದ್ಯದಲ್ಲಿ ಅರ್ಧಶತಕ ಬಾರಿಸುವ ಮೂಲಕ ಐಸಿಸಿಯ ನಂ.1 ಬ್ಯಾಟ್ಸ್​ಮನ್ ಕೀರ್ತಿಗೆ ಪಾತ್ರರಾಗಿದ್ದರು. ಇದೀಗ ಸೂರ್ಯಕುಮಾರ್ ಯಾದವ್, ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್​​ನಲ್ಲಿ 1000ರನ್ ಕಲೆ ಹಾಕಿದ್ದಾರೆ. 28 ಪಂದ್ಯಗಳನ್ನಾಡಿ ವೇಗವಾಗಿ ಸಾವಿರ್ ರನ್ ಕಲೆ ಹಾಕುವ ಮೂಲಕ ಹೊಸ ದಾಖಲೆ ಮಾಡಿದ್ದಾರೆ.

ಜಿಂಬಾಬ್ವೆ ವಿರುದ್ಧದ ಪಂದ್ಯದ ನಿರ್ಣಾಯಕ ಹೊತ್ತಿನಲ್ಲಿ ಸೂರ್ಯಕುಮಾರ್ ಯಾದವ್ ಜವಾಬ್ದಾರಿಯುತವಾಗಿ ಇನ್ನಿಂಗ್ಸ್​ ಕಟ್ಟಿದರು. ಆರಂಭದಿಂದಲೂ ಬಿರುಸಿನ ಬ್ಯಾಟಿಂಗ್​​ಗೆ ಮುಂದಾದ ಸೂರ್ಯಕುಮಾರ್, 25 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 6 ಬೌಂಡರಿ ಸಿಡಿಸಿ ಮಿಂಚಿದರು. ಭಾರತ ತಂಡ ಜಿಂಬಾಬ್ವೆಗೆ ಸವಾಲಿನ ಮೊತ್ತದ ಟಾರ್ಗೆಟ್ ನೀಡುವಲ್ಲಿ ಸೂರ್ಯಕುಮಾರ್ ಯಾದವ್ ಇನ್ನಿಂಗ್ಸ್ ಪ್ರಮುಖವಾಗಿತ್ತು.

ಸದ್ಯ ಟಿ-20 ವಿಶ್ವಕಪ್​ನಲ್ಲಿ ಭಾರತ ತಂಡದ ಪರವಾಗಿ ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಇಬ್ಬರು ಬ್ಯಾಟ್ಸ್​ಮನ್​ಗಳು ಈಗಾಗಲೇ 3 ಅರ್ಧಶತಕ ಸಿಡಿಸಿ ಮಿಂಚುತ್ತಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net