

ನವದೆಹಲಿ: ಏಷ್ಯಾ ಕಪ್ 2023ಕ್ಕೂ ಮುನ್ನ ಭಾರತೀಯ ತಂಡದ ಆಟಗಾರರು ಬೆಂಗಳೂರಿನಲ್ಲಿ ವಿಶೇಷ ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಶ್ರೀಲಂಕಾಕ್ಕೆ ತೆರಳುವ ಮೊದಲು ಎಲ್ಲಾ ಆಟಗಾರರು ಫಿಟ್ನೆಸ್ ಪರೀಕ್ಷೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ, ಸೆಪ್ಟೆಂಬರ್ 2 ರಂದು ಪಾಕಿಸ್ತಾನದ ವಿರುದ್ಧ ಹೈ ವೋಲ್ಟೇಜ್ ಪಂದ್ಯ ಪ್ರವೇಶಿಸುತ್ತಾರೆ (IND vs PAK). ಸದ್ಯ ವೆಸ್ಟ್ ಇಂಡೀಸ್ ಪ್ರವಾಸದಿಂದ ವಾಪಸ್ಸಾಗಿರುವ ಸೂರ್ಯಕುಮಾರ್ ಯಾದವ್ ವಿರಾಟ್ ಕೊಹ್ಲಿ ಅವರ ಫಿಟ್ನೆಸ್ ಬಗ್ಗೆ ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.
ಹೌದು, ಅನುಷ್ಕಾ ಶರ್ಮಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಫೋಟೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಅವರು ಕೊಹ್ಲಿಯೊಂದಿಗೆ ಓಡುತ್ತಿರುವುದನ್ನು ಕಾಣಬಹುದು. ಕೊಹ್ಲಿ ಮತ್ತು ಅನುಷ್ಕಾ ಅವರ ಈ ಫೋಟೋವನ್ನು ಜಾಹೀರಾತಿನ ಸಂದರ್ಭದಲ್ಲಿ ತೆಗೆಯಲಾಗಿದೆ. ಇಬ್ಬರ ಈ ಸುಂದರ ಫೋಟೋವನ್ನು ಅಭಿಮಾನಿಗಳು ಬಹಳ ಇಷ್ಟಪಟ್ಟಿದ್ದಾರೆ. ಇದೇ ವೇಳೆ ಭಾರತ ತಂಡದ ಸ್ಟಾರ್ ಬ್ಯಾಟ್ಸ್ ಮನ್ ಸೂರ್ಯಕುಮಾರ್ ಯಾದವ್ ಕಾಮೆಂಟ್ ಮಾಡಿರುವುದು ಸಖತ್ ವೈರಲ್ ಆಗಿದೆ.
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ಫೋಟೋ ನೋಡಿ ಸೂರ್ಯಕುಮಾರ್ ಯಾದವ್ ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ವಿಶ್ವದ ನಂಬರ್ ಒನ್ ಟಿ20 ಆಟಗಾರ ಸೂರ್ಯ ಕೊಹ್ಲಿಯ ಕಾಲನ್ನು ಎಳೆದು "Bhaiya thoda running technique halka padra hai apka'' ಎಂದು ಕಾಮೆಂಟ್ ಮಾಡಿದ್ದಾರೆ. ಸೂರ್ಯ ಅವರ ಈ ಕಾಮೆಂಟ್‌ಗೆ 7000 ಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ.
ಆಟಗಾರರ ಫಿಟ್ನೆಸ್ ಮೇಲೆ ತೀವ್ರ ನಿಗಾ ಬುಧವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಕೊಹ್ಲಿ ಮತ್ತು ಸೂರ್ಯಕುಮಾರ್ ಕಾಣಿಸಿಕೊಂಡಿದ್ದು, ವಿಶೇಷ ಶಿಬಿರದಲ್ಲಿ ಭಾಗವಹಿಸಲು ಇಬ್ಬರೂ ಮುಂಬೈನಿಂದ ಬೆಂಗಳೂರಿಗೆ ಬಂದರು. ಏಷ್ಯಾಕಪ್ ಮತ್ತು ವಿಶ್ವಕಪ್‌ಗೂ ಮುನ್ನ ಆಟಗಾರರಿಗಾಗಿ ಬಿಸಿಸಿಐ ಫಿಟ್‌ನೆಸ್ ಪರೀಕ್ಷಾ ಶಿಬಿರಗಳನ್ನು ಆಯೋಜಿಸಿರುವುದನ್ನು ಗಮನಿಸಬಹುದು. ಆಗಸ್ಟ್ 25 ರಂದು ರಾಹುಲ್ ದ್ರಾವಿಡ್ ಮತ್ತು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಕೂಡ ಶಿಬಿರದಲ್ಲಿ ಭಾಗವಹಿಸಲಿದ್ದು, ಆಟಗಾರರ ಫಿಟ್ನೆಸ್ ಮೇಲೆ ತೀವ್ರ ನಿಗಾ ಇಡಲಿದ್ದಾರೆ.