

ಮುಂಬೈ: ರಾಜ್ಕೋಟ್ನ ನಿರಂಜನ್ ಷಾ ಕ್ರೀಡಾಂಗಣದಲ್ಲಿ ಜನವರಿ 28ರಂದು ಭಾರತ ಹಾಗೂ ಇಂಗ್ಲೆಂಡ್ ನಡುವೆ ನಡೆದ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಆತಿಥೇಯರನ್ನು ಸೋಲಿಸುವ ಮೂಲಕ ಪ್ರವಾಸಿ ತಂಡವು ಸರಣಿ ಜೀವಂತವಿರಿಸಿದೆ. ಈ ಮೂಲಕ ಸೂರ್ಯಕುಮಾರ್ ಯಾದವ್ (Suryakumar Yadav) ಹಾಗೂ ಕೋಚ್ ಗೌತಮ್ ಗಂಭೀರ್ (Gautam Gambhir) ಕಾಂಬಿನೇಷನ್ನ ಅಜೇಯ ಓಟಕ್ಕೂ ಬ್ರೇಕ್ ಬಿದ್ದಿದ್ದು, ಸೋಲಿಗೆ ಕಾರಣವಾದ ಅಂಶಗಳನ್ನು ತಂಡ ಪರಮಾರ್ಶಿಸುತ್ತಿದೆ.
ಇನ್ನೂ ಟೀಮ್ ಇಂಡಿಯಾ ಸೋಲಿಗೆ ಮಾಜಿ ಆಟಗಾರ ಆಕಾಶ್ ಚೋಪ್ರಾ ಮಾತನಾಡಿದ್ದು, ಸೋಲಿಗೆ ಕಾರಣವಾದ ಅಂಶವನ್ನು ಉಲ್ಲೇಖಿಸಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಈ ಸಂಬಂಧ ವಿಡಿಯೋ ಪೋಸ್ಟ್ ಮಾಡಿರುವ ಆಕಾಶ್ ಚೋಪ್ರಾ, ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಒಂದು ಟ್ರಿಕ್ ಮಿಸ್ ಮಾಡಿದ್ದೇ ಭಾರತದ ಸೋಲಿಗೆ ಕಾರಣವಾಯ್ತು. ನನ್ನ ಪ್ರಕಾರ ಮೊಹಮ್ಮದ್ ಶಮಿಗೆ ನಾಲ್ಕನೇ ಓವರ್ ಎಸೆಯಲು ಅವಕಾಶ ನೀಡಬೇಕಿತ್ತು.
ಶಮಿಗೆ ಡೆತ್ ಓವರ್ನಲ್ಲಿ ಬೌಲಿಂಗ್ ಮಾಡಲು ನಾಯಕ ಅವಕಾಶ ನೀಡಿದರು. ಆ ಸಮಯಕ್ಕೆ 8-9 ವಕೆಟ್ಗಳು ಬಿದ್ದಿದ ಕಾರಣ ಶಮಿಗೆ ಡೆತ್ ಓವರ್ನಲ್ಲಿ ಹೆಚ್ಚಿನ ಒತ್ತಡ ಇಲ್ಲದ ಕಾರಣ ಅವಕಾಶ ಕೊಡಬೇಕಿತ್ತು. 14 ತಿಂಗಳ ಬಳಿಕ ಶಮಿ ಕಮ್ಬ್ಯಾಕ್ ಮಾಡಿದ್ದು, ಆತ ಹೊಂದಿಕೊಳ್ಳಲು ಸ್ವಲ್ಪ ಸಮಯ ಹಿಡಿಯುತ್ತದೆ ಎಂದು ಟೀಮ್ ಇಂಡಿಯಾ ಮಾಜಿ ಆಟಗಾರ ಆಕಾಶ್ ಚೋಪ್ರಾ ತಂಡದ ಸೋಲಿಗೆ ಕಾರಣವನ್ನು ಉಲ್ಲೇಖಿಸಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಮೂರನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 20 ಓವರ್ಗಳಲ್ಲಿ 9 ವಿಕೆಟ್ಗಳ ನಷ್ಟಕ್ಕೆ 171 ರನ್ ಗಳಿಸಿತು. ಆರಂಭಿಕ ಬೆನ್ ಡಕೆಟ್ (51 ರನ್ 28 ಎಸೆತ 7 ಬೌಂಡರಿ, 2 ಸಿಕ್ಸರ್) ಅರ್ಧಶತಕ ಗಳಿಸಿದರೆ, ಲಿಯಾಮ್ ಲಿವಿಂಗ್ಸ್ಟೋನ್ (43 ರನ್ 24 ಎಸೆತ, 1 ಬೌಂಡರಿ, 5 ಸಿಕ್ಸರ್) ಅಬ್ಬರದ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಟೀಮ್ ಇಂಡಿಯಾ ಪರ ವರುಣ್ ಚಕ್ರವರ್ತಿ (5/24) ಅದ್ಭುತ ಪ್ರದರ್ಶನ ನೀಡಿದರು. ಆದರೆ, ಟೀಮ್ ಇಂಡಿಯಾದ ಬ್ಯಾಟಿಂಗ್ ವೈಫಲ್ಯದಿಂದ ಸೋಲು ಅನುಭವಿಸಬೇಕಾಯಿತು.