ಸೆಂಚುರಿ ಹೊಡೆದ ಸೂರ್ಯಕುಮಾರ; 300 ರನ್ ಗಳಿಸುತ್ತಾ ಭಾರತ?

suryakumar yadav
Published on

ನವದೆಹಲಿ: ಇದೀಗ ನಡೆಯುತ್ತಿರುವ ಭಾರತ V/S ಶ್ರೀಲಂಕಾ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿತ್ತು. ಬಳಿಕ ನಿರಂತರವಾಗಿ ರನ್ ಮಳೆಯೇ ಹರಿಯುತ್ತಿದ್ದು ಒಟ್ಟು ರನ್ ಸಂಖ್ಯೆ 200ರ ಗಡಿ ದಾಟಿಸಿದೆ.

ಶುಭಂ ಗಿಲ್ 3 ಸಿಕ್ಸ್ ಹಾಗೂ 2 ಫೋರ್ ಬಾರಿಸಿದ್ದಾರೆ. ಇದೀಗ ಸೂರ್ಯಕುಮಾರ್ ಯಾದವ್ ಬ್ಯಾಟಿಂಗಿಗೆ ಇಳಿದಿದ್ದು ಸೆಂಚುರಿ ಹೊಡೆದಿದ್ದಾರೆ. 51 ಬಾಲುಗಳಿಗೆ 112 ರನ್ ಗಳಿಸಿರುವ ಇವರು ಒಟ್ಟು 9 ಸಿಕ್ಸ್ ಹಾಗೂ 7 ಫೋರ್ ಹೊಡೆದಿದ್ದಾರೆ. ಇವರು ಮತ್ತು ಅಕ್ಸರ್ ಪಟೇಲ್ ಜೋಡಿಯಾಟ ಆಡುತ್ತಿದ್ದು ಅಕ್ಸರ್ ಪಟೇಲ್ 4 ಫೋರ್ ಬಾರಿಸಿದ್ದಾರೆ. ಇಬ್ಬರೂ ಇನ್ನೂ ಔಟ್ ಆಗಿಲ್ಲ.

ಈಗಾಗಲೇ 20 ಓವರ್ ಮುಗಿದಿದ್ದು 5 ವಿಕೆಟಿಗೆ 228 ರನ್ ಗಳಿಸಿದೆ. ಇನ್ನೂ ಐವರು ಆಟಗಾರರಿಗೆ ಬ್ಯಾಟಿಂಗ್ ಮಾಡಲು ಅವಕಾಶವಿದ್ದು ಟೀಂ ಇಂಡಿಯಾ 300 ರನ್ ದಾಟಿಸುವ ಎಲ್ಲಾ ಸಾಧ್ಯತೆ ಎದ್ದು ಕಾಣುತ್ತಿದೆ. ಶ್ರೀಲಂಕಾಗೆ 300ರ ಮೇಲಿನ ಟಾರ್ಗೆಟ್ ಸಿಕ್ಕರೆ ಪಂದ್ಯ ಇನ್ನಷ್ಟು ರೋಚಕ ಆಗುವುದರಲ್ಲಿ ಸಂಶಯವಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net