2 ಮನೆ ಖರೀದಿಸಿದ ಸೂರ್ಯಕುಮಾರ್ ಯಾದವ್! IPL ಗಳಿಕೆಗಿಂತ ಒಂದೂವರೆ ಪಟ್ಟು ಹೆಚ್ಚು ಹಣ ನೀಡಿ ಫ್ಲಾಟ್ ಖರೀದಿ​​... Suryakumar Yadav Buys Homes

suryakumar
Published on

ಮುಂಬೈ: (Suryakumar Yadav Buys Homes) ಟೀಮ್ ಇಂಡಿಯಾ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮುಂಬೈನಲ್ಲಿ ಐಷಾರಾಮಿ ಎರಡು ಫ್ಲ್ಯಾಟ್​ಗಳನ್ನು 21.1 ಕೋಟಿ ರೂ.ಗೆ ಖರೀದಿಸಿದ್ದಾರೆ. ಆದರೆ ಇವರು IPL ಗಳಿಕೆಗಿಂತ ದುಬಾರಿ ಮೊತ್ತದಲ್ಲಿ 2 ಮನೆ ಖರೀದಿಸಿದ್ದಾರೆ ಎನ್ನುವುದು ಬಿಸಿ ಬಿಸಿ ಸುದ್ದಿಯಾಗಿದೆ.

ಈ ಬಾರಿಯ ಐಪಿಎಲ್​ಗೂ ಮುನ್ನ ಸೂರ್ಯಕುಮಾರ್ ಯಾದವ್ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ 16.35 ಕೋಟಿ ರೂ.ಗೆ ಉಳಿಸಿಕೊಂಡಿದೆ. ಐಪಿಎಲ್ 2025 ಕ್ಕೆ ಅವರು ಪಡೆಯುತ್ತಿರುವ ಹಣಕ್ಕಿಂತ ಸುಮಾರು ಒಂದೂವರೆ ಪಟ್ಟು ಹೆಚ್ಚು ಮೊತ್ತ ನೀಡಿ 2 ಮನೆಗಳನ್ನು ಖರೀದಿಸಿದ್ದಾರೆ.

ಸೂರ್ಯಕುಮಾರ್ ಯಾದವ್ ಅವರ ಎರಡೂ ಫ್ಲಾಟ್‌ಗಳು ಗೋದ್ರೇಜ್ ಸ್ಕೈ ಟೆರೇಸ್ ಯೋಜನೆಯಲ್ಲಿವೆ. ಇದರ ಒಟ್ಟು ಕಾರ್ಪೆಟ್ ಪ್ರದೇಶ 4,222.7 ಚದರ ಅಡಿ. ಅಲ್ಲದೆ ಫ್ಲಾಟ್‌ಗಳನ್ನು 4,568 ಚದರ ಅಡಿಗಳಲ್ಲಿ ನಿರ್ಮಿಸಲಾಗಿದೆ.ಎರಡೂ ಫ್ಲಾಟ್‌ಗಳು ಅಪಾರ್ಟ್‌ಮೆಂಟ್‌ನ ಎರಡು ವಿಭಿನ್ನ ಮಹಡಿಗಳಲ್ಲಿವೆ. ಫ್ಲಾಟ್ ಇರುವ ಅಪಾರ್ಟ್‌ಮೆಂಟ್‌ನಲ್ಲಿ ಕಾರ್ ಪಾರ್ಕಿಂಗ್ ಇದೆ.

ಸದ್ಯ ಐಪಿಎಲ್​ನಲ್ಲಿ ತೊಡಗಿಸಿಕೊಂಡಿರುವ ಸೂರ್ಯಕುಮಾರ್ ಯಾದವ್ ಮುಂದಿನ ಪಂದ್ಯಕ್ಕಾಗಿ ಸಜ್ಜಾಗುತ್ತಿದ್ದಾರೆ. ಇದರ ನಡುವೆಯೇ ಮಹಾನಗರ ಮುಂಬೈನಲ್ಲಿ ಸೂರ್ಯ ಎರಡು ಫ್ಲಾಟ್​ಗಳನ್ನು ಖರೀದಿಸಿರುವುದು ವಿಶೇಷವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net