

ಮುಂಬೈ: ಸತತ ಸೋಲುಗಳಿಂದ ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿರುವ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್-17ರ ತನ್ನ 4ನೇ ಲೀಗ್ ಪಂದ್ಯದಲ್ಲಿ ಮೊದಲ ಗೆಲುವಿನ ಹುಡುಕಾಟ ನಡೆಸಲಿದೆ. ತವರು ಮೈದಾನ ವಾಂಖೆಡೆ ಅಂಗಣದಲ್ಲಿ ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದ್ದು, ನಾಯಕ ಹಾರ್ದಿಕ್ ಪಾಂಡ್ಯ ಪಡೆ ಖಾತೆ ತೆರೆಯುವ ನಿರೀಕ್ಷೆಯಲ್ಲಿದೆ. ವಿಶ್ವ ನಂ.1 ಟಿ20 ಬ್ಯಾಟರ್ ಸೂರ್ಯಕುಮಾರ್ ಯಾದವ್ ಆಗಮನ ಆತಿಥೇಯರ ಬಲ ಹೆಚ್ಚಿಸಿದೆ.
ರಾಜಸ್ಥಾನ ರಾಯಲ್ಸ್ ಎದುರು ಹಿಂದಿನ ಪಂದ್ಯದಲ್ಲಿ ಸೋಲು ಕಂಡಿರುವ ಮುಂಬೈ ಸತತ ಸೋಲುಗಳಿಂದ ಕಂಗೆಟ್ಟಿದೆ. ಇನ್ನು ಡೆಲ್ಲಿ ತಂಡ ಆಡಿರುವ 4 ಪಂದ್ಯಗಳಲ್ಲಿ 1 ಗೆಲುವು, 3 ಸೋಲಿನೊಂದಿಗೆ 2 ಅಂಕ ಕಲೆಹಾಕಿದೆ. ಹಿಂದಿನ ಮುಖಾಮುಖಿಯಲ್ಲಿ ಕೆಕೆಆರ್ ವಿರುದ್ಧ 106 ರನ್‌ಗಳ ಹೀನಾಯ ಸೋಲು ಕಂಡಿರುವುದು ರಿಷಭ್ ಪಂತ್ ಪಡೆಯ ರನ್‌ರೇಟ್‌ಗೂ ದೊಡ್ಡ ಹೊಡೆತ ನೀಡಿದೆ. ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ರನ್ ಬಿಟ್ಟುಕೊಟ್ಟಿರುವ ಉಭಯ ತಂಡಗಳ ಮುಖಾಮುಖಿ ಕುತೂಹಲ ಮೂಡಿಸಿದೆ.
ಮುಂಬೈಗೆ ಆರಂಭಿಕ ಚಿಂತೆ: ಟೂರ್ನಿಯಲ್ಲಿ ಲಯ ಕಂಡುಕೊಳ್ಳಲು ಪರದಾಡುತ್ತಿರುವ ಮುಂಬೈಗೆ ಇದುವರೆಗೆ ರೋಹಿತ್ ಶರ್ಮ ಹಾಗೂ ಇಶಾನ್ ಕಿಶನ್ ಉತ್ತಮ ಆರಂಭ ಒದಗಿಸುವಲ್ಲಿ ವಿಲವಾಗಿದ್ದಾರೆ. ಸೂರ್ಯಕುಮಾರ್ ಅನುಪಸ್ಥಿತಿಯಲ್ಲಿ ಬ್ಯಾಟಿಂಗ್ ಕ್ರಮಾಂಕದ ಸಂಯೋಜನೆ ತಂಡಕ್ಕೆ ತಲೆನೋವಾಗಿ ಪರಿಣಮಿಸಿತ್ತು. ಸೂರ್ಯ ಆಗಮನ ಜತೆಗೆ ತಿಲಕ್ ವರ್ಮ, ಟಿಮ್ ಡೇವಿಡ್ ಹಾಗೂ ಹಾರ್ದಿಕ್ ಪಾಂಡ್ಯ ಅವರಿಂದ ಕೂಡಿರುವ ಬ್ಯಾಟಿಂಗ್ ವಿಭಾಗ ಡೆಲ್ಲಿಗೆ ಸವಾಲೆನಿಸಲಿದೆ. ಬೌಲಿಂಗ್‌ನಲ್ಲಿ ಅನುಭವಿ ಜಸ್‌ಪ್ರೀತ್ ಬುಮ್ರಾಗೆ ಸಾಥ್ ನೀಡಬಲ್ಲ ಆಟಗಾರರ ಕೊರತೆ ಮುಂಬೈ ತಂಡಕ್ಕಿದೆ. ಯುವ ಆಟಗಾರರಿಂದ ಕೂಡಿರುವ ಬೌಲಿಂಗ್ ವಿಭಾಗದಲ್ಲಿ ಆಕಾಶ್ ಮಧ್ವಲ್ ಮಾತ್ರ ಲಯದಲ್ಲಿದ್ದಾರೆ. ಸ್ಪಿನ್ ವಿಭಾಗದಲ್ಲಿ ಅನುಭವಿ ಪೀಯುಷ್ ಚಾವ್ಲಾ ವೈಲ್ಯ ತಂಡಕ್ಕೆ ಪ್ರಮುಖ ಹಿನ್ನಡೆ ತಂದಿದೆ.
ಡೆಲ್ಲಿ ಅಸ್ಥಿರ ನಿರ್ವಹಣೆ: ಮುಂಬೈ ತಂಡವನ್ನು ಮಣಿಸಲು ಡೆಲ್ಲಿ ಕ್ಯಾಪಿಟಲ್ಸ್‌ನಿಂದ ಸ್ಥಿರ ನಿರ್ವಹಣೆ ಅಗತ್ಯ. ವಾರ್ನರ್ ಇದುವರೆಗೆ 148 ರನ್‌ಗಳಿಸಿದ್ದು, ರಿಷಭ್ ಪಂತ್ 2 ಅರ್ಧಶತಕ ಸಹಿತ 152 ರನ್ ಕಲೆಹಾಕಿದ್ದಾರೆ. ಟ್ರಿಸ್ಟಾನ್ ಸ್ಟಬ್ಸ್ ಸಹ ತಂಡಕ್ಕೆ ನೆರವಾಗಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಅನುಭವಿಗಳ ಕೊರತೆ ತಂಡಕ್ಕೆ ಹಿನ್ನಡೆ ಎನಿಸಿದೆ. ಕೆಕೆಆರ್ ವಿರುದ್ಧ ದುಬಾರಿಯಾಗಿದ್ದ ಬೌಲರ್‌ಗಳಿಂದ ಸುಧಾರಿತ ಪ್ರದರ್ಶನದ ನಿರೀಕ್ಷೆ ಇದೆ. ಗಾಯದ ಸಮಸ್ಯೆಯಿಂದ ಕಳೆದ ಪಂದ್ಯ ತಪ್ಪಿಸಿಕೊಂಡಿದ್ದ ಮುಕೇಶ್ ಕುಮಾರ್ ಆಡುವುದು ಅನುಮಾನ ಎನಿಸಿದೆ.
ಮಿಚೆಲ್ ಮಾರ್ಷ್ ಅಲಭ್ಯ:ಡೆಲ್ಲಿ ಕ್ಯಾಪಿಟಲ್ಸ್ ಆಲ್ರೌಂಡರ್ ಮಿಚೆಲ್ ಮಾರ್ಷ್ ಗಾಯದ ಸಮಸ್ಯೆಗೆ ತುತ್ತಾಗಿದ್ದು, ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಡೆಲ್ಲಿ ತಂಡದ ನಿರ್ದೇಶಕ ಸೌರವ್ ಗಂಗೂಲಿ ಗಾಯದ ಬಗ್ಗೆ ಶನಿವಾರ ಖಾತ್ರಿಪಡಿಸಿದ್ದು, ಮುಂದಿನ ಕೆಲ ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆಗಳಿವೆ. ಮಾರ್ಷ್ ಹಾಲಿ ಟೂರ್ನಿಯಲ್ಲಿ ಆಡಿರುವ 4 ಪಂದ್ಯಗಳಲ್ಲಿ 61 ರನ್‌ಗಳಿಸಿದ್ದು, 1 ವಿಕೆಟ್ ಮಾತ್ರ ಕಬಳಿಸಿದ್ದಾರೆ. ಟೂರ್ನಿ ಆರಂಭಕ್ಕೂ ಮುನ್ನ ಬದಲಿ ಆಟಗಾರನಾಗಿ ಡೆಲ್ಲಿ ತಂಡ ಸೇರಿರುವ ಜೇಕ್ ್ರೆಸ್ ಗುಕ್‌ಬರ್ಗ್, ಮಿಚೆಲ್ ಮಾರ್ಷ್ ಸ್ಥಾನ ತುಂಬುವ ನಿರೀಕ್ಷೆ ಇದೆ.
ಮುಖಾಮುಖಿ: 33
ಮುಂಬೈ: 18
ಡೆಲ್ಲಿ:15
ಆರಂಭ: ಮಧ್ಯಾಹ್ನ 3.30