ಚೆಪಾಕ್‌ನಲ್ಲಿ ಡೆಲ್ಲಿ-ಸನ್‌ರೈಸರ್ಸ್‌ ಮುಖಾಮುಖಿ

DELHI AN SRH MATCH FOR WEB
Published on

ಚೆನ್ನೈ: ಹ್ಯಾಟ್ರಿಕ್ ಸೋಲಿನ ಬಳಿಕ ಗೆಲುವಿನ ಹಳಿಗೇರಿರುವ ಸನ್‌ರೈಸರ್ಸ್‌ ಹೈದರಾಬಾದ್ ತಂಡ ಐಪಿಎಲ್-14ರಲ್ಲಿ ಭಾನುವಾರದ 2ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಬೌಲರ್‌ಗಳಿಗೆ ಹೆಚ್ಚು ನೆರವಾಗುತ್ತಿರುವ ಸ್ಪರ್ಧಾತ್ಮಕ ಪಿಚ್‌ನಲ್ಲಿ ಕಠಿಣ ಪೈಪೋಟಿ ಏರ್ಪಡುವ ನಿರೀಕ್ಷೆ ಇದೆ.

ಚೆಪಾಕ್‌ನಲ್ಲಿ ಇದುವರೆಗೆ ನಡೆದಿರುವ 9 ಪಂದ್ಯಗಳ ಪೈಕಿ ಕೇವಲ ಎರಡು ಬಾರಿಯಷ್ಟೇ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು 170ರ ಗಡಿ ದಾಟಿವೆ. ಸನ್‌ರೈಸರ್ಸ್‌ ಚೆಪಾಕ್ ಅಂಗಳದಲ್ಲೇ ಸತತ 5ನೇ ಪಂದ್ಯವಾಡುತ್ತಿದೆ. ಡೇವಿಡ್ ವಾರ್ನರ್ ಹಾಗೂ ಜಾನಿ ಬೇರ್‌ಸ್ಟೋ ಜೋಡಿ ಆರಂಭದಲ್ಲಿ ಉತ್ತಮ ರನ್‌ಗಳಿಸುತ್ತಿದ್ದರೆ, ಮಧ್ಯಮ ಕ್ರಮಾಂಕದ ತಂಡದ ಪಾಲಿಗೆ ದೊಡ್ಡ ಚಿಂತೆಯಾಗಿದೆ. ಕೇನ್ ವಿಲಿಯಮ್ಸನ್ ಫಿಟ್ ಆಗಿ ತಂಡಕ್ಕೆ ವಾಪಸಾಗಿರುವುದು ಸಮಾಧಾನಕರ ವಿಷಯ. ಹ್ಯಾಟ್ರಿಕ್ ಸೋಲಿನ ಬಳಿಕ ಗೆಲುವು ಕಂಡಿರುವ ಸನ್‌ರೈಸರ್ಸ್‌ ತಂಡ ಮತ್ತೊಂದು ಜಯದ ನಿರೀಕ್ಷೆಯಲ್ಲಿದೆ. ವಾರ್ನರ್, ಬೇರ್‌ಸ್ಟೋ, ವಿಲಿಯಮ್ಸನ್, ರಶೀದ್ ಖಾನ್ ಮೇಲೆಯೇ ಹೆಚ್ಚು ಅವಲಂಬಿತವಾಗಿದೆ. ಮತ್ತೊಂದೆಡೆ, ಶಿಖರ್ ಧವನ್ ಹಾಗೂ ಪೃಥ್ವಿ ಷಾ ಜೋಡಿ ಭರ್ಜರಿ ಫಾರ್ಮ್‌ನಲ್ಲಿದೆ. ಅನುಭವಿ ಜೋಡಿ ಅಜಿಂಕ್ಯ ರಹಾನೆ, ಇಶಾಂತ್ ಶರ್ಮ ಜೋಡಿ ಅನುಪಸ್ಥಿತಿಯಲ್ಲಿ ಲಲಿತ್ ಯಾದವ್ ಹಾಗೂ ಆವೇಶ್ ಖಾನ್ ಜೋಡಿ ಗಮನಸೆಳೆಯುತ್ತಿದೆ.

ಸನ್‌ರೈಸರ್ಸ್‌: ಹ್ಯಾಟ್ರಿಕ್ ಸೋಲಿನ ಬಳಿಕ ಗೆಲುವಿನ ಹಳಿಗೇರಿರುವ ಸನ್‌ರೈಸರ್ಸ್‌ ತಂಡ ಜಯದ ಕಾಂಬಿನೇಷನ್ ಉಳಿಸಿಕೊಳ್ಳುವ ನಿರೀಕ್ಷೆ ಇದೆ.

ಕಳೆದ ಪಂದ್ಯ: ಪಂಜಾಬ್ ಕಿಂಗ್ಸ್ ಎದುರು 9 ವಿಕೆಟ್ ಜಯ

ಡೆಲ್ಲಿ ಕ್ಯಾಪಿಟಲ್ಸ್: ಹ್ಯಾಟ್ರಿಕ್ ಗೆಲುವಿನ ಕನಸಿನಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡ ಯಾವುದೇ ಬದಲಾವಣೆ ಇಲ್ಲದೆ ಆಡುವ ಸಾಧ್ಯತೆಗಳಿವೆ.

ಕಳೆದ ಪಂದ್ಯ: ಮುಂಬೈ ಇಂಡಿಯನ್ಸ್ ಎದುರು 6 ವಿಕೆಟ್ ಜಯ

ಮುಖಾಮುಖಿ: 18, ಸನ್‌ರೈಸರ್ಸ್‌: 11, ಡೆಲ್ಲಿ ಕ್ಯಾಪಿಟಲ್ಸ್: 7

ಪಂದ್ಯ ಆರಂಭ: ರಾತ್ರಿ: 7.30ಕ್ಕೆ

ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net