

ಬೆಂಗಳೂರು: 14ನೇ ಆವೃತ್ತಿಯ ಐಪಿಎಲ್ 2ನೇ ಭಾಗಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಹೂರ್ತ ಫಿಕ್ಸ್ ಮಾಡಿದೆ. ಶನಿವಾರ ನಡೆದ ಮಂಡಳಿಯ ವಿಶೇಷ ಮಹಾಸಭೆಯಲ್ಲಿ ಯುಎಇಯಲ್ಲಿ ಲೀಗ್ ಆಯೋಜಿಸಲು ಅಧಿಕೃತವಾಗಿ ಒಪ್ಪಿಗೆ ಸೂಚಿಸಲಾಗಿದೆ. ಇದರೊಂದಿಗೆ ಮೂರನೇ ಬಾರಿಗೆ ಅರಬ್ ನಾಡಿನಲ್ಲಿ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ನಡೆಯುವುದು ಖಚಿತವಾಗಿದೆ. ಐಪಿಎಲ್ ಎರಡನೇ ಬಾರಿಗೆ ಮುಹೂರ್ತ ಫಿಕ್ಸ್ ಆದ ಬೆನ್ನಲ್ಲೇ ಸಿಎಸ್ಕೆ ಸ್ಟಾರ್ ಬ್ಯಾಟ್ಸ್ಮನ್ ಸುರೇಶ್ ರೈನಾಗೆ ನೆಟ್ಟಿಗರು ಕಾಲೆಳೆದಿದ್ದಾರೆ. ವೈಯಕ್ತಿಕ ಕಾರಣದಿಂದಾಗಿ 2020ರಲ್ಲಿ ಟೂನಿರ್ಯೂ ಮೊದಲೇ ಯುಎಇಯಿಂದ ತವರಿಗೆ ವಾಪಸಾಗಿದ್ದರು. ಬಾಲ್ಕನಿ ಹೊಂದಿರುವ ರೂಂ ಬುಕ್ ಮಾಡಿ ಎಂದು ಸಿಎಸ್ಕೆ ಆಡಳಿತ ಮಂಡಳಿಗೆ ಹೇಳುವ ಮೂಲಕ ರೈನಾಗೆ ಟಾಂಗ್ ನೀಡಿದ್ದಾರೆ. ಮತ್ತೊಂದೆಡೆ, ರೈನಾ, ಸೀ ಯೂ ಸೂನ್ ದುಬೈ ಎಂದು ಟ್ವೀಟ್ ಮಾಡಿದ್ದಾರೆ.
ಇದೇ ವರ್ಷದ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವಿನ ದ್ವಿಪಕ್ಷೀಯ ಸರಣಿ ಯಶಸ್ವಿಯಾಗಿ ನಡೆದ ಬೆನ್ನಲ್ಲೇ ಬಿಸಿಸಿಐ 14ನೇ ಐಪಿಎಲ್ ಆಯೋಜಿಸಿತು. ಆದರೆ, ಬಯೋಬಬಲ್ ವ್ಯಾಪ್ತಿಯಲ್ಲೂ ಸತತ 2 ದಿನ ಕೋವಿಡ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿವರೆಗೆ ಲೀಗ್ ಮುಂದೂಡಲಾಗಿತ್ತು. ಇದೀಗ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಲೀಗ್ ನಡೆಯಲಿದ್ದು, ಬಹುತೇಕ ಭಾರತೀಯ ಕ್ರಿಕೆಟಿಗರು ಪಾಲ್ಗೊಳ್ಳಲಿದ್ದಾರೆ. ಲೀಗ್ನಲ್ಲಿ ಆಡುವುದನ್ನು ಸುರೇಶ್ ರೈನಾ ಖಚಿತಪಡಿಸಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಕಳೆದ ಬಾರಿ ಭಾಲ್ಕನಿ ಹೊಂದಿರುವ ಹೊಟೇಲ್ ಕೊಠಡಿ ನೀಡಲಿಲ್ಲ ಎಂದು ಸುರೇಶ್ ರೈನಾ ತವರಿಗೆ ವಾಪಸಾದರು ಎಂದೆಲ್ಲಾ ಸುದ್ದಿಯಾಗಿತ್ತು. ಇದಕ್ಕೆ ಅಭಿಮಾನಿಗಳು ರೈನಾ ಅವರನ್ನು ಟ್ವಿಟರ್ನಲ್ಲಿ ಕಾಲೆಳೆದಿದ್ದಾರೆ.
2014ರಲ್ಲಿ ಸಾರ್ವತ್ರಿಕ ಚುನಾವಣೆಯಿಂದಾಗಿ ಅರ್ಧಟೂನಿರ್ ಯುಎಇಯಲ್ಲಿ ನಡೆದರೆ, 2020ರಲ್ಲಿ ಪೂರ್ಣ ಟೂನಿರ್ಯೇ ನಡೆದಿತ್ತು. ಇಂಗ್ಲೆಂಡ್ನ ಮೊಯಿನ್ ಅಲಿ ಲೀಗ್ಗೆ ಅಲಭ್ಯರಾದರೆ, ಸುರೇಶ್ ರೈನಾ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಸಿಎಸ್ಕೆ ತಂಡ ಇದುವರೆಗೂ ಆಡಿರುವ 7 ಪಂದ್ಯಗಳಲ್ಲಿ 5ರಲ್ಲಿ ಜಯ ದಾಖಲಿಸಿ ಲೀಗ್ ಹಂತದಲ್ಲಿ 2ನೇ ಸ್ಥಾನದಲ್ಲಿದೆ.