

Suresh Raina: ಐಪಿಎಲ್ ಇತಿಹಾಸದಲ್ಲಿ ತಮ್ಮ ಹೆಸರನ್ನು ಅದ್ಭುತ ಟಿ20 ಶೈಲಿ ಬ್ಯಾಟಿಂಗ್ನಿಂದ ಇಂದಿಗೂ ಹಸಿರಾಗಿಸಿರುವ ಮಾಜಿ ಕ್ರಿಕೆಟಿಗ ಸುರೇಶ್ ರೈನಾ, ಚೆನ್ನೈ ಸೂಪರ್ ಕಿಂಗ್ಸ್ಗೆ ಹಲವಾರು ಪಂದ್ಯಗಳನ್ನು ಗೆದ್ದುಕೊಟ್ಟ ಟಿ20 ಸ್ಪೆಷಲಿಸ್ಟ್ ಆಟಗಾರ. ಇಂದಿಗೂ ಚೆನ್ನೈ ಫ್ರಾಂಚೈಸಿ ಅಭಿಮಾನಿಗಳಲ್ಲಿ 'ಚಿನ್ನ ತಲಾ'ವಾಗಿ ಉಳಿದುಕೊಂಡಿರುವ ರೈನಾ, ಇದೀಗ ಮುಂದಿನ ಐಪಿಎಲ್ ಸೀಸನ್ಗೆ ಸಿಎಸ್ಕೆ ಸೇರಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.
ಜಿಟಿ ವಿರುದ್ಧ ತನ್ನ ಕೊನೆಯ ಪಂದ್ಯವನ್ನಾಡಿದ ಸಿಎಸ್ಕೆ, 83 ರನ್ಗಳಿಂದ ಗುಜರಾತ್ ಟೈಟನ್ಸ್ ಎದುರು ಗೆದ್ದು, 18ನೇ ಆವೃತ್ತಿಗೆ ಗುಡ್ಬೈ ಹೇಳಿತು. ಈ ಪಂದ್ಯ ಮುಗಿದ ಬಳಿಕ ಸಿಎಸ್ಕೆಗೆ ಸುರೇಶ್ ರೈನಾ ಅವರೇ ಬ್ಯಾಟಿಂಗ್ ಕೋಚ್ ಆಗಿ ಬರಲಿದ್ದಾರೆಯೇ? ಎಂಬ ಪ್ರಶ್ನೆಯನ್ನು ಚೆನ್ನೈ ಫ್ರಾಂಚೈಸಿಯ ಸಹಾಯಕ ಕೋಚ್, ಶ್ರೀಧರನ್ ಶ್ರೀರಾಮ್ಗೆ ಕೇಳಲಾಯಿತು. ಈ ಪ್ರಶ್ನೆ ತನ್ನ ಕಡೆ ಬರುತ್ತಿದ್ದಂತೆ ಶ್ರೀಧರನ್ ಉತ್ತರಿಸಲು ನಿರಾಕರಿಸಿದರು.
ಇನ್ನು ಮಾಜಿ ಕ್ರಿಕೆಟಿಗರಾದ ಆಕಾಶ್ ಚೋಪ್ರಾ, ಸಂಜಯ್ ಬಂಗಾರ್ ಜೊತೆ ಕ್ರಿಕೆಟ್ ಚರ್ಚೆಯಲ್ಲಿ ಭಾಗಿಯಾಗಿದ್ದ ಸುರೇಶ್ ರೈನಾ, ಸಿಎಸ್ಕೆಯ ಮುಂದಿನ ಬ್ಯಾಟಿಂಗ್ ಕೋಚ್ ಹೆಸರು ‘S’ ಅಕ್ಷರದಿಂದ ಶುರುವಾಗಲಿದೆ ಎಂಬ ಸುಳಿವು ಬಿಟ್ಟುಕೊಟ್ಟರು. ಇದಕ್ಕೆ ಉತ್ತರಿಸಿದ ಚೋಪ್ರಾ, 'ಹಾಗಿದ್ರೆ, ನಮಗೆ ಉತ್ತರ ಸಿಕ್ಕಂತಾಯಿತು?' ಎಂದು ಹೇಳಿದರು. ರೈನಾ ಹೇಳಿಕೆ ಸದ್ಯ ಹಲವರ ಕುತೂಹಲಕ್ಕೆ ಕಾರಣವಾಗಿದೆ.
2018ರಿಂದ ಸಿಎಸ್ಕೆ ತಂಡದ ಬ್ಯಾಟಿಂಗ್ ಕೋಚ್ ಆಗಿ ಮೈಕ್ ಹಸ್ಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಿರುವಾಗ ಅವರನ್ನು ಫ್ರಾಂಚೈಸಿ ಮುಂದಿನ ಆವೃತ್ತಿಯಿಂದ ಕೈಬಿಟ್ಟು, ರೈನಾಗೆ ಅವಕಾಶ ನೀಡಲಿದೆಯಾ ಎಂಬುದನ್ನು ತಿಳಿಯಲು ಇನ್ನೂ ಬಹಳ ಸಮಯವಿದೆ,(ಏಜೆನ್ಸೀಸ್).