VIDEOS: ಕ್ರಿಕೆಟಿಗೂ ಸೈ, ಅಡುಗೆಗೂ ಸೈ..ಈ ಸ್ಟಾರ್​ ಕ್ರಿಕೆಟರ್ಸ್​

suresh raina and harbhajan singh for web
Published on

ಮುಂಬೈ: ಹಿರಿಯರ ಕ್ರಿಕೆಟಿಗರಾದ ಹರ್ಭಜನ್​ ಸಿಂಗ್​ ಹಾಗೂ ಸುರೇಶ್​ ರೈನಾ ತಮ್ಮದೆ ಶೈಲಿಯಲ್ಲಿ ಬ್ಯಾಟಿಂಗ್​, ಬೌಲಿಂಗ್​ನಿಂದ ಮೈದಾನದಲ್ಲಿ ಅಭಿಮಾನಿಗಳನ್ನು ರಂಜಿಸುವುದನ್ನು ನೋಡಿದ್ದೇವೆ. ಈ ಸ್ಟಾರ್​ ಕ್ರಿಕೆಟರ್ಸ್​ ಕ್ರಿಕೆಟ್​ನಿಂದ ಬಿಡುವು ಸಿಕ್ಕಾಗ ಅಡುಗೆ ಮನೆಯಲ್ಲಿ ತಮ್ಮ ಕೈಚಳಕ ತೋರುತ್ತಾರೆ. ಬಗೆ ಬಗೆಯ ಅಡುಗೆಗಳನ್ನು ತಯಾರಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ.

ಸುರೇಶ್​ ರೈನಾ ಹಾಗೂ ಹರ್ಭಜನ್​ ಸಿಂಗ್​ ತಮ್ಮ ಪ್ರಾಂತ್ಯದ ವಿವಿಧ ಭಕ್ಷ್ಯ-ಭೋಜನಗಳನ್ನು ತಯಾರಿಸಿ ಮನೆಮಂದಿಯೊಂದಿಗೆ ಕುಳಿತು ಸವಿಯುತ್ತಾರೆ. ಶುಕ್ರವಾರ ಬೆಳ್ಳಂಬೆಳಗ್ಗೆ ಹರ್ಭಜನ್​ ಸಿಂಗ್​, ಪಂಜಾಬಿ ಶೈಲಿ ಚೋಲೆ ತಯಾರಿಸಿ ಇನ್​ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ. ಅಡುಗೆ ತಯಾರಿಗೂ ಮುನ್ನವೇ ತಾವೇ ತರಕಾರಿಗಳನ್ನು ಕಟ್​ ಮಾಡಿಕೊಂಡು, ಅಡುಗೆ ಮಾಡಲು ಸಿದ್ಧರಾಗುತ್ತಾರೆ. ಈ ಜೋಡಿಯ ಅಡುಗೆ ತಯಾರಿಕೆಗೆ ಸಾವಿರಾರು ಮಂದಿ ಫಿದಾ ಆಗಿದ್ದಾರೆ.

ಸದ್ಯ ಕ್ರಿಕೆಟ್​ನಿಂದ ಬಿಡುವಿನಲ್ಲಿರುವ ಈ ಕ್ರಿಕೆಟಿಗರು ಸೆಪ್ಟೆಂಬರ್​-ಅಕ್ಟೋಬರ್​ನಲ್ಲಿ ಯುಎಇಯಲ್ಲಿ ನಡೆಯಲಿರುವ ಐಪಿಎಲ್​-14ರ ಭಾಗ-2ಕ್ಕೆ ಸಿದ್ಧಗೊಳ್ಳುತ್ತಿದ್ದಾರೆ. ಸುರೇಶ್​ ರೈನಾ ಸಿಎಸ್​ಕೆ ಪರ ಹಾಗೂ ಹರ್ಭಜನ್​ ಸಿಂಗ್​ ಕೆಕೆಆರ್​ ಪರ ಕಣಕ್ಕಿಳಿಯಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net