ಕೊಲಂಬೊದಲ್ಲೇ ಸೂಪರ್-4 ಪಂದ್ಯಗಳು: ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾಗೆ ಆರಂಭಿಕ ಆಘಾತ

New Project (29)
Published on

ಕೊಲಂಬೊ: ಏಷ್ಯಾಕಪ್‌ನ ಸೂಪರ್-4 ಹಾಗೂ ಫೈನಲ್ ಪಂದ್ಯಗಳನ್ನು ವೇಳಾಪಟ್ಟಿಯಲ್ಲಿರುವಂತೆ ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲೇ ನಡೆಸಲಾಗುವುದು ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಖಚಿತ ಪಡಿಸಿದೆ. ಕೊಲಂಬೊದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾದ ಹಿನ್ನೆಲೆಯಲ್ಲಿ ಅಲ್ಲಿ ನಿಗದಿಯಾಗಿದ್ದ ಎಲ್ಲ 6 ಪಂದ್ಯಗಳನ್ನು ಹಂಬಂತೋಟಾಗೆ ಸ್ಥಳಾಂತರಿಸುವ ಸಾಧ್ಯತೆಗಳಿವೆ ಎಂದು ವರದಿಯಾಗಿತ್ತು. ಆದರೆ ಇದೀಗ ಕೊಲಂಬೊದಲ್ಲಿ ವಾತಾವರಣ ಸುಧಾರಿಸಿದ್ದು, ಪಂದ್ಯ ಆಯೋಜಿಸಲು ಸೂಕ್ತ ಪರಿಸ್ಥಿತಿ ನಿರ್ಮಾಣವಾದ ಕಾರಣ ಎಸಿಸಿ ಗೊಂದಲಗಳಿಗೆ ತೆರೆ ಎಳೆದಿದೆ. ಇದಲ್ಲದೆ, ಪಂದ್ಯಗಳನ್ನು ದಿಢೀರ್ ಸ್ಥಳಾಂತರ ಮಾಡುವುದರಿಂದ ಟೂರ್ನಿಯ ನೇರಪ್ರಸಾರಕ್ಕೆ ಬೇಕಾಗುವ ಸಾಮಾಗ್ರಿ ಹಾಗೂ ಸಿಬ್ಬಂದಿಯನ್ನು ಕಳುಹಿಸುವುದು ಕಷ್ಟ ಸಾಧ್ಯ ಎಂದು ಪ್ರಸಾರಕರು ತಿಳಿಸಿದ್ದರು ಎನ್ನಲಾಗಿದೆ.

ಸೂಪರ್-4 ಹಂತದ ಮೊದಲ ಪಂದ್ಯದಲ್ಲಿ ಜಂಟಿ ಆತಿಥೇಯ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಲಾಹೋರ್‌ನಲ್ಲಿ ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಬಾಂಗ್ಲಾ ನಾಯಕ ಶಕೀಬ್ ಅಲ್ ಹಸನ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

ಮೊದಲು ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾ ಆರಂಭಿಕ ಮೊಹಮದ ನಯೀಮ್ (20), ಮೆಹಿದಿ ಹಸನ್ ಮಿರಾಜ್ (0), ಅನಾರೋಗ್ಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿರುವ ಲಿಟನ್ ದಾಸ್ (16) ಹಾಗೂ ತೌಹಿದ್ ಹೃದಯ್ (2) ವಿಕೆಟ್ ಕಳೆದುಕೊಂಡು 10 ಓವರ್‌ಗಳಲ್ಲಿ 49 ರನ್‌ಗಳಿಸಿ ಆರಂಭಿಕ ಆಘಾತ ಎದುರಿಸಿದೆ.

ಪಾಕ್ ಪರ ಹ್ಯಾರಿಸ್ ರೌಫ್ 2, ಶಾಹಿನ್ ಷಾ ಅಫ್ರಿದಿ ಹಾಗೂ ನಸೀಮ್ ಷಾ ತಲಾ 1 ವಿಕೆಟ್ ಕಬಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net