VIDEO| ವೈರಲ್​ ಆಯ್ತು ರಶೀದ್​ ಖಾನ್​ ಟೆನ್ನಿಸ್​ ಬಾಲ್​ ಹೆಲಿಕಾಪ್ಟರ್​ ಶಾಟ್!​

Rashid Khan
Published on

ನವದೆಹಲಿ: ಹೆಲಿಕಾಫ್ಟರ್​ ಶಾಟ್​ ಎಂದಾಗ ತಕ್ಷಣ ನಮ್ಮ ತಲೆಗೆ ಬರುವುದು ಕೂಲ್​ ಕ್ಯಾಪ್ಟನ್​ ಖ್ಯಾತಿಯ ಎಂ.ಎಸ್​. ಧೋನಿ. ಕ್ರಿಕೆಟ್​ ಲೋಕದ ಪವರ್​ಫುಲ್​ ಹೊಡೆತ ಧೋನಿಯವರ ಟ್ರೇಡ್​ ಮಾರ್ಕ್​ ಆಗಿಬಿಟ್ಟಿದೆ.

ಕ್ರಿಕೆಟ್​ ಜಗತ್ತಿನ ಅನೇಕರು ಆಗಾಗ ಇದರ ಪ್ರಯತ್ನ ಮಾಡುತ್ತಿರುತ್ತಾರೆ. ಇದೀಗ ಅಫ್ಘಾನಿಸ್ತಾನದ ಆಟಗಾರ ರಶೀದ್​ ಖಾನ್​ ಅವರು ಸಹ ಹೆಲಿಕಾಪ್ಟರ್​ ಶಾಟ್​ ಪ್ರಯತ್ನ ಮಾಡಿದ್ದು, ವಿಡಿಯೋ ವೈರಲ್​ ಆಗಿದೆ.

ಮಹಾಮಾರಿ ಕರೊನಾ ವೈರಸ್​ನಿಂದ ಸ್ಥಗಿತವಾಗಿದ್ದ ಕ್ರಿಕೆಟ್​ ಚಟುವಟಿಕೆಗಳು ಮತ್ತೆ ಗರಿ ಬಿಚ್ಚಿಕೊಳ್ಳುತ್ತಿವೆ. ಐಪಿಎಲ್​ಗೂ ದಿನಾಂಕ ನಿಗದಿಯಾಗಿದೆ. ಇದರ ನಡುವೆ ಸನ್​ ರೈಸರ್ಸ್​ ಹೈದರಾಬಾದ್​ ತಂಡವು ರಶೀದ್​ ಅವರ ಹೆಲಿಕಾಪ್ಟರ್​ ಹೊಡೆತದ ವಿಡಿಯೋವನ್ನು ಶೇರ್​ ಮಾಡಿಕೊಂಡಿದೆ.

ವಿಡಿಯೋದಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟಿರುವ ರಶೀದ್​​, ಟೆನ್ನಿಸ್​ ಬಾಲ್​ನಲ್ಲಿ ಹೆಲಿಕಾಪ್ಟರ್​ ಶಾಟ್ ಹೊಡೆದಿದ್ದಾರೆ. ಈ ವಿಡಿಯೋ ವೈರಲ್​ ಆಗಿದ್ದು, ಈಗಾಗಲೇ 34 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ.

ಅಂದಹಾಗೆ ಎಸ್​ಆರ್​ಎಚ್​ ತಂಡದ ಪ್ರಮುಖ ಆಟಗಾರರಾಗಿರುವ ರಶೀದ್​ ಈವರೆಗೂ 46 ಪಂದ್ಯಗಳನ್ನಾಡಿ 6.55 ಎಕಾನಮಿಯಲ್ಲಿ 55 ವಿಕೆಟ್ ಗಳಿಸಿದ್ದಾರೆ. 2017ರಿಂದ ಐಪಿಎಲ್​ನಲ್ಲಿ ರಶೀದ್​ ತೊಡಗಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net