ವಿಂಡೀಸ್​ ಪರ ಕೊನೇ ಪಂದ್ಯವಾಡಿ 4 ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಸುನೀಲ್​ ನಾರಾಯಣ್​ ವಿದಾಯ

naraine web
Published on

ಕಿಂಗ್​ಸ್ಟನ್​: ವೆಸ್ಟ್​ ಇಂಡೀಸ್​ ಸ್ಪಿನ್ನರ್​ ಸುನೀಲ್​ ನಾರಾಯಣ್​ ಭಾನುವಾರ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಅಧಿಕೃತ ವಿದಾಯ ಘೋಷಿಸಿದ್ದಾರೆ. ನಾರಾಯಣ್​ 2019ರ ಆಗಸ್ಟ್​ನಲ್ಲಿ ಕೊನೆಯದಾಗಿ ವೆಸ್ಟ್​ ಇಂಡೀಸ್​ ಪರ ಆಡಿದ್ದರು.

"ನಾನು ವಿಂಡೀಸ್​ ಪರ ಕೊನೇ ಪಂದ್ಯ ಆಡಿ 4 ವರ್ಷಗಳೇ ಕಳೆದಿವೆ. ಆದರೆ ಇಂದು ನಾನು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಪ್ರಕಟಿಸುತ್ತಿದ್ದೇನೆ' ಎಂದು 35 ವರ್ಷದ ನಾರಾಯಣ್​ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. 2011ರ ಚಾಂಪಿಯನ್ಸ್​ ಲೀಗ್​ ಟಿ20 ಟೂರ್ನಿಯಲ್ಲಿ ಟ್ರಿನಿಡಾಡ್​-ಟೊಬಾಗೊ ಪರ ಮಿಂಚುವ ಮೂಲಕ ಸುನೀಲ್​ ನಾರಾಯಣ್​ ಎಲ್ಲರ ಗಮನಸೆಳೆದಿದ್ದರು. ಬಳಿಕ ಅದೇ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು.

ವಿಂಡೀಸ್​ ಪರ ಅವರು ಒಟ್ಟು 122 ಅಂತಾರಾಷ್ಟ್ರೀಯ ಪಂದ್ಯ ಆಡಿದ್ದಾರೆ. ಈ ಪೈಕಿ 6 ಟೆಸ್ಟ್​, 65 ಏಕದಿನ ಮತ್ತು 51 ಟಿ20 ಪಂದ್ಯಗಳು ಸೇರಿದ್ದು, ಕ್ರಮವಾಗಿ 21, 92 ಮತ್ತು 52 ವಿಕೆಟ್​ ಕಬಳಿಸಿದ್ದಾರೆ. 2012ರಲ್ಲಿ ಮೊದಲ ಬಾರಿ ಟಿ20 ವಿಶ್ವಕಪ್​ ಗೆದ್ದ ವಿಂಡೀಸ್​ ತಂಡದ ಭಾಗವೂ ಆಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net