ಸ್ಟಾರ್ ಆಟಗಾರ ಮೆಸ್ಸಿ ದಾಖಲೆ ಸರಿಗಟ್ಟಿದ ಸುನೀಲ್ ಛೇಟ್ರಿ

sunil and messi for web
Published on

ಮಾಲೆ: ಭಾರತ ಫುಟ್‌ಬಾಲ್ ತಂಡದ ನಾಯಕ ಸುನೀಲ್ ಛೇಟ್ರಿ, 80ನೇ ಗೋಲು ಸಿಡಿಸುವ ಮೂಲಕ ಅರ್ಜೆಂಟೀನಾದ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ದಾಖಲೆಯನ್ನು ಸರಿಗಟ್ಟಿದರು. ಅಂತಾರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಅತಿಹೆಚ್ಚು ಗೋಲು ದಾಖಲಿಸಿದ ಆಟಗಾರರ ಪೈಕಿ ಜಂಟಿ ಅಗ್ರಸ್ಥಾನ ಹಂಚಿಕೊಂಡರು. ಶನಿವಾರ ನಡೆದ ಸ್ಯಾಫ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಗೋಲು ದಾಖಲಿಸುವ ಮೂಲಕ ಛೇಟ್ರಿ ಈ ಸಾಧನೆ ಮಾಡಿದರು.

ಭಾರತ ಫುಟ್‌ಬಾಲ್ ತಂಡ 8ನೇ ಬಾರಿಗೆ ಸ್ಯಾಫ್ ಟ್ರೋಫಿ ಗೆದ್ದುಕೊಂಡಿತು. ಫೈನಲ್ ಹಣಾಹಣಿಯಲ್ಲಿ ಸುನೀಲ್ ಛೇಟ್ರಿ ಬಳಗ 3-0 ಗೋಲುಗಳಿಂದ ನೇಪಾಳ ತಂಡವನ್ನು ಮಣಿಸಿತು. 13ನೇ ಆವೃತ್ತಿಯ ಟೂರ್ನಿಯಲ್ಲಿ 12ನೇ ಫೈನಲ್ ಪಂದ್ಯವಾಡಿದ ಭಾರತ ತಂಡ ದಕ್ಷಿಣ ಏಷ್ಯಾ ವಲಯದಲ್ಲಿ ತನ್ನ ಪ್ರಾಬಲ್ಯ ಮುಂದುವರಿಸಿತು. ಈ ಮೂಲಕ ಇಗೊರ್ ಸ್ಟಿಮ್ಯಾಕ್ ಮಾರ್ಗದರ್ಶನದಲ್ಲಿ ಭಾರತ ತಂಡ ಜಯಿಸಿದ ಮೊದಲ ಅಂತಾರಾಷ್ಟ್ರೀಯ ಪ್ರಶಸ್ತಿ ಇದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net